ಕುರಿ, ಮೇಕೆ (Sheep, Goat Sale) ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.

ಜುಲೈ 10ಕ್ಕೆ ಬಕ್ರೀದ್ ಹಬ್ಬ (Bakrid Festival) ಹಿನ್ನೆಲೆ ರಾಜಧಾನಿ ಬೆಂಗಳೂರಿನಲ್ಲಿ ಕುರಿ, ಮೇಕೆ (Sheep, Goat Sale) ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಚಾಮರಾಜಪೇಟೆ ಪೇಟೆ, ಫ್ರೇಜರ್ ಟೌನ್, ಶಿವಾಜಿನಗರ, HBR ಲೇಔಟ್ ಭಾಗದಲ್ಲಿ ಕುರಿ ವ್ಯಾಪಾರ ಜೋರಾಗಿದೆ.
ಕಳೆದ ಎರಡು ವರ್ಷಗಳಿಂದ ಕೊರೊನಾ (Corona Pandemic) ಹಿನ್ನೆಲೆ ವ್ಯಾಪಾರ ಇಳಿಮುಖವಾಗಿತ್ತು. ಈ ಬಾರಿ ಯಾವುದೇ ಕೊರೊನಾ ಕಠಿಣ ನಿಯಮಗಳಿಲ್ಲದ (COVID 19 Rules) ಕಾರಣ ಮುಸ್ಲಿಂ ಬಾಂಧವರು ಹಬ್ಬವನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಕೊರೊನಾ ಹೊಡೆತದಿಂದ ಎರಡು ವರ್ಷ ವ್ಯಾಪಾರ ಇರಲಿಲ್ಲ. ಈ ವರ್ಷ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ರಾಜ್ಯದ ಹಲವು ಭಾಗಗಳಿಂದ ಹಲವು ತಳಿಗಳ ಕುರಿಗಳು ನಗರಕ್ಕೆ ಮಾರಾಟಕ್ಕೆ ಆಗಮಿಸಿವೆ. ಗುಜರಾತ್, ಮಹಾರಾಷ್ಟ್ರ, ರಾಜಸ್ಥಾನ್ ನಿಂದಲೂ ಹಲವು ತಳಿಗಳ ಕುರಿಗಳು ಬಂದಿದ್ದು, ಒಂದರ ಬೆಲೆ 17 ಸಾವಿರ ರೂ.ಗಳಿಂದ 80 ಸಾವಿರ ರೂ.ಗಳಷ್ಟಿದೆ.
ಇನ್ನೂ ಬನ್ನೂರು, ಅಮಿನ್‌ಘಢ್, ಮಳವಳ್ಳಿ, ಗುಜರಾತ್, ಮಹಾರಾಷ್ಟ್ರ ಕುರಿಗಳಿಗೆ ಭಾರೀ ಬೇಡಿಕೆ ಬಂದಿದೆ. ಗುಜರಾತ್ ತಳಿಯ ಕುರಿಗಳು ಬರೋಬ್ಬರಿ 80 ಸಾವಿರ ರೂ. ಆಸುಪಾಸಿನಲ್ಲಿ ಮಾರಾಟ ಆಗುತ್ತಿವೆ. ಹಬ್ಬಕ್ಕೆ ನಾಲ್ಕು ದಿನ ಬಾಕಿ ಇರುವಂತೆ ಕುರಿ ಮೇಕೆ ಕೊಳ್ಳಲು ಜನರು ಮುಂದಾಗುತ್ತಿದ್ದಾರೆ.
ಬೆಂಗಳೂರಿನ ಸುತ್ತಮುತ್ತಿನ ರೈತರು ಕುರಿ, ಮೇಕೆಗಳ ಆಹಾರದ ಜೊತೆ ಆಗಮಿಸುತ್ತಿದ್ದಾರೆ. ಒಂದು ಚಿಕ್ಕ ಹುಲ್ಲಿನ ಕಟ್ಟು 50 ರಿಂದ 100 ರೂ.ವರೆಗೆ ಮಾರಾಟ ಆಗ್ತಿದೆ.
ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ
ಬಕ್ರೀದ್ ಹಿನ್ನೆಲೆ ಅಕ್ರಮ ಗೋಸಾಗಾಟ, ತಾತ್ಕಾಲಿಕ ಕಸಾಯಿಖಾನೆಗಳ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಬೆಂಗಳೂರು ನಗರ ಅಪರ ಜಿಲ್ಲಾಧಿಕಾರಿ ಅನಿತಾ ಲಕ್ಷ್ಮೀ ಅವರಿಗೆ ಹಿಂದೂ ಜನಜಾಗೃತಿ ಸಮಿತಿ ಸದಸ್ಯರು ಮನವಿ ಪತ್ರ ಸಲ್ಲಿಸಿದ್ದಾರೆ.ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿಜುಲೈ 10 ರಂದು ಮುಸ್ಲಿಮರ ಬಕ್ರೀದ್ ಹಬ್ಬ ಆಚರಣೆ ಇದೆ. ಬೆಂಗಳೂರು ನಗರಕ್ಕೆ ಬೇರೆ ಬೇರೆ ನಗರಗಳಿಂದ ಅಕ್ರಮವಾಗಿ ಗೋ ಸಾಗಾಟ ಮಾಡಲಾಗುತ್ತದೆ. ರಾಜಧಾನಿಗೆ ಬರುವ ಟ್ರಕ್, ಲಾರಿಗಳನ್ನು ಚೆಕ್ ಪೋಸ್ಟ್ ಮೂಲಕ ತಪಾಸಣೆ ಮಾಡಬೇಕು.
ತಾತ್ಕಾಲಿಕ ಕಸಾಯಿಖಾ‌ನೆಗೆ ಅನುಮತಿ ಬೇಡ
ಮುಸ್ಲಿಮರು ಹೆಚ್ಚು ವಾಸವಾಗಿರುವ ಟ್ರ್ಯಾನಿ ರೋಡ್, ಪ್ರೇಜರ್ ಟೌನ್, ಎಂ.ಎಸ್ ಪಾಳ್ಯ, ಶಿವಾಜಿನಗರ ಹಾಗೂ ಪಾದರಾಯನಪುರ ಏರಿಯಾಗಳಲ್ಲಿ ಅಕ್ರಮವಾಗಿ ಗೋಹತ್ಯೆ ಮಾಡಲಾಗುತ್ತದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ.
ಇಂತಹ ಸ್ಥಳಗಳಲ್ಲಿ ವಿಶೇಷ ಪೊಲೀಸ್ ಪೋರ್ಸ್ ನೇಮಿಸಬೇಕು. ಅಧಿಕೃತ ಖಸಾಯಿಖಾನೆಯನ್ನು ಹೊರತುಪಡಿಸಿ ತಾತ್ಕಾಲಿಕ ಕಸಾಯಿಖಾ‌ನೆ ಅನುಮತಿ ನೀಡಬಾರದು. ಸರ್ಕಾರದ ಆದೇಶ ಉಲ್ಲಂಘನೆ ಮಾಡಿದಂತೆ ತಾತ್ಕಾಲಿಕ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಿದೆ.
Bakrid: ತ್ಯಾಗ-ಬಲಿದಾನದ ಸಂಕೇತ ಬಕ್ರೀದ್​ ಆಚರಣೆಯ ಇತಿಹಾಸ, ಮಹತ್ವ ಗೊತ್ತಾ?
ಪವಿತ್ರ ರಂಜಾನ್ ತಿಂಗಳ ನಂತರ ಸುಮಾರು 70 ದಿನಗಳ ನಂತರ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತದೆ. ಬಕ್ರೀದ್ ದಿನಾಂಕವನ್ನು ಚಂದ್ರನ ದರ್ಶನದಿಂದ ನಿರ್ಧರಿಸಲಾಗುತ್ತದೆ. ಮುಸ್ಲಿಂ ಧರ್ಮಗ್ರಂಥಗಳ ಪ್ರಕಾರ, ಬಕ್ರೀದ್ ಹಬ್ಬವನ್ನು ಪ್ರತಿ ವರ್ಷ ಇಸ್ಲಾಮಿಕ್ ಕ್ಯಾಲೆಂಡರ್‌ನ ಕೊನೆಯ ತಿಂಗಳ ಜು-ಅಲ್-ಹಿಜ್‌ನಲ್ಲಿ ಆಚರಿಸಲಾಗುತ್ತದೆ. ಇದನ್ನು ಈದ್-ಉಲ್-ಅಧಾ ಹಾಗೂ ಬಕ್ರೀದ್​​ ಎಂದೂ ಕರೆಯುತ್ತಾರೆ. ಬಕ್ರೀದ್ ಹಬ್ಬವು ತ್ಯಾಗದ ಸಂದೇಶವನ್ನು ನೀಡುತ್ತದೆ. ಅಂದರೆ ದೇವರು ತೋರಿಸಿದ ದಾರಿಯಲ್ಲಿ ನಡೆಯಬೇಕು.
; Ancient Building: ರಾಮನಗರದಲ್ಲಿ ಪತ್ತೆಯಾಗಿದೆ ಟಿಪ್ಪು ಕಾಲದ ನೆಲಮಾಳಿಗೆ
ಮುಸ್ಲಿಂ ಧರ್ಮದ ನಂಬಿಕೆಯ ಪ್ರಕಾರ, ಹಜರತ್ ಇಬ್ರಾಹಿಂ ದೇವರ ಸೇವಕರಾಗಿದ್ದರು, ಅವರು ದೇವರಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದರು. ಒಮ್ಮೆ ಹಜರತ್ ಇಬ್ರಾಹಿಂ ತನ್ನ ಪ್ರಾಣಕ್ಕಿಂತ ಪ್ರೀತಿಯ ಒಬ್ಬನೇ ಮಗನನ್ನು ತ್ಯಾಗ ಮಾಡುವ ಕನಸು ಕಂಡರು. ಹಜರತ್ ಇಬ್ರಾಹಿಂ ಈ ಕನಸನ್ನು ದೇವರ ಸಂದೇಶವೆಂದು ಪರಿಗಣಿಸಿ, ಈ ಕನಸನ್ನು ಅಲ್ಲಾಹನ ಇಚ್ಛೆಯಂತೆ ಸ್ವೀಕರಿಸಿ, ದೇವರ ಮಾರ್ಗದಲ್ಲಿ ತನ್ನ 10 ವರ್ಷದ ಮಗನನ್ನು ಬಲಿಕೊಡಲು ನಿರ್ಧರಿಸಿದನು.
ಹಜರತ್ ಇಬ್ರಾಹಿಂ ಮಗನ ಬಲಿ ಕೊಡುವ ಮುನ್ನ ಅಲ್ಲಾಹನು ತನ್ನ ದೂತರನ್ನು ಕಳುಹಿಸಿ ಮಗನ ಬದಲಾಗಿ ಮೇಕೆಯನ್ನು ಬಲಿ ಕೊಡುವಂತೆ ತಿಳಿಸಿದನು ಎಂದು ಹೇಳಲಾಗುತ್ತದೆ. ಅಂದಿನಿಂದ, ಈದ್-ಉಲ್-ಅಝಾ ಅಥವಾ ಬಕ್ರೀದ್ ದಿನದಂದು ಮೇಕೆಯನ್ನು ಬಲಿಕೊಡುವ ಸಂಪ್ರದಾಯ ಪ್ರಾರಂಭವಾಯಿತು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್,

Wed Jul 6 , 2022
ಮೈಸೂರು: ಅಭಿವೃದ್ಧಿ ವಿಚಾರದಲ್ಲಿ ಸಂಸದ ಪ್ರತಾಪ್ ಸಿಂಹ ಮತ್ತು ಕಾಂಗ್ರೆಸ್ ನಡುವೆ ಕ್ರೆಡಿಟ್ ವಾರ್, ವಾದ, ವಾಗ್ವದ ಮುಂದುವರೆದಿದ್ದು ಈ ಮಧ್ಯೆ ಬಹಿರಂಗ ಚರ್ಚೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ದಿನಾಂಕ ನಿಗದಿ ಮಾಡಿದ್ದರು. ಅಂತೆಯೇ ಕಾಂಗ್ರೆಸ್ ಕಚೇರಿ ಆವರಣದಿಂದ ಸಂಸದ ಪ್ರತಾಪ್ ಸಿಂಹ ಕಚೇರಿವರೆಗೆ ಎಂ.ಲಕ್ಷ್ಮಣ್ ನೇತೃತ್ವದಲ್ಲಿ ಕತ್ತೆ ಜೊತೆ ಮೆರವಣಿಗೆ ಹೊರಡುವ ಮೂಲಕ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನ ದಾಸಪ್ಪ ವೃತ್ತದಲ್ಲಿ ಪೊಲೀಸರು ತಡೆದರು. ಈ ವೇಳೆ […]

Advertisement

Wordpress Social Share Plugin powered by Ultimatelysocial