ಅಕ್ರಮ ಮರಳು ದಂಧೆಕೋರರಿದ ರೈತನ ಮೇಲೆ ಹಲ್ಲೆ..!

ಯಡ್ರಾಮಿ: ನನ್ನ ಹೊಲದಿಂದ ಮರಳು ಒಯ್ಯಬೇಡಿ ಎಂದು ಹೇಳಿದ್ದಕ್ಕೆ ಮರಳು ದಂಧೆಕೋರರಿಂದ ರೈತನ ಮೇಲೆ ಮರಣಾಂತಿಕ ಹಲ್ಲೇ ಮಾಡಿರುವ ಘಟನೆ ಯತ್ನಾಳ ಗ್ರಾಮದಲ್ಲಿ ನಡೆದಿದೆ.

ಯಡ್ರಾಮಿ ತಾಲೂಕಿನ ಯತ್ನಾಳ ಗ್ರಾಮದ ಮಾನಪ್ಪ ತಳವಾರ ಅವರಿಗೆ ಸೇರಿದ ಜಮೀನಿನ ಹತ್ತಿರದಲ್ಲಿ ಇರುವ ಹಳ್ಳದಿಂದ ಸರಿಸುಮಾರು ಎರಡು ವರ್ಷಗಳದಿಂದ ರೈತನ ಹೊಲದ ಮಾರ್ಗವಾಗಿ ಟ್ರ್ಯಾಕ್ಟರ್ ಮೂಲಕ ಅಕ್ರಮವಾಗಿ ಮರಳು ಸಾಗುಸುತ್ತಿದ್ದರು.

ರೈತನಾದ ಮಾನಪ್ಪ ಅವರು ಪ್ರಭು ಎಂಬುವರನ್ನು ನೀವು ಈ ರೀತಿ ಮರಳು ನನ್ನ ಹೊಲದಿಂದ ಸಾಗಿಸಿದರೆ ಹೇಗೆ ನಾವು ವ್ಯವಸಾಯ ಮಾಡಿ ಬದುಕುವುದು ಎಂದು ಕೇಳಿದ್ದಕ್ಕೆ.

ಇದರಿಂದ ಕೂಪಿತ ಗೊಂಡ ಪ್ರಭು ತಂದೆ ಭೀಮರಾಯ ಕೋಣಶಿರಸಿಗಿ, ಮಾಂತಪ್ಪ ತಂದೆ ಪ್ರಭು ಕೋಣಶಿರಸಿಗಿ, ಭಗವಂತರಾಯ ತಂದೆ ಪ್ರಭು ಕೋಣ ಶಿರಸಿಗಿ, ಅಶೋಕ್ ತಂದೆ ಭೀಮರಾಯ ಕೋಣಶಿರಸಿಗಿ, ಬಸವರಾಜ ತಂದೆ ಮಲ್ಲಣ್ಣ ಕೋಣಶಿರಸಿಗಿ, ಸಂಗಮ್ಮ ಗಂಡ ಪ್ರಭು ಕೋಣಶಿರಸಿಗಿ ಸೇರಿಕೊಂಡು ರೈತನ ಮನೆಗೆ ಬಂದು ಮಾರ್ಕಸ್ತರದಿಂದ ರೈತನ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ.

ನೀನು ಎಲ್ಲಿಗೆ ಹೋಗುತ್ತೀಯ ಹೋಗು ನಮ್ಮನ್ನು ನೀನು ಏನು ಮಾಡಲು ಸಾಧ್ಯವಿಲ್ಲ.

ಪೊಲೀಸರಿಗೆ ಹಣ ಕೊಟ್ಟು ಮರಳು ಸಾಗಿಸುತಿದ್ದೇವೆ ನಮ್ಮನ್ನು ನೀನು ಏನು ಮಾಡಿಕೊಳ್ಳಲು ಆಗುವುದಿಲ್ಲ ಎಂದು ಬಹಿರಂಗವಾಗಿ ಹೇಳುತ್ತಾರೆ ಅಂತೇ.

ಅಂದರೆ ಕಳ್ಳರ ಜೊತೆಗೂಡಿ ಪೊಲೀಸ ಅಧಿಕಾರಿಗಳು ಸೇರಿಕೊಂಡು ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಅನುಮಾನ ಉಂಟು ಮಾಡಿದೇ.

ಯಡ್ರಾಮಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದರು ಇದನ್ನು ಕಡಿವಾಣ ಹಾಕಬೇಕಾಗಿದ ಅಧಿಕಾರಿಗಳು ಕಣ್ಣಿಲ್ಲದ ಕುರುಡನಂತೆ ವರ್ತಿಸುತ್ತಿದ್ದಾರೆ.

ಹಲ್ಲೆಗೆ ಒಳಗಾದ ರೈತನನ್ನು ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ, ಯಡ್ರಾಮಿ ಪೊಲೀಸ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Lauren Berlant, Reside Sex Acts

Fri Apr 14 , 2023
If two women match, then both can message first, but when neither accomplish that within 24 hours, the match additionally disappears. In different phrases, queer girls face this complete other layer of mess in the already messy world of on-line relationship. That’s why HER was created in 2015, and since […]

Advertisement

Wordpress Social Share Plugin powered by Ultimatelysocial