ಲಂಕಾ ವಿರುದ್ಧದ ಎರಡನೇ ಟೆಸ್ಟ್‌ಗೆ ತಂಡ ಸೇರಿದ ಆಲ್ ರೌಂಡರ್ ಅಕ್ಷರ್ ಪಟೇಲ್

ಬೆಂಗಳೂರು: ಗಾಯದ ಕಾರಣದಿಂದ ತಂಡದಿಂದ ಹೊರಬಿದ್ದಿದ್ದ ಆಲ್ ರೌಂಡರ್ ಅಕ್ಷರ್ ಪಟೇಲ್ ಇದೀಗ ಮತ್ತೆ ತಂಡ ಕೂಡಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯಕ್ಕಾಗಿ ಅಕ್ಷರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

 

ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಅಕ್ಷರ್ ಪಟೇಲ್ ಅವರನ್ನು ಮಾರ್ಚ್ 12-16 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಎರಡನೇ ಟೆಸ್ಟ್‌ಗೆ ಭಾರತ ತಂಡಕ್ಕೆ ಸೇರಿಸಿದೆ.

ಅವರು ತಮ್ಮ ರಿಹ್ಯಾಬಿಟೇಶನ್ ಪೂರ್ಣಗೊಳಿಸಿದ್ದಾರೆ. ಬಿಸಿಸಿಐ ವೈದ್ಯಕೀಯ ತಂಡದಿಂದ ಅನುಮತಿ ಪಡೆದಿದ್ದಾರೆ” ಎಂದು ಹೇಳಿಕೆ ತಿಳಿಸಿದೆ.

ಇದೇ ವೇಳೆ ಕುಲದೀಪ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ತಂಡಕ್ಕೆ ಮೂರು ಮಂದಿ ಎಡಗೈ ಸ್ಪಿನ್ನರ್‌ ಅಗತ್ಯವಿಲ್ಲ ಎಂದು ಆಡಳಿತ ಮಂಡಳಿ ನಿರ್ಧರಿಸಿದ ಕಾರಣ ಕುಲದೀಪ್‌ ಯಾದವ್‌ ಹೊರಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.

 ಅಕ್ಷರ್‌ ಕಳೆದ ವರ್ಷ ಕಿವೀಸ್‌ ವಿರುದ್ಧ ತವರಿನಲ್ಲಿ ಆಡಿದ್ದರು. 2 ಪಂದ್ಯಗಳಿಂದ 9 ವಿಕೆಟ್‌ ಕೆಡವಿದ್ದರು. ಅನಂತರ ಗಾಯಾಳಾಗಿ ತಂಡದಿಂದ ಬೇರ್ಪಟ್ಟಿದ್ದರು. ಸದ್ಯ ಜಡೇಜ ಮತ್ತು ಅಶ್ವಿ‌ನ್‌ ಘಾತಕವಾಗಿ ಪರಿಣಮಿಸುತ್ತಿದ್ದಾರೆ. ಇವರ ಪರಾಕ್ರಮಕ್ಕೆ ಮೊಹಾಲಿ ಟೆಸ್ಟ್‌ ಪಂದ್ಯವೇ ಸಾಕ್ಷಿ. ಬೆಂಗಳೂರಿನಲ್ಲಿ ನಡೆಯುವ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಅಕ್ಷರ್‌ ಆಡುವ ಸಾಧ್ಯತೆ ಹೆಚ್ಚಿದೆ.

ಎರಡನೇ ಟೆಸ್ಟ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಪ್ರಿಯಾಂಕ್ ಪಾಂಚಾಲ್, ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಶುಭ್ಮನ್ ಗಿಲ್, ರಿಷಬ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಆರ್. ಸೌರಭ್ ಕುಮಾರ್, ಮೊ. ಸಿರಾಜ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅಕ್ಷರ್ ಪಟೇಲ್.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳಾ ದಿನಾಚರಣೆ 2022: ಹೃದ್ರೋಗವು 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಸಾವಿಗೆ ಪ್ರಮುಖ ಕಾರಣವಾಗಿದೆ;

Tue Mar 8 , 2022
ಮಹಿಳೆಯರು ವಿಶೇಷವಾಗಿ ದೈಹಿಕ ನಿಷ್ಕ್ರಿಯತೆಗೆ ಒಳಗಾಗುತ್ತಾರೆ, ನಿಯಮಿತ ಚಟುವಟಿಕೆಯು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. (ಫೋಟೋ ಕ್ರೆಡಿಟ್: ವಿಕಿಮೀಡಿಯಾ) ಹೃದ್ರೋಗವು 40 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಸಾವಿಗೆ ಪ್ರಮುಖ ಕಾರಣವಾಗಿದೆ, ವಿಶೇಷವಾಗಿ ಋತುಬಂಧವನ್ನು ತಲುಪಿದವರಲ್ಲಿ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ 30-69 ವರ್ಷ ವಯಸ್ಸಿನ 56 ಪ್ರತಿಶತದಷ್ಟು ಮಹಿಳೆಯರು ಹೃದಯ-ರೋಗ ಸಂಬಂಧಿತ ಮರಣಕ್ಕೆ ಬಲಿಯಾಗುತ್ತಾರೆ. ಋತುಬಂಧವು ಸಾಮಾನ್ಯವಾಗಿ ಸುಮಾರು 50-55 ವರ್ಷಗಳು ಅಥವಾ ಅದಕ್ಕಿಂತ ಮೊದಲು ಸಂಭವಿಸುತ್ತದೆ ಮತ್ತು ಪೆರಿಮೆನೋಪಾಸ್ ಹಂತದಿಂದ […]

Advertisement

Wordpress Social Share Plugin powered by Ultimatelysocial