ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ

ಬೆಂಗಳೂರು ಸ್ವತಂತ್ರ ಉದ್ಯಾನವನದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟ(ರಿ) ಬೆಂಗಳೂರು ಮತ್ತು ಪೂಜ್ಯ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮಿಗಳ ಮತ್ತು ಬಂಜಾರ, ಕೊರಚ, ಕೊರಮ ಮತ್ತು ವಿವಿಧ ಜಾತಿ ಮಠಾಧೀಶರ ನೇತೃತ್ವದಲ್ಲಿ ನಡೆದ ಸಂವಿಧಾನ ವಿರೋಧಿ ಅಂಶಗಳನ್ನು ಒಳಗೊಂಡಿರುವ ನ್ಯಾಯಮೂರ್ತಿ ಎ.ಜೆ ಸದಾಶಿವ ಆಯೋಗದ ವರದಿಯನ್ನು ವಿರೋಧಿಸಿ, ಕಲಬುರಗಿ ಜಿಲ್ಲೆಯ ವಕೀಲರಾದ ಶ್ರೀ ರವಿಚಂದ್ರ ಗುತ್ತೇದಾರ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಂಘ (ರಿ). ರವರ ನೇತೃತ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಶಕ್ತಿ ತುಂಬಿ ನ್ಯಾ. ಸದಾಶಿವ ಆಯೋಗದ ವರದಿ ಅಭಿವೃದ್ಧಿ ವಿರುದ್ಧ ಮತ್ತು ರಾಜ್ಯ ಸರ್ಕಾರದ ನಡೆಯ ವಿರುದ್ಧ ಉಗ್ರವಾಗಿ ಖಂಡಿಸಿ ಮಾತನಾಡಿದರು. 99 ದಮನಿತ ಸಮುದಾಯದ ಸಹೋದರರು ಇಂದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ಸ್ವತಂತ್ರ ಉದ್ಯಾನದವರೆಗೆ ಲಕ್ಷೋಪಲಕ್ಷ ಜನಸಂಖ್ಯೆಯ ಬೃಹತ್ ಕಾಲ್ನಡಿಗೆಯ ಮೆರವಣಿಗೆಯಲ್ಲಿ ಸಾಗಿ, ಹೋರಾಟದ ಸ್ವಾಭಿಮಾನದ ಕಿಚ್ಚಿನ ಮಂತ್ರಗಳನ್ನು ಪಟಿಸುತ್ತಾ,, ಐತಿಹಾಸಿಕ ಸಮಾವೇಶದಲ್ಲಿ ಜೊತೆಯಾಗಿ, ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸುವ ನಿಟ್ಟಿನಲ್ಲಿ ಒಗ್ಗಟ್ಟನ್ನು ಪ್ರದರ್ಶಿಸಿದೆವು. ತದನಂತರ ಘನ ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಆಗಮಿಸಿದ್ದ, ಕಂದಾಯ ಸಚಿವರಾದ ಸನ್ಮಾನ್ಯ ಆರ್ ಆಶೋಕ್ ರವರಿಗೆ ಮನವಿ ಪತ್ರವನ್ನು ಸಲ್ಲಿಸಿ, ಹಕ್ಕೊತ್ತಾಯಗಳನ್ನು ಮಂಡಿಸಲಾಯಿತು.*
ಮನವಿ ಸ್ವೀಕರಿಸಿದ ನಂತರ ಮಾನ್ಯ ಕಂದಾಯ ಸಚಿವರು ಮಾತನಾಡಿ, ಘನ ಸರ್ಕಾರವು ಸದಾ ನಿಮ್ಮೊಟ್ಟಿಗಿದ್ದು, ಯಾವುದೇ ಕಾರಣಕ್ಕೂ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡುವುದಿಲ್ಲವೆಂದು ಈಗಿರುವ ಮೀಸಲಾತಿಯಿಂದ ವಂಚಿಸುವುದಿಲ್ಲವೆಂದು ಮಾತು ಕೊಟ್ಟರು.ಈ ಸಂದರ್ಭದಲ್ಲಿ ರಾಜ್ಯದ 99 ದಮನಿತ ಸಮುದಾಯದ ಪರಮಪೂಜ್ಯರು, ಮುಖಂಡರುಗಳು ಹಾಗೂ ಮಹಿಳೆಯರನ್ನೊಳಗೊಂಡಂತೆ ಜನಸಾಮಾನ್ಯರು ಪಾಲ್ಗೊಂಡು ಐತಿಹಾಸಿಕ ಹೋರಾಟಕ್ಕೆ ಸಾಕ್ಷಿಯಾದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಮೃತ್ಯು.

Fri Jan 13 , 2023
ಕಾಸರಗೋಡು: ಶಾಲಾ ಬಸ್ ಮತ್ತು ಬೈಕ್ ನಡುವೆ ಉಂಟಾದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಮಿಯಪದವಿನ ಸಮೀಪದ ಬಾಳಿಯೂರು ಎಂಬಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿರುವುದಾಗಿ ವರದಿಯಾಗಿದೆ. ಮೃತಪಟ್ಟವರನ್ನು ಮಿಯಾಪದವು ದರ್ಬೆಯ ಹರೀಶ್ ಎಂಬವರ ಪುತ್ರ ಪ್ರೀತೇಶ್ ಶೆಟ್ಟಿ (20), ಬೆಜ್ಜಂಗಳದ ಸುರೇಶ್ ಎಂಬವರ ಪುತ್ರ ಅಭಿಷೇಕ್ ಎಂ. (20) ಎಂದು ತಿಳಿದುಬಂದಿದೆ. ಇವರಿಬ್ಬರು ಮಂಗಳೂರು ಖಾಸಗಿ ಕಾಲೇಜೊಂದರ ಪದವಿ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ. ವಿದ್ಯಾರ್ಥಿಗಳು ಬೈಕ್ […]

Advertisement

Wordpress Social Share Plugin powered by Ultimatelysocial