ಪಠ್ಯದಲ್ಲಿ ಒಳ್ಳೆಯದನ್ನೇ ಅಳವಡಿಸಲಾಗಿದೆ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಮೈಸೂರು, ಮೇ 25- ನಮ್ಮದು ಏಕ ಸಂಸ್ಕøತಿ ಅಲ್ಲ, ಎಲ್ಲರನ್ನೊಳಗೊಂಡ ಬಹು ಸಂಸ್ಕøತಿ. ಒಳ್ಳೆಯದನ್ನು ಪಡೆದು ಪಠ್ಯದಲ್ಲಿ ಅಳವಡಿಕೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿ ಅವರು, ದೇವನೂರು ಮಹಾದೇವ ಅವರು ಹಿರಿಯ ಸಾಹಿತಿಗಳು. ಅವರು ಹೇಳುವುದರಲ್ಲೂ ಸತ್ಯವಿದೆ. ನಾವು ಅಳವಡಿಕೆ ಮಾಡಿರುವುದರಲ್ಲೂ ಸತ್ಯವಿದೆ. ನಾನು ಅವರನ್ನು ಶೀಘ್ರದಲ್ಲೇ ಭೇಟಿಯಾಗಿ ಪಠ್ಯಪುಸ್ತಕ ಪರಿಷ್ಕರಣೆ ಗೊಂದಲವನ್ನು ನಿವಾರಿಸಲಾಗುವುದು ಎಂದರು.

ಪಠ್ಯಪರಿಷ್ಕರಣೆಗೆ ಹಿರಿಯ ಸಾಹಿತಿ ದೇವನೂರು ಮಹದೇವ ಆಕ್ಷೇಪ ವಿಚಾರಕ್ಕೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಅವರ ಪತ್ರದ ಬಗ್ಗೆ ಗಮನಿಸಿದ್ದೇನೆ. ಆದರೆ ನನಗೆ ಅವರಿಂದ ಯಾವುದೇ ಪತ್ರ ಬಂದಿಲ್ಲ. ಈ ವಿಚಾರವಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ ಎಂದು ಹೇಳಿದರು.

ಕಾಂಗ್ರೆಸ್‍ನದ್ದು ನೀಚಬುದ್ಧಿ. ವಿಚಾರಗಳ ಚರ್ಚೆಯಲ್ಲಿ ಸೋತು ಕಾಂಗ್ರೆಸ್ ನವರು ವ್ಯಕ್ತಿಗತ ಟಾರ್ಗೆಟ್ ಮಾಡಿ ಮಾತನಾಡುತ್ತಿದ್ದಾರೆ. ಪಠ್ಯವನ್ನೇ ಓದದೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ನಾಗೇಶ್ ಹರಿಹಾಯ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಪ್ರಧಾನಿ ಮೋದಿ ಭೇಟಿ ತಪ್ಪಿಸಿಕೊಂಡ ತೆಲಂಗಾಣ ಸಿಎಂ

Wed May 25 , 2022
  ಹೈದರಾಬಾದ್ : ನಾಲ್ಕು ತಿಂಗಳೊಳಗೆ ಎರಡನೇ ಬಾರಿ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರು ಗುರುವಾರ ಹೈದರಾಬಾದ್‌ನಲ್ಲಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ಐಎಸ್‌ಬಿ) ನಲ್ಲಿ 20 ನೇ ವಾರ್ಷಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಆಗಮಿಸುವಾಗ ಅವರನ್ನು ಸ್ವಾಗತಿಸುವುದರಿಂದ ತಪ್ಪಿಸಿಕೊಂಡು ಟೀಕೆಗಳಿಗೆ ಗುರಿಯಾಗಿದ್ದಾರೆ. ಫೆಬ್ರವರಿ 5 ರಂದು ಹೈದರಾಬಾದ್‌ಗೆ ಆಗಮಿಸಿದ ಮೋದಿ ಅವರನ್ನು ಕೆಸಿಆರ್ ಬರಮಾಡಿಕೊಂಡಿರಲಿಲ್ಲ ಮತ್ತು ಪ್ರಧಾನಿ ಭಾಗವಹಿಸಿದ್ದ ಎರಡು ಕಾರ್ಯಕ್ರಮಗಳಲ್ಲಿ ಸಹ […]

Advertisement

Wordpress Social Share Plugin powered by Ultimatelysocial