ಶಾಲಾ ಶಿಕ್ಷಣ ಇಲಾಖೆ ಸಮಸ್ಯೆ ಪರಿಹರಿಸಲು ವಿಭಿನ್ನ ಪ್ರಯತ್ನ;

ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ಈಗ ಶಿಕ್ಷಣ ಇಲಾಖೆ ಎಂದು ಬದಲಾಯಿಸಲಾಗಿದ್ದು, ಇದೀಗ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆಗಳು ಹಾಗೂ ದೂರುಗಳನ್ನು ಪರಿಹರಿಸಲು ವಿಭಿನ್ನ ಪ್ರಯತ್ನವೊಂದಕ್ಕೆ ಕೈ ಹಾಕಲಾಗಿದೆ.

ಹೌದು, ವೆಬ್ ಸೈಟ್ ಒಂದನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದ್ದು, ಇದರಲ್ಲಿ ತೆರೆಯಲಾಗುವ ವಿಶೇಷ ಪುಟ ಒಂದರ ಮೂಲಕ ಯಾರು ಬೇಕಾದರೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಸಮಸ್ಯೆ ಮತ್ತು ದೂರುಗಳನ್ನು ಸಲ್ಲಿಸಬಹುದಾಗಿದೆ.

ಇದು ಖುದ್ದು ಶಿಕ್ಷಣ ಸಚಿವರ ಗಮನಕ್ಕೆ ಬರಲಿದೆ.

ಹೀಗೆ ಬಂದ ಸಮಸ್ಯೆ ಹಾಗೂ ದೂರುಗಳನ್ನು ಪರಿಹರಿಸಲು ತಂಡವೊಂದನ್ನು ರಚಿಸಲಾಗುತ್ತಿದ್ದು, ಅದು ಸಂಪೂರ್ಣವಾಗಿ ಇತ್ಯರ್ಥವಾದ ಬಳಿಕ ಶಿಕ್ಷಣ ಸಚಿವರಿಗೆ ಮಾಹಿತಿ ಸಿಗಲಿದೆ. ವೆಬ್ ಸೈಟ್ ಕಾರ್ಯ ಈಗಾಗಲೇ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತೂಕ ಇಳಿಸಲು ಬೆಸ್ಟ್‌ ತರಕಾರಿ ಇದು, ಸೇವನೆಯ ವಿಧಾನ ನಿಮಗೆ ತಿಳಿದಿರಲಿ

Tue Jun 28 , 2022
  ಬೆಂಡೆಕಾಯಿ ಬಹುತೇಕ ಜನರು ಇಷ್ಟಪಡುವಂತಹ ತರಕಾರಿಗಳಲ್ಲೊಂದು. ಬೆಂಡೆಕಾಯಿಯಲ್ಲಿ ವಿಟಮಿನ್-ಸಿ ಹೇರಳವಾಗಿದೆ. ನೀವು ಪ್ರತಿದಿನ 100 ಗ್ರಾಂ ಬೆಂಡೆಕಾಯಿಯನ್ನು ಸೇವಿಸಿದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಶೇ.38ರಷ್ಟು ವಿಟಮಿನ್ ಸಿ ದೊರೆಯುತ್ತದೆ. ವಿಟಮಿನ್-ಸಿ ಅನೇಕ ರೋಗಗಳು ಮತ್ತು ಸೋಂಕುಗಳಿಂದ ನಿಮ್ಮನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಬೆಂಡೆಕಾಯಿ ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುವುದು ಮಾತ್ರವಲ್ಲ, ಅದರ ಸೇವನೆಯಿಂದ ತೂಕವನ್ನು ಸಹ ನಿಯಂತ್ರಿಸಬಹುದು. ನಿಯಮಿತವಾಗಿ ಬೆಂಡೆಕಾಯಿ ಸೇವನೆ ಮಾಡಿದ್ರೆ ಅನೇಕ ರೋಗಗಳಿಂದಲೂ ಪಾರಾಗಬಹುದು. ಬೆಂಡೆಕಾಯಿ ರಕ್ತದಲ್ಲಿನ […]

Advertisement

Wordpress Social Share Plugin powered by Ultimatelysocial