ಬ್ಯಾಗ್‌ ಕದ್ದು ಓಡಿಹೋದ ಕಳ್ಳರ ಹಿಡಿಯಲು ಆಟೋದಿಂದ ಜಿಗಿದ ಮಹಿಳೆಯ ದುರಂತ ಸಾವು!

ನವದೆಹಲಿ: ಆಟೋದಲ್ಲಿ ಹೋಗುತ್ತಿರುವಾಗಲೇ ಸೈಡ್‌ಗೆ ಇಟ್ಟುಕೊಂಡಿದ್ದ ಬ್ಯಾಗ್‌ ಕದ್ದುಕೊಂಡು ಓಡಿಹೋದ ಕಳ್ಳರನ್ನು ಹಿಡಿಯಲು ಆಟೋದಿಂದ ಜಿಗಿದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೆಹಲಿಯಲ್ಲಿ ನಡೆದಿದೆ.12 ದಿನಗಳ ಹಿಂದೆ ಈ ಘಟನೆ ನಡೆದಿತ್ತು.ಮಹಿಳೆ ಆಟೋದಲ್ಲಿ ಚಲಿಸುತ್ತಿದ್ದ ವೇಳೆ ಸೈಡ್‌ಗೆ ಬ್ಯಾಗ್‌ ಹಿಡಿದು ಕುಳಿತಿದ್ದರು. ಈ ಸಮಯದಲ್ಲಿ ಕಳ್ಳರು ಬ್ಯಾಗ್‌ ಎಳೆದುಕೊಂಡಿದ್ದಾರೆ. ಈ ಸಮಯದಲ್ಲಿ ವಿಚಲಿತರಾದ ಮಹಿಳೆ ಬ್ಯಾಗ್‌ ಕಳ್ಳತನದಿಂದ ತಪ್ಪಿಸಲು ಆಟೋದಿಂದ ಜಿಗಿದುಬಿಟ್ಟಿದ್ದಾರೆ. ಈ ಸಮಯದಲ್ಲಿ ತಲೆಗೆ ಪೆಟ್ಟಾಗಿ ತೀವ್ರವಾಗಿ ಗಾಯವಾಗಿತ್ತು. 12 ದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಇಂದು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.ಘಟನೆ ನಡೆದ ತಕ್ಷಣ ಸಿಸಿಟಿವಿ ಫುಟೇಜ್‌ ಆಧಾರದ ಮೇಲೆ ಮನೀಷ್ (41) ಮತ್ತು ಮೋಹಿತ್ ಗುಪ್ತಾ (34) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಆರೋಪಿಗಳು ಪತ್ಪಗರ್ಂಜ್ ನಿವಾಸಿಗಳು. ಸದ್ಯ ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯ ಕಾಂಗ್ರೆಸ್ ನಾಯಕರಿಂದ ಶುಕ್ರವಾರ ರಾಹುಲ್ ಗಾಂಧಿ ಭೇಟಿ: ಹಿಜಾಬ್ ವಿವಾದದ ಬಗ್ಗೆ ಚರ್ಚೆ

Mon Feb 21 , 2022
ಬೆಂಗಳೂರು: ರಾಜ್ಯಾದ್ಯಂತ ನಡೆಯುತ್ತಿರುವ ಹಿಜಾಬ್ ವಿವಾದವನ್ನು ವಿಧಾನಸಭೆಯಲ್ಲಿ ಚರ್ಚಿಸಿ ಗದ್ದಲ ಎಬ್ಬಿಸಲು ಕಾಂಗ್ರೆಸ್ ಸಿದ್ಧತೆ ನಡೆಸಿದೆ, ಇದರ ಜೊತೆಗೆ ಕೇಸರಿ ಧ್ವಜದ ಬಗ್ಗೆ ಸಚಿವ ಈಶ್ವರಪ್ಪ ನೀಡಿರುವ ಹೇಳಿಕೆ ಸಂಬಂಧ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಪಟ್ಟು ಹಿಡಿದಿದೆ.ಈ ಹಿನ್ನೆಲೆಯಲ್ಲಿ ಶುಕ್ರವಾರ ನವದೆಹಲಿಯಲ್ಲಿ ಪಕ್ಷದ ಕೇಂದ್ರ ನಾಯಕತ್ವವು ರಾಜ್ಯ ನಾಯಕರನ್ನು ಚರ್ಚೆಗೆ ಆಹ್ವಾನಿಸಿದೆ. ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ […]

Advertisement

Wordpress Social Share Plugin powered by Ultimatelysocial