ಬಡವ ರಾಸ್ಕಲ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ!

 

ಬಡವ ರಾಸ್ಕಲ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ನಟ ಧನಂಜಯ್ ಅವರ ಹಲವು ಸಿನಿಮಾಗಳು ಈ ವರ್ಷ ಬಿಡುಗಡೆಗೆ ತಯಾರಾಗುತ್ತಿವೆ.

ಧನಂಜಯ್ ನಟನೆಯ ಕನ್ನಡ-ಮಲಯಾಳಂ ದ್ವಿಭಾಷಾ ಟ್ವೆಂಟಿ ಒನ್ ಅವರ್ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಮೇ 2 ರಂದು ಸಿನಿಮಾ ರಿಲೀಸ್ ಆಗಲಿದೆ. ಈ ನಿಯೋ -ನಾಯರ್ ಥ್ರಿಲ್ಲರ್ ಸಿನಿಮಾವನ್ನು ಜೈಶಂಕರ್ ನಿರ್ದೇಶಿಸಿದ್ದಾರೆ.

ಮಲಯಾಳಿ ಮಹಿಳೆ ನಾಪತ್ತೆ ಪ್ರಕರಣ ಕುರಿತ ಕಥೆ ಇದಾಗಿದೆ. ಧನಂಜಯ್ ಈ ಪ್ರಕರಣದ ತನಿಖೆ ನಡೆಸುವ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.

ಚಿತ್ರದಲ್ಲಿ ದುರ್ಗಾ ಕೃಷ್ಣ, ಸುದೇವ್ ನಾಯರ್, ರಾಹುಲ್ ಮಾಧವ್, ಅಪೂರ್ವ ಭಾರದ್ವಾಜ್, ಪೂರ್ಣ ಚಂದ್ರ ಮತ್ತು ದಿನೇಶ್ ಬಾಬೂ ನಟಿಸಿದ್ದಾರೆ.

ಧನಂಜಯ್ ಹೆಡ್ ಬುಷ್ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ, ಅದು ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಮಾನ್ಸೂನ್ ರಾಗ, ಬೈರಾಗಿ, ತೋತಾಪುರಿ, ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ ಸೇರಿವೆ. ಏತನ್ಮಧ್ಯೆ, ನಟ ತನ್ನ 25 ನೇ ಚಿತ್ರ ಹೊಯ್ಸಳ ಚಿತ್ರೀಕರಣ ಪ್ರಾರಂಭಿಸಲು ಸಜ್ಜಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಿಎಸ್‍ಐ ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಲೋಪವೆಸಗಿದ್ದ ಕಲಬುರಗಿಯ 13 ಪೊಲೀಸರ ಅಮಾನತು

Sat May 7 , 2022
ಬೆಂಗಳೂರು, ಮೇ 7- ಪಿಎಸ್‍ಐ ನೇಮಕಾತಿ ಪರೀಕ್ಷೆ ವೇಳೆ ಅಕ್ರಮ ನಡೆದಿದೆ ಎನ್ನಲಾಗಿರುವ ಕಲಬುರಗಿ ನಗರದ ಎರಡು ಪರೀಕ್ಷಾ ಕೇಂದ್ರಗಳಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ 13 ಪೊಲೀಸರನ್ನು ಅಮಾನತು ಮಾಡಲಾಗಿದೆ. ಕರ್ತವ್ಯಲೋಪದಡಿ ಒಬ್ಬರು ಸಬ್ ಇನ್ಸ್‍ಪೆಕ್ಟರ್ ಹಾಗೂ ಇಬ್ಬರು ಹೆಡ್ ಕಾನ್ಸ್‍ಸ್ಟೆಬಲ್‍ಗಳು ಸೇರಿ 13 ಪೊಲೀಸರನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ. ಕಲಬುರಗಿಯ ಜ್ಞಾನಜ್ಯೋತಿ ಶಾಲೆ ಮತ್ತು ಎಂಎಸ್ ಇರಾನಿ ಕಾಲೇಜಿನ ಪರೀಕ್ಷಾ ಕೇಂದ್ರಗಳಿಗೆ ಕಲಬುರಗಿ ನಗರದ ವಿವಿಧ ಪೊಲೀಸ್ ಠಾಣೆಗಳ […]

Advertisement

Wordpress Social Share Plugin powered by Ultimatelysocial