ರಾಜ್ ಕುಂದ್ರಾ ವಿರುದ್ಧ ಇನ್ನೊಂದು ಪ್ರಕರಣ!

 

ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪೋರ್ನ್ ವಿಡಿಯೋ ನಿರ್ಮಾಣ ಮತ್ತು ವಿತರಣೆ ಆರೋಪದಡಿ ಮುಂಬೈ ಪೊಲೀಸರು ರಾಜ್ ಕುಂದ್ರಾ ವಿರುದ್ಧ ಕಳೆದ ವರ್ಷಾಂತ್ಯದಲ್ಲಿ ಕೇಸು ದಾಖಲಿಸಿ, ಬಂಧಿಸಿದ್ದರು. ಇದೀಗ ಇಡಿ ಇದೇ ಪ್ರಕರಣದ ಹಣಕಾಸು ಅಂಶವನ್ನು ಪ್ರಧಾನವಾಗಿಸಿಕೊಂಡು ಕೇಸು ದಾಖಲಿಸಿದೆ.

ರಾಜ್ ಕುಂದ್ರಾ ಒಡೆತನದ ಆರ್ಮ್ಸ್ ಪ್ರೈಂ ಮೀಡಿಯಾ ಲಿಮಿಟೆಡ್ ಸಂಸ್ಥೆಯು ‘ಹಾಟ್‌ಶಾಟ್ಸ್’ ಎಂಬ ಅಪ್ಲಿಕೇಶನ್ ಪ್ರಾರಂಭಿಸಿತ್ತು. ಇದೇ ಅಪ್ಲಿಕೇಶನ್‌ಗಾಗಿ ಭಾರತದಲ್ಲಿ ಪೋರ್ನ್ ವಿಡಿಯೋಗಳನ್ನು ನಿರ್ಮಾಣ ಮಾಡಿ ವಿದೇಶದಿಂದ ಅಪ್‌ಲೋಡ್ ಮಾಡಲಾಗುತ್ತಿತ್ತು ಎಂಬ ಆರೋಪದ ಮೇಲೆ ರಾಜ್ ಕುಂದ್ರಾ ಹಾಗೂ ಇತರರನ್ನು ಬಂಧಿಸಲಾಗಿತ್ತು. ಪ್ರಸ್ತುತ ಜಾಮೀನಿನ ಮೇಲೆ ಕುಂದ್ರಾ ಹೊರಗಿದ್ದಾರೆ.

ಇದೀಗ ಜಾರಿ ನಿರ್ದೇಶನಾಲಯ (ಇಡಿ) ರಾಜ್ ಕುಂದ್ರಾ ವಿರುದ್ಧ ದೂರು ದಾಖಲಿಸಿದ್ದು, ಪೋರ್ನ್ ವಿಡಿಯೋಗಳಿಂದ ಹಣವನ್ನು ಅಕ್ರಮವಾಗಿ ಗಳಿಸಿದ್ದಲ್ಲದೆ, ನಿಯಮಬಾಹಿರವಾಗಿ ಹಣ ವರ್ಗಾವಣೆ ಹಾಗೂ ತೆರಿಗೆ ತಪ್ಪಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ.

13 ಖಾತೆಗಳಿಗೆ ಹಣ ವರ್ಗಾವಣೆ
ರಾಜ್ ಕುಂದ್ರಾ ಒಡೆತನದ ಆರ್ಮ್ಸ್ ಪ್ರೈಂ ಮೀಡಿಯಾ ಲಿಮಿಟೆಡ್ ಸಂಸ್ಥೆಯನ್ನು ಬ್ರಿಟನ್ ಕೆನ್‌ರಿನ್ ಹೆಸರಿನ ಸಂಸ್ಥೆಗೆ ಕುಂದ್ರಾ ಮಾರಾಟ ಮಾಡಿದರು. ಅಸಲಿಗೆ ಇದು ಕುಂದ್ರಾದ ಆಪ್ತ ಸಂಬಂಧಿ ಪ್ರಕಾಶ್ ಭಕ್ಷಿಯ ಸಂಸ್ಥೆಯೇ ಆಗಿದೆ. ಅದರ ಬಳಿಕ ರಾಜ್ ಕುಂದ್ರಾರ ಮತ್ತೊಂದು ಸಂಸ್ಥೆ ವಿಯಾನ್ ಇಂಡಸ್ಟ್ರೀಸ್ ಬ್ರಿಟನ್‌ನ ರಾಜ್ ಕುಂದ್ರಾ ಸಂಬಂಧಿಯ ಕಂಪೆನಿ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಬಳಿಕ ವಿಯಾನ್‌ ಇಂಡಸ್ಟ್ರಿಯ 13 ಖಾತೆಗಳಿಂದ ಕೋಟ್ಯಂತರ ರುಪಾಯಿ ವ್ಯವಹಾರ ನಡೆದಿದೆ ಈ ಬಗ್ಗೆ ಇದೀಗ ಇಡಿ ತನಿಖೆ ನಡೆಸುತ್ತಿದೆ.

ಕೋಟ್ಯಂತರ ರುಪಾಯಿ ವ್ಯವಹಾರ

ಕೆನ್‌ರಿನ್ ಹಾಗೂ ವಿಯಾನ್ ಸಂಸ್ಥೆಯ ನಡುವೆ ನಡೆದಿರುವ ಕೋಟ್ಯಂತರ ರುಪಾಯಿ ಹಣಕಾಸು ವ್ಯವಹಾರ ನಿಯಮ ಬಾಹಿರ ಎಂಬ ಅನುಮಾನವನ್ನು ಇಡಿ ವ್ಯಕ್ತಪಡಿಸಿದೆ. ಅಲ್ಲದೆ ಕೆನ್‌ರಿನ್ ಹಾಗೂ ವಿಯಾನ್ ನಡುವೆ ನಡೆದಿರುವ ಹಣಕಾಸು ವಿನಿಮಯ ಪೋರ್ನ್ ವಿಡಿಯೋ ನಿರ್ಮಾಣದಿಂದ ರಾಜ್ ಕುಂದ್ರಾ ಗಳಿಸಿರುವ ಲಾಭ ಎಂದೂ ಹೇಳಲಾಗುತ್ತಿದೆ.

ಆರೋಪ ಅಲ್ಲಗಳೆದಿದ್ದ ರಾಜ್ ಕುಂದ್ರಾ

ಭಾರತದಲ್ಲಿ ಪೋರ್ನ್ ವಿಡಿಯೋ ನಿರ್ಮಾಣ ಮಾಡುತ್ತಿದ್ದ ರಾಜ್ ಕುಂದ್ರಾ ಅದನ್ನು ಬ್ರಿಟನ್‌ನ ಕೆನ್‌ರಿನ್ ಸಂಸ್ಥೆ ಮೂಲಕ ಅದನ್ನು ಹಾಟ್‌ಶಾಟ್ಸ್ ಅಪ್ಲಿಕೇಶನ್‌ಗೆ ಅಪ್‌ಲೋಡ್ ಮಾಡುತ್ತಿದ್ದರು ಎಂದು ಮುಂಬೈ ಪೊಲೀಸರು ಆರೋಪ ಮಾಡಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ರಾಜ್ ಕುಂದ್ರಾ ತಾನು ಪೋರ್ನ್ ವಿಡಿಯೋ ನಿರ್ಮಾಣ ಮಾಡಿಲ್ಲವೆಂದು ಶೃಂಗಾರಮಯ ವಿಡಿಯೋಗಳನ್ನಷ್ಟೆ ನಿರ್ಮಾಣ ಮಾಡಿದ್ದೆ ಎಂದು ಹೇಳಿದ್ದರು. ಪ್ರಕರಣದ ವಿಚಾರಣೆ ಮುಂಬೈ ಹೈಕೋರ್ಟ್‌ನಲ್ಲಿ ಚಾಲ್ತಿಯಲ್ಲಿದೆ.

ಜುಲೈ 19 ರಂದು ರಾಜ್ ಕುಂದ್ರಾ ಅನ್ನು ಬಂಧಿಸಲಾಗಿತ್ತು

ಪೋರ್ನ್ ವಿಡಿಯೋ ನಿರ್ಮಾಣ ಹಾಗೂ ವಿತರಣೆ ಪ್ರಕರಣದಲ್ಲಿ ರಾಜ್ ಕುಂದ್ರಾ ಅನ್ನು ಮುಂಬೈ ಪೊಲೀಸರು 2021ರ ಜುಲೈ 19 ರಂದು ಬಂಧಿಸಿದ್ದರು. ಕುಂದ್ರಾ ಜೊತೆಗೆ ಇನ್ನೂ 11 ಜನರನ್ನು ಬಂಧಿಸಲಾಗಿತ್ತು. ರಾಜ್ ಕುಂದ್ರಾ ಬಂಧನದ ಬಳಿಕ ನಟಿಯರಾದ ಶೆರ್ಲಿನ್ ಚೋಪ್ರಾ, ಪೋನಂ ಪಾಂಡೆ ಅವರುಗಳು ಕುಂದ್ರಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದರು. ಆದರೆ ಗೆಹನಾ ವಸಿಷ್ಠಾ ಹಾಗೂ ಇತರೆ ಕೆಲವು ನಟಿಯರು ರಾಜ್ ಕುಂದ್ರಾಗೆ ಬೆಂಬಲ ಸೂಚಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಿಂದಿ ರಾಷ್ಟ್ರ ಭಾಷೆ ಎಲ್ಲರೂ ಗೌರವಿಸಿ: ಬಾಲಿವುಡ್‌ ನಟ ಅರ್ಜುನ್ ರಾಮ್‌ಪಾಲ್!

Thu May 19 , 2022
ಹಿಂದಿ ರಾಷ್ಟ್ರೀಯ ಭಾಷೆ ಎನ್ನುವ ವಿಚಾರದಲ್ಲಿ ನಟ ಸುದೀಪ್ ಮತ್ತು ಅಜಯ್ ದೇವಗನ್ ನಡುವೆ ವಾಗ್ವಾದ ನಡೆದಿತ್ತು. ಕೊನೆಗೆ ಅಜಯ್ ದೇವಗನ್ ಸುದೀಪ್ ಬಳಿ ಕ್ಷಮೆ ಕೇಳಿದ್ದರು. ಬಾಲಿವುಡ್ ನಟ ಅಜಯ್ ದೇವ್‌ಗನ್ ಹಿಂದಿ ರಾಷ್ಟ್ರ ಭಾಷೆ ಎಂದು ಮಾಡಿದ್ದ ಟ್ವೀಟ್‌ನಿಂದ ಈಗಾಗಲೇ ಹಿಂದಿ ರಾಷ್ಟ್ರ ಭಾಷೆ ಹೌದೋ ಅಲ್ಲವೋ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿದೆ. ಹೆಚ್ಚಿನ ಮಂದಿ ಸುದೀಪ್ ಮಾತನ್ನು ಒಪ್ಪಿದ್ದರು. ಅಜಯ್ ದೇವಗನ್ ಹೇಳುತ್ತಿರುವ ಮಾತಿನಲ್ಲಿ ಹುರುಳಿಲ್ಲ, […]

Advertisement

Wordpress Social Share Plugin powered by Ultimatelysocial