ವೈಶಾಖ- ಕೌಶಿಕ್ ದಾಳಿಗೆ ತತ್ತರಿಸಿದ ರಾಜಸ್ಥಾನ

ಮಧ್ಯಮವೇಗಿ ವೈಶಾಖ ವಿಜಯಕುಮಾರ್ ಮತ್ತು ವಿ. ಕೌಶಿಕ್ ಅವರ ಅಮೋಘ ದಾಳಿಯ ಮುಂದೆ ರಾಜಸ್ಥಾನ ತಂಡವು ಕುಸಿಯಿತು.ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಸಿ ಗುಂಪಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ರಾಜಸ್ಥಾನ ತಂಡವು 45.3 ಓವರ್‌ಗಳಲ್ಲಿ 129 ರನ್ ಗಳಿಸಿ ಆಲೌಟ್ ಆಯಿತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ರವಾಸಿ ಬಳಗಕ್ಕೆ ಆತಿಥೇಯ ತಂಡದ ವೇಗಿ ವಿದ್ವತ್ ಕಾವೇರಪ್ಪ ಮೊದಲ ಓವರ್‌ನಲ್ಲಿಯೇ ಪೆಟ್ಟು ಕೊಟ್ಟರು. ಆರಂಭಿಕ ಬ್ಯಾಟರ್ ಯಶ್ ಕೊಠಾರಿ ಅವರು ಗೌತಮ್‌ಗೆ ಕ್ಯಾಚಿತ್ತರು. ತಂಡ ಹಾಗೂ ಕೊಠಾರಿ ಇಬ್ಬರೂ ಖಾತೆ ತೆರೆದಿರಲಿಲ್ಲ.ನಾಲ್ಕು ಓವರ್‌ಗಳ ನಂತರ ಕೌಶಿಕ್ ಎಸೆತದಲ್ಲಿ ಅನುಭವಿ ಲೊಮ್ರೊರ್ ವಿಕೆಟ್ ಕಬಳಿಸಿದರು. ತಮ್ಮ ಎರಡನೇ ಸ್ಪೆಲ್‌ನಲ್ಲಿಯೂ ವಿದ್ವತ್ ವಿಕೆಟ್ ಬೇಟೆಯಾಡಿದರು.ಅವರು ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಆದಿತ್ಯ ಬಿದ್ದರು.ಈ ನಡುವೆಯೂ ಇನ್ನೊಂದೆಡೆ ನೆಲಕಚ್ಚಿ ಆಡುತ್ತಿದ್ದ ಕುನಾಲ್ ಸಿಂಗ್ ರಾಥೋಡ್ (33; 54ಎ, 4X5, 6X1) ಅವರ ವಿಕೆಟ್ ಗಳಿಸುವ ಮೂಲಕ ವೈಶಾಖ ತಮ್ಮ ಖಾತೆ ತೆರೆದರು.ಇದರಿಂದಾಗಿ ಭೋಜನ ವಿರಾಮಕ್ಕೆ ರಾಜಸ್ಥಾನ ತಂಡವು 84 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡಿತ್ತು. ನಂತರದ ಅವಧಿಯಲ್ಲಿ ರಾಜಸ್ಥಾನ ತಂಡದ ಪತನಕ್ಕೆ ವೈಶಾಖ ಮತ್ತು ಕೌಶಿಕ್ ‘ಜೊತೆಯಾಟ’ ಕಾರಣವಾಯಿತು.ತಂಡದ ಮೊತ್ತಕ್ಕೆ 45 ರನ್‌ಗಳು ಸೇರುವಷ್ಟರಲ್ಲಿ ಆರು ವಿಕೆಟ್‌ಗಳು ಪತನವಾದವು. ಚಹಾ ವಿರಾಮಕ್ಕೆ ಮುನ್ನವೇ ರಾಜಸ್ಥಾನ ತಂಡದ ಮೊದಲ ಇನಿಂಗ್ಸ್‌ಗೆ ತೆರೆಬಿತ್ತು.ಪಡಿಕ್ಕಲ್ ಇನ್: ಅನಾರೋಗ್ಯದಿಂದ ಗುಣಮುಖರಾಗಿ ಮರಳಿರುವ ದೇವದತ್ತ ಪಡಿಕ್ಕಲ್ ಅವರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ನೀಡಲಾಯಿತು. ಇದಕ್ಕಾಗಿ ವಿಶಾಲ್ ಒಣತ್ ಅವರನ್ನು ಕೈಬಿಡಲಾಗಿದೆ. ಹೋದ ಪಂದ್ಯದಲ್ಲಿ ಗಾಯಗೊಂಡಿದ್ದ ವಿಕೆಟ್‌ಕೀಪರ್ ಬಿ.ಆರ್. ಶರತ್‌ಗೆ ವಿಶ್ರಾಂತಿ ನೀಡಿ, ಶರತ್ ಶ್ರೀನಿವಾಸ್ ಅವರಿಗೆ ಆಡುವ ಅವಕಾಶ ನೀಡಲಾಯಿತು.ಜೇನು ದಾಳಿ ಆಲೂರು ಕ್ರೀಡಾಂಗಣ ದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದ ಸಂದರ್ಭದಲ್ಲಿ ಜೇನುನೋಣಗಳ ದಂಡಿನಿಂದ ರಕ್ಷಿಸಿಕೊಳ್ಳಲು ಆಟಗಾರರು ನೆಲದ ಮೇಲೆ ಕೆಲಹೊತ್ತು ಬೋರಲಾಗಿ ಒರಗಿದ ಘಟನೆ ನಡೆಯಿತು. ಜೇನು ಹುಳಗಳು ಚದುರಿದ ನಂತರ ಆಟ ಮುಂದುವರೆಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ನಾಮಕರಣಗೊಂಡಿದೆ.

Tue Jan 10 , 2023
ಬೆಂಗಳೂರು:ಕಳೆದ ವರ್ಷ ಕನ್ನಡದಲ್ಲಿ ಬಿಡುಗಡೆಯಾದ ಗಮನ ಸೆಳೆದ ಚಲನಚಿತ್ರಗಳಲ್ಲಿ ಒಂದಾದ, ಕಿಚ್ಚ ಸುದೀಪ್‌ ನಟನೆಯ ʼವಿಕ್ರಾಂತ್‌ ರೋಣʼ ಸಿನಿಮಾ ಆಸ್ಕರ್‌ ಪ್ರಶಸ್ತಿ ಸ್ಪರ್ಧೆಗೆ ನಾಮಕರಣಗೊಂಡಿದೆ. ಆಸ್ಕರ್‌ ಪ್ರಶಸ್ತಿಗೆ ಸ್ಪರ್ಧಾರ್ಹತೆಯನ್ನು ಕನ್ನಡದಲ್ಲಿ ಎರಡು ಫಿಲಂಗಳು ಗಳಿಸಿಕೊಂಡಿದ್ದು, ಇನ್ನೊಂದು ರಿಷಬ್‌ ಶೆಟ್ಟಿ ನಟನೆಯ ಕಾಂತಾರ. ವಿಕ್ರಾಂತ್‌ ರೋಣ ಸಿನಿಮಾವವನ್ನು ನಿರೂಪ್‌ ಭಂಡಾರಿ ನಿರ್ಮಿಸಿ ನಿರ್ದೇಶಿಸಿದ್ದರು. ಇದು ಆಸ್ಕರ್‌ಗೆ ಸ್ಪರ್ಧೆಗೆ ತೆರಳಿದ ನಿರೂಪ್‌ ಅವರ ಎರಡನೇ ಫಿಲಂ ಆಗಿದೆ. 2016ರಲ್ಲಿ ಅವರ ʼರಂಗಿತರಂಗʼ ಆಯ್ಕೆಯಾಗಿತ್ತು. […]

Advertisement

Wordpress Social Share Plugin powered by Ultimatelysocial