ಭಾರತದ ಧಾರ್ಮಿಕ ಸ್ವಾತಂತ್ರ್ಯದ ಕುರಿತು ಆಸ್ಟ್ರೇಲಿಯಾ ವಿವಿ ವರದಿ!

ಅಂತರಾಷ್ಟ್ರೀಯ ಮಾಧ್ಯಮದ ಒಂದು ವಿಭಾಗಕ್ಕೆ ವಿರುದ್ಧವಾಗಿ, ಆಸ್ಟ್ರೇಲಿಯಾದ ವಿಶ್ವವಿದ್ಯಾನಿಲಯವು ಭಾರತದ ಸಾಮಾಜಿಕ ರಚನೆಯ ಬಗ್ಗೆ ಅತ್ಯಂತ ಸಕಾರಾತ್ಮಕ ವರದಿಯನ್ನು ನೀಡಿದೆ. ಕ್ವಾಡ್ರಾಂಟ್ ಆನ್‌ಲೈನ್‌ನಲ್ಲಿ, ಸಿಡ್ನಿ ವಿಶ್ವವಿದ್ಯಾನಿಲಯದ ಅಸೋಸಿಯೇಟ್ ಪ್ರೊಫೆಸರ್ ಸಾಲ್ವಟೋರ್ ಬಾಬೋನ್ಸ್ ಅವರು, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಜೀವಂತವಾಗಿರುವುದು ಮಾತ್ರವಲ್ಲ, ಆರೋಗ್ಯಕರ ರೂಪದಲ್ಲಿದೆ ಎಂದು ಬರೆದಿದ್ದಾರೆ.

ಪಾಶ್ಚಿಮಾತ್ಯ ದೇಶಗಳ ಷಡ್ಯಂತ್ರವನ್ನೂ ಬಯಲಿಗೆಳೆದ ಅವರು, ಪ್ರಜಾಸತ್ತಾತ್ಮಕ ಭಾರತ ಒಂದು ರೀತಿಯಲ್ಲಿ ಹಿಂದೂ ರಾಷ್ಟ್ರವಾಗಿದೆ ಎಂಬಂತೆ ತೋರಿಸಲಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ, ಅಲ್ಲಿ ವಿಶ್ವದ ಅರ್ಧದಷ್ಟು ಜನರು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳ ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ ಎಂದು ಬಾಬನ್ಸ್‌ ಹೇಳಿದ್ದಾರೆ. ಭಾರತದಲ್ಲಿ ಆಡಳಿತಾರೂಢ ಬಿಜೆಪಿ, ಆರಾಧನೆ ಮತ್ತು ನಂಬಿಕೆಯ ಸ್ವರೂಪಗಳನ್ನು ಗುರುತಿಸುವುದರಿಂದ ಹಿಂದುತ್ವಕ್ಕೆ ಒತ್ತು ನೀಡುತ್ತದೆ ಎಂದು ಕ್ವಾಡ್ರೆಂಟ್ ಆನ್‌ಲೈನ್ ವರದಿ ಮಾಡಿದೆ.

‘ಹಿಂದೂ’ ಮತ್ತು ‘ಭಾರತ’ ಪದಗಳು ಸಂಸ್ಕೃತದಿಂದ ಬಂದಿವೆ’

ಹಿಂದೂ’ ಮತ್ತು ‘ಭಾರತ’ ಪದಗಳು ಮೂಲ ಭಾಷೆ ಸಂಸ್ಕೃತದಿಂದ ಬಂದಿವೆ. ಈ ವರ್ಷದ ಜನವರಿಯಲ್ಲಿ ಬಿಡುಗಡೆಯಾದ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್‌’ 2002ರ ಗುಜರಾತ್ ಗಲಭೆಗಳನ್ನು ತಪ್ಪುದಾರಿಗೆಳೆಯುವ ಸಂಗತಿಗಳೊಂದಿಗೆ ತೋರಿಸಿದೆ. ಈ ವಿವಾದಾತ್ಮಕ ಸಾಕ್ಷ್ಯಚಿತ್ರದಿಂದಾಗಿ, ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯವರಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಕ್ಲೀನ್ ಚಿಟ್ ಕುರಿತು ಪ್ರಶ್ನೆಗಳು ಎದ್ದಿವೆ.

ಬ್ರಿಟನ್‌ನ ಉದ್ದೇಶಗಳ ಕುರಿತು ಸವಾಲು

ಬ್ರಿಟನ್‌ನ ಉದ್ದೇಶವನ್ನು ಪ್ರಶ್ನಿಸಿರುವ ಬಾಬೋನ್ಸ್, ಡಿಸೆಂಬರ್ 6, 2022 ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಮೌನವಾಗಿ ಪ್ರಾರ್ಥನೆ ಮಾಡಿದ್ದಕ್ಕಾಗಿ 45 ವರ್ಷದ ಮಹಿಳೆಯನ್ನು ಬಂಧಿಸಲಾಯಿತು. ಆದರೆ ಭಾರತದಲ್ಲಿ ವಿವಿಧ ಧರ್ಮಗಳ ಜನರು ಸಾರ್ವಜನಿಕ ಪ್ರದೇಶಗಳಲ್ಲಿ ದೇವರನ್ನು ಪೂಜಿಸಬಹುದು ಎಂದು ಹೇಳಿದ್ದಾರೆ.

ಬ್ರಿಟನ್ ಸಾಮಾಜಿಕ ದ್ವೇಷವನ್ನು ಬೆಳೆಸುತ್ತಿದೆ ಎಂಬ ಆರೋಪ ಸಹ ಕೇಳಿಬಂದಿದೆ. ವರದಿಯಲ್ಲಿ ಬ್ರಿಟನ್‌ ಅನ್ನು ಟಾರ್ಗೆಟ್‌ ಮಾಡಿರೋ ಬಾಬನ್ಸ್, ಯಾವುದೇ, ನಾಸ್ತಿಕ ಪ್ರವೃತ್ತಿಯ ಬ್ರಿಟನ್‌ ಧರ್ಮದ ಬಗ್ಗೆ ಸಾಮಾಜಿಕ ದ್ವೇಷವನ್ನು ಬೆಳೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಸಿಡ್ನಿ ವಿಶ್ವವಿದ್ಯಾನಿಲಯದ ವರದಿಯ ಪ್ರಕಾರ ಭಾರತದಲ್ಲಿ ಜನರು ತಮ್ಮ ಧರ್ಮವನ್ನು ಅನುಸರಿಸಲು ಸ್ವತಂತ್ರರು. ಆದರೆ ಹಿಂದೂ-ಬಹುಸಂಖ್ಯಾತ ದೇಶದಲ್ಲಿ ಕೆಲವು ಮುಸ್ಲಿಮರಿಂದ ತಾರತಮ್ಯದ ದೂರುಗಳು ಕೇಳಿಬಂದಿವೆ. ಭಾರತವನ್ನು ಟಾರ್ಗೆಟ್‌ ಮಾಡಿದವರಲ್ಲಿ US ಸ್ಟೇಟ್ ಡಿಪಾರ್ಟ್‌ಮೆಂಟ್‌ನ ಇಂಟರ್‌ನ್ಯಾಶನಲ್ ರಿಲಿಜಿಯಸ್ ಫ್ರೀಡಮ್ (OIRF), ಅಮೆರಿಕ ಸರ್ಕಾರದ ಪ್ರಾಯೋಜಿತ ಯುನೈಟೆಡ್ ಸ್ಟೇಟ್ಸ್ ಕಮಿಷನ್ ಆನ್ ಇಂಟರ್‌ನ್ಯಾಶನಲ್ ರಿಲಿಜನ್ ಫ್ರೀಡಮ್ (USCIRF) ಮತ್ತು ಯುನೈಟೆಡ್ ನೇಷನ್ಸ್ ಆಫೀಸ್ ಆಫ್ ಹ್ಯೂಮನ್ ರೈಟ್ಸ್ (OHCHR) ಕೂಡ ಸೇರಿವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕಬ್ಜ 2' ಬರೋದು ಕನ್ಫರ್ಮ್: ಬಾಲಿವುಡ್ ನಂ 1 ಸ್ಟಾರ್ ಮೇಲೆ ಆರ್‌ ಚಂದ್ರು ಕಣ್ಣು?

Tue Mar 7 , 2023
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಕಳೆದೆರಡು ವರ್ಷಗಳಿಂದ ವಿಶ್ವದೆಲ್ಲೆಡೆ ಚರ್ಚೆಯಾಗುತ್ತಿದೆ. 2022ರಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರ ನೋಡಿ ಇಡೀ ಭಾರತೀಯ ಚಿತ್ರರಂಗವೇ ಒಮ್ಮೆ ದಂಗಾಗಿ ಹೋಗಿತ್ತು. ‘ಕೆಜಿಎಫ್ 2′,’ಕಾಂತಾರ’,’777 ಚಾರ್ಲಿ’, ‘ವಿಕ್ರಾಂತ್ ರೋಣ’ದಂತಹ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಬೇಜಾನ್ ಸದ್ದು ಮಾಡಿದ್ದವು. 2023 ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಅದೃಷ್ಟದ ವರ್ಷ ಆಗುತ್ತಾ? ಈ ಪ್ರಶ್ನೆಗೆ ಇನ್ನು ಕೆಲವೇ ದಿನಗಳಲ್ಲಿ ‘ಕಬ್ಜ’ ಉತ್ತರ ಕೊಡಲಿದೆ. ಉಪೇಂದ್ರ, ಕಿಚ್ಚ […]

Advertisement

Wordpress Social Share Plugin powered by Ultimatelysocial