ಶೀಘ್ರವೇ ವಾರ್ಡ್‌ ಪುನರ್‌ ವಿಂಗಡಣೆ ವರದಿ ಕೊಡಿ;

ಬೆಂಗಳೂರು ಮೇ 23: ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಸಮಿತಿಯ ವರದಿಯನ್ನು ಶೀಘ್ರವೇ ಸರಕಾರಕ್ಕೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆಯು ಬಿಬಿಎಂಪಿಗೆ ಸೂಚಿಸಿದೆ.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಮುಖ್ಯ ಆಯುಕ್ತರ ನೇತೃತ್ವದಲ್ಲಿ ರಚನೆಯಾಗಿರುವ ಪುನರ್‌ ವಿಂಗಡಣೆ ಸಮಿತಿಯು, 2021 ರ ಜನವರಿಯಲ್ಲಿ ಜಾರಿಯಾಗಿರುವ ನೂತನ ಬಿಬಿಎಂಪಿ ಕಾಯಿದೆಯ ಪ್ರಕಾರ ಈಗಿರುವ ವಾರ್ಡ್ ಗಳ ಸಂಖ್ಯೆಯನ್ನು 198ರಿಂದ 243ಕ್ಕೆ ಹೆಚ್ಚಿಸುವಂತೆ ಶಿಫಾರಸು ಮಾಡಿದೆ.

ಈ ಕಾರ್ಯಕ್ಕೆ ಸಮಿತಿಯು ಒಂದೂವರೆ ವರ್ಷದಲ್ಲಿ ಮೂರು ಬಾರಿ ದಿನಾಂಕದ ವಿಸ್ತರಣೆ ಕೋರಿತ್ತು.

ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ದಾಖಲಿಸಿರುವ ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್, ವಾರ್ಡ್‌ಗಳ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪೂರ್ಣಗೊಳಿಸಲು ಎಂಟು ವಾರಗಳ ಕಾಲವಕಾಶ ನೀಡಿದೆ ಎಂದು ನಗರಾಭಿವೃದ್ಧಿ ಇಲಾಖೆಯು ಪುನರ್‌ ವಿಂಗಡಣೆ ಸಮಿತಿಗೆ ಬರೆದ ಪತ್ರದಲ್ಲಿ ತಿಳಿಸಿದೆ.

ಅಲ್ಲದೇ ವಾರ್ಡ್ ಪುನರ್‌ ವಿಂಗಡಣೆ ಕಾರ್ಯವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸುವಂತೆ, ಇದರಿಂದ ಮತದಾರರ ಪಟ್ಟಿ ಸಿದ್ಧಪಡಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಬರೆದಿದ್ದ ಪತ್ರವನ್ನು ಸಹ ಉಲ್ಲೇಖಿಸಲಾಗಿದೆ.

ಬಿಬಿಎಂಪಿ ಸದಸ್ಯರ ಅಧಿಕಾರವಧಿ ಪೂರ್ಣಗೊಂಡ ನಾಲ್ಕು ತಿಂಗಳ ನಂತರ, 2021ರ ಜನವರಿಯಲ್ಲಿ ವಾರ್ಡ್ ಗಳ ಪುನರ್‌ ವಿಂಗಡಣೆ ಸಮಿತಿಯನ್ನು ರಚಿಸಲಾಯಿತು. ಕೊರೊನಾ ಪರಿಸ್ಥಿತಿ ಹಿನ್ನಲೆಯಲ್ಲಿ ಪುನರ್‌ ವಿಂಗಡಣೆ ಕಾರ್ಯಕ್ಕೆ ನಿಗದಿಪಡಿಸಿದ್ದ ಅವಧಿಯನ್ನು ಮೂರು ಬಾರಿ ವಿಸ್ತರಿಸಲಾಗಿತ್ತು.

ಆಕ್ಷೇಪಣೆ ಸಲ್ಲಿಸಲು ಅನುವಾಗುವಂತೆ ಈ ಪುನರ್‌ ವಿಂಗಡಣೆ ವರದಿಯನ್ನು ಸರಕಾರವು ಸಾರ್ವಜನಿಕರ ಅವಗಾಹನೆಗೆ ತರುವ ನಿರೀಕ್ಷೆ ಇದೆ. ಪುನರ್ ವಿಂಗಡನೆಯ ಕರಡು ಪ್ರತಿ ಸಿದ್ಧವಾಗಿದೆ ಎಂದು ಕಳೆದ ವಾರ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ತಿಳಿಸಿದ್ದರು.

ಇತ್ತೀಚೆಗೆ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಸಂದರ್ಭದಲ್ಲಿ, ಬಿಬಿಎಂಪಿ ವಾರ್ಡ್‌ಗಳ ಪುನರ್‌ ವಿಂಗಡಣೆ ಸಮಿತಿಯು ಎಂಟು ವಾರಗಳಲ್ಲಿ ಪುನರ್‌ ವಿಂಗಡಣೆ ಹಾಗೂ ಮೀಸಲಾತಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ರಾಜ್ಯ ಸರಕಾರ ಹೇಳಿತ್ತು.

ವಾರ್ಡ್ ಗಳ ಪುನರ್‌ ವಿಂಗಡಣೆಯ ಮುಖ್ಯ ಅಂಶಗಳು:

* 2011ರ ಜನಗಣತಿ ಆಧಾರದಲ್ಲಿ ವಾರ್ಡ್ ಗಳ ಪುನರ್‌ ವಿಂಗಡಣೆ.

* ಪ್ರತಿ ವಾರ್ಡ್ ಜನಸಂಖ್ಯೆ ಪ್ರಾಯೋಗಿಕವಾಗಿ ಬೆಂಗಳೂರಿನಾದ್ಯಂತ ಒಂದೇ ರೀತಿ ಇರುವಂತೆ ನೋಡಿಕೊಳ್ಳುವುದು.

* ಶಾಸಕರ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್ ಗಳನ್ನು ವಿಭಜಿಸುವುದು. ಯಾವುದೇ ವಾರ್ಡ್ ಎರಡು ಕ್ಷೇತ್ರಗಳಲ್ಲಿ ವ್ಯಾಪಿಸಬಾರದು.

* ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಮತ್ತು ಗರಿಷ್ಠ ವಾರ್ಡ್ ಗಳ ನಡುವಿನ ವ್ಯತ್ಯಾಸವು ಗಣನೀಯವಾಗಿರಬೇಕು ಎಂದು ನಿರೀಕ್ಷಿಸಲಾಗಿದೆ (ಕನಿಷ್ಠ 5 ರಿಂದ ಗರಿಷ್ಠ 16 ವಾರ್ಡ್ ಗಳು).

* ಕೆಲವು ವಿಧಾನಸಭಾ ಕ್ಷೇತ್ರಗಳು ಹೆಚ್ಚು ವಾರ್ಡ್ ಗಳನ್ನು ಪಡೆಯುವ ನಿರೀಕ್ಷೆಯಿದೆ. ನಗರದ ಮಧ್ಯ ಭಾಗದಲ್ಲಿರುವ ಹೆಚ್ಚಿನ ವಿಧಾನಸಭಾ ಕ್ಷೇತ್ರಗಳು ಹಾಲಿ ಇರುವ ವಾರ್ಡ್ ಗಳ ಸಂಖ್ಯೆಯನ್ನೇ ಉಳಿಸಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂಯುಕ್ತಾ ಹೊರನಾಡ್ ಸಖತ್ ಹಾಟ್ ಅವತಾರ ನೋಡಿ ಫ್ಯಾನ್ಸ್ ಫಿದಾ.

Mon May 23 , 2022
  ಸ್ಯಾಂಡಲ್‌ವುಡ್ ಲೈಫು ಇಷ್ಟೇನೆ, ಬರ್ಫಿ, ಒಗ್ಗರಣೆ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಸಂಯುಕ್ತಾ ಹೊರನಾಡ್ ಸಖತ್ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿರೋ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಲೈಫು ಇಷ್ಟೇನೆ ನಟಿಯ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಕನ್ನಡ ಮಾತ್ರವಲ್ಲದೇ ಪರಭಾಷಾ ಚಿತ್ರಗಳಲ್ಲೂ ಬ್ಯೂಸಿಯಿರೋ ನಟಿ ಸಂಯುಕ್ತಾ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು ಜಾಲಿ ಮೂಡ್‌ನಲ್ಲಿದ್ದಾರೆ. ಬ್ರೇಕ್‌ನ ನಂತರ ಮಾಲ್ಡೀವ್ಸ್‌ಗೆ ಪ್ರವಾಸಕ್ಕೆ ತೆರಳಿದ್ದಾರೆ. ರೆಡ್ […]

Advertisement

Wordpress Social Share Plugin powered by Ultimatelysocial