ಆರೋಗ್ಯ ಇಲಾಖೆ ನೇಮಕಾತಿ; ಮಾರ್ಚ್ 21ರಂದು ನೇರ ಸಂದರ್ಶನ

ಆರೋಗ್ಯ  ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯಲ್ಲಿ ಎನ್‌. ಹೆಚ್. ಎಂ ಅಡಿಯಲ್ಲಿ ನಡೆಸಲಾಗುತ್ತಿರುವ ತರಬೇತಿ ಕಾರ್ಯಕ್ರಮಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತದೆ.ಇದಕ್ಕಾಗಿ ಮಾರ್ಚ್ 21ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆಯ ಆಡಳಿತ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 12 ಗಂಟೆಯ ತನಕ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತಮ್ಮ ಮೂಲ ದಾಖಲೆಗಳ ಜೊತೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.ಹುದ್ದೆಗಳ ವಿವರಗಳು; ಪಿ. ಜಿ. ಹೆಚ್. ಪಿ. ಇ. ಕೋರ್ಸ್ ತರಬೇತಿಗೆ 1 ಸಂವಹನ ಬೋಧಕ ಹುದ್ದೆಗೆ ನೇಮಕಾತಿ ನಡೆಯುತ್ತಿದೆ. ಅಭ್ಯರ್ಥಿಗಳಿಗೆ ವೇತನ 42,000 ರೂ.ಗಳು. ಅಭ್ಯರ್ಥಿಗಳು 3 ರಿಂದ 5 ವರ್ಷಗಳ ಕಾಲ ಸ್ನಾತಕೋತ್ತರ ಪದವೀಧರರಿಗೆ ಬೋಧನೆ ಮಾಡಿರುವ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 65 ವರ್ಷದೊಳಗಿರಬೇಕು.ನಿಪುಣ ಕೌಶಲ್ಯ ಪ್ರಯೋಗಾಲಯ1 , ನಿಪುಣ ಕೌಶಲ್ಯ ಪ್ರಯೋಗಾಲಯ 1 (ಜಯನಗರ ಜನರಲ್ ಆಸ್ಪತ್ರೆ) ವೈದ್ಯಾಧಿಕಾರಿ ತರಬೇತಿದಾರರ ಹುದ್ದೆಗೆ ಸಹ ನೇರ ಸಂದರ್ಶನ ನಡೆಯಲಿದೆ. ಆರೋಗ್ಯ ಇಲಾಖೆಯಲ್ಲಿ 5 ವರ್ಷ ಸೇವೆ ಮಾಡಿದ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 65 ವರ್ಷಗಳು.ಸಿ. ಪಿ. ಹೆಚ್. ಎನ್. ಕೋರ್ಸ್ ಪ್ರೋಗ್ರಾಮ್‌ ಅಸಿಸ್ಟೆಂಟ್ ಕಮ್ ವಾರ್ಡನ್ 1 ಹುದ್ದೆ. ಮಾಸಿಕ ವೇತನ 20 ಸಾವಿರ ರೂ.ಗಳು. ಅಭ್ಯರ್ಥಿಗಳು ಮೂರು ವರ್ಷದ ಅನುಭವ ಹೊಂದಿರಬೇಕು. ಗರಿಷ್ಠ ವಯೋಮಿತಿ 40 ವರ್ಷಗಳು.ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರೋಗ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಆರೋಗ್ಯ ಇಲಾಖೆ ಲಿಂಕ್ ಒತ್ತುವ ಮೂಲಕ ಇತ್ತೀಚಿನ ಮಾಹಿತಿಗಳನ್ನು ಪಡೆಯಬಹುದಾಗಿದೆ. ಕಚೇರಿಯ ಕೆಲಸದ 10 ರಿಂದ 5ರ ಸಮಯದಲ್ಲಿ ದೂರವಾಣಿ ಸಂಖ್ಯೆ 080-23206125/26 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

 

ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕ; ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ) ವೃಂದದ 5000 ಹುದ್ದೆಗಳು ಹಾಗೂ ಉಳಿಕೆ ವೃಂದದ 10,000 ಒಟ್ಟಾರೆ 15,000 ಹುದ್ದೆಗಳನ್ನು ಭರ್ತಿ ಮಾಡಲು ಉಲ್ಲೇಖ 2ರ ಸರ್ಕಾರದ ಅನುಮೋದನೆ ನೀಡಲಾಗಿದೆ.

ಸದರಿ ಕಲ್ಯಾಣ ಕರ್ನಾಟಕ 7 ಜಿಲ್ಲೆಗಳಲ್ಲಿನ ಪದವೀಧರ ಪ್ರಾಥಮಿಕ ಶಿಕ್ಷಕ (6 ರಿಂದ 8ನೇ ತರಗತಿಗಳ) ವೃಂದದ 5 ಸಾವಿರ ಹುದ್ದೆಗಳು ಹಾಗೂ ಉಳಿಕೆ ವೃಂದದ 10 ಸಾವಿರ ಒಟ್ಟು 15 ಸಾವಿರ ಹುದ್ದೆಗಳನ್ನು ಜಿಲ್ಲಾವಾರು ಹುದ್ದೆಗಳ ಮರು ಹಂಚಿಕೆ ಉಲ್ಲೇಖ 2 ಏಕ ಕಡತದಲ್ಲಿ ಅನುಮೋದನೆ ಕೋರಿ ಸರ್ಕಾರಕ್ಕೆ ಸಲ್ಲಿಸಿ ಅನುಮೋದನೆ ನಿರೀಕ್ಷಿಸಿದೆ.

ಅನುಮೋದನೆಯನ್ನು ನಿರೀಕ್ಷಿಸಿ ಪ್ರಸ್ತುತ ಜಿಲ್ಲಾವಾರು/ ವಿಯಷವಾರು ಹುದ್ದೆಗಳ ಜಿಲ್ಲಾ ಹಂಚಿಕೆಯನ್ನು ಅನುಬಂಧದಲ್ಲಿ ಲಗತ್ತಿಸಿದೆ. ಜಿಲ್ಲೆಗಳಿಗೆ ಹಂಚಿಕೆ ಮಾಡಲಾದ ವಿಷಯವಾರು/ ಹುದ್ದೆಗಳಿಗೆ ಅನುಗುಣವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು (ಆಡಳಿತ) ಕಚೇರಿಯ ನೋಡೆಲ್ ಅಧಿಕಾರಿ ಹಾಗೂ ವಿಷಯ ನಿರ್ವಾಹಕರ ಸಭೆಯನ್ನು ಆಯೋಜಿಸಿ ಸಂಬಂಧಪಟ್ಟ ಜಿಲ್ಲೆಗಳಿಂದ ಸೀಟ್ ಮ್ಯಾಟ್ರಿಕ್ಸ್ ಪಡೆದು ಅತಿ ಶೀಘ್ರವಾಗಿ ಜಿಲ್ಲಾವಾರು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿ ನೇಮಕಾತಿ ಪ್ರಕ್ರಿಯೆ ಮುಂದುವರೆಸುವ ಸಂಬಂಧ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋವಿಡ್ ಪ್ರಭಾವ: ಐಟಿ ಹೊರಗುತ್ತಿಗೆ ಪ್ರಪಂಚದಾದ್ಯಂತ ಹೇಗೆ ಪ್ರವರ್ಧಮಾನಕ್ಕೆ ಬರುತ್ತಿದೆ!

Fri Mar 18 , 2022
ಕೋವಿಡ್ -19 ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ, ಐಟಿ ಹೊರಗುತ್ತಿಗೆ ಬೇಡಿಕೆ ತೀವ್ರಗೊಂಡಿದೆ. ಕ್ಷಿಪ್ರ ಡಿಜಿಟಲೀಕರಣ, ದೀರ್ಘಕಾಲಿಕ ಟೆಕ್ ಟ್ಯಾಲೆಂಟ್ ಕ್ರಂಚ್ ಮತ್ತು ರೊಬೊಟಿಕ್ ಪ್ರೊಸೆಸ್ ಆಟೊಮೇಷನ್ (RPA) ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ನಂತಹ ಮುಂದಿನ-ಜೆನ್ ತಂತ್ರಜ್ಞಾನಗಳ ಏರಿಕೆಯಿಂದಾಗಿ, ಅನೇಕ ಕಂಪನಿಗಳು ಪ್ರಸ್ತುತವಾಗಿ ಉಳಿಯಲು IT ಸೇವೆಗಳನ್ನು ಹೊರಗುತ್ತಿಗೆ ಆಯ್ಕೆ ಮಾಡಿಕೊಳ್ಳುತ್ತಿವೆ. ಅಂಕಿಅಂಶಗಳ ಪ್ರಕಾರ ಜಾಗತಿಕ IT ಹೊರಗುತ್ತಿಗೆ ಮಾರುಕಟ್ಟೆಯು 2020 ರಲ್ಲಿ $ 318.5 ಶತಕೋಟಿ ಮೌಲ್ಯದ್ದಾಗಿದೆ ಮತ್ತು […]

Advertisement

Wordpress Social Share Plugin powered by Ultimatelysocial