ಪ್ರಶಸ್ತಿಗಳಿಂದ ಜವಾಬ್ದಾರಿ ಹೆಚ್ಚಳವಾಗಲು ಸಾಧ್ಯ.

 

ಎಲೆ-ಮರೆ ಕಾಯಿಯಂತೆ ಅನೇಕ ಸಾಧಕರು ವಿವಿಧ ಕ್ಷೇತ್ರಗಳ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಗುರ್ತಿಸಿ, ಪ್ರಶಸ್ತಿ ನೀಡಿ ಗೌರವಿಸಿದರೆ ಅವರು ಇನ್ನು ಹೆಚ್ಚಿನ ಮಟ್ಟದಲ್ಲಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಆಳಂದ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಪ್ಪ ಬಿರಾದಾರ ದೇಗಾಂವ ಹೇಳಿದರು.ಅಕ್ಷರ ಸಿರಿ ಪ್ರಶಸ್ತಿ ಪುರಸ್ಕøತ ಶಿಕ್ಷಕರಿಗೆ ಬಸವೇಶ್ವರ ಸಮಾಜ ಸೇವಾ ಬಳಗದ ವತಿಯಿಂದ ಆಳಂದ ಚೆಕ್ ಪೋಸ್ಟ್ ಸಮೀಪವಿರುವ ಕಸ್ತೂರಿ ನಗರದಲ್ಲಿ ಗುರುವಾರ ಸಂಜೆ ಏರ್ಪಡಿಸಲಾಗಿದ್ದ ಗೌರವ ಸತ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ನಮ್ಮ ಸಂಘವು ತಾಲೂಕಿನಾದ್ಯಂತ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ದಕ್ಷ ಸೇವೆಯನ್ನು ಸೂಕ್ಷ್ಮವಾಗಿ ಗಮನಿಸಿ ಅಕ್ಷರ ಸಿರಿ ಪ್ರಶಸ್ತಿ ನೀಡಿ ಸಂಘಟನೆಯ ಪ್ರಮುಖ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಪ್ರಶಸ್ತಿ ಪುರಸ್ಕøತರು ಎಲ್ಲಾ ಶಿಕ್ಷಕರಿಗೆ ಮಾದರಿಯಾಗುವಂತೆ ಹೆಚ್ಚಿನ ಸೇವೆ ಸಲ್ಲಿಸಬೇಕು. ತಾಲೂಕಿನ ಶಿಕ್ಷಕರ ಸೇವೆಗೆ ಸಂಬಂಧಿಸಿದಂತೆ ಯಾವುದಾದರೂ ಸಮಸ್ಯೆಗಳು ಇದ್ದರೆ, ಸಂಘ ಅವುಗಳ ಪರಿಹಾರಕ್ಕೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಶಿಕ್ಷಕರು ತಾವು ಸಂಪೂರ್ಣವಾಗಿ ಬೋಧನೆಯತ್ತ ಚಿತ್ತ ಹರಿಸಬೇಕು. ಸರ್ಕಾರದ ಸೌಲಭ್ಯಗಳು ತಮಗೆ ದೊರಕಿಸಿಕೊಡಲು ಸಂಘ ಯಾವಾಗಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದರು.ಪ್ರಶಸ್ತಿ ಪುರಸ್ಕøತ ಶಿಕ್ಷಕರಾದ ಗುಂಡಪ್ಪ ಜೋಳದ, ಶರಣಪ್ಪ ವಗ್ಗಾಲೆ, ಉಮೇಶ ಮಾಳಾ ಅವರಿಗೆ ಸತ್ಕರಿಸಿ, ಅಭಿನಂದಿಸಲಾಯಿತು. ಎಚ್.ಬಿ.ಪಾಟೀಲ, ನೀಲಕಂಠಯ್ಯ ಹಿರೇಮಠ, ಶಿವಯೋಗಪ್ಪ ಬಿರಾದಾರ, ಅಣ್ಣಾರಾಯ ಎಚ್.ಮಂಗಾಣೆ, ವಿಠಲ ಕುಂಬಾರ, ಹೊನ್ನಮ್ಮ ಮಾಳಾ, ಪ್ರಮೋದ ಮಾಳಾ ಸೇರಿದಂತೆ ಮತ್ತಿತರರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಳಿ ಕೂದಲು ಸಮಸ್ಯೆಗೆ ಬಳಸಿ ಈ ನೈಸರ್ಗಿಕ ವಿಧಾನ

Fri Mar 3 , 2023
ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುವುದು ಪ್ರಸ್ತುತ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಿದೆ. ಇದು ಬಹಳಷ್ಟು ಮುಜುಗರ ಮತ್ತು ಕಡಿಮೆ ಆತ್ಮವಿಶ್ವಾಸಕ್ಕೆ ಕಾರಣವಾಗುತ್ತದೆ. ಕೆಲವರು ಕೂದಲನ್ನು ಕಪ್ಪಾಗಿಸಲು ರಾಸಾಯನಿಕ ಆಧಾರಿತ ಕೂದಲಿನ ಬಣ್ಣ ಅಥವಾ ಕೂದಲಿನ ಮಾಸ್ಕ್ ಬಳಸುತ್ತಾರೆ, ಆದರೆ ಇದು ಒರಟಾದ ಕೂದಲಿಗೆ ಕಾರಣವಾಗುವುದರಿಂದ ಪ್ರಯೋಜನಗಳ ಬದಲಿಗೆ ಹಾನಿ ಹೆಚ್ಚಾಗಿದೆ. ಅದಕ್ಕಾಗಿಯೇ ನೀವು ನೈಸರ್ಗಿಕ ವಿಧಾನಗಳನ್ನು ಮಾತ್ರ ಪ್ರಯತ್ನಿಸುವುದು ಉತ್ತಮ. ಈ ಬಗ್ಗೆ ಕೆಲ ಸಲಹೆಗಳು ಇಲ್ಲಿವೆ ನೋಡಿ..ಈ 3 ಮನೆಮದ್ದುಗಳ […]

Advertisement

Wordpress Social Share Plugin powered by Ultimatelysocial