ಬ್ಯಾನರ್ ತೆರವುಗೊಳಿಸಿದ ಪುರಸಭೆ ಅಧಿಕಾರಿಗಳ ವಿರುದ್ದ ಕಿಸಾನ ಜಾಗೃತಿ ಸಂಘ ಆಕ್ರೋಶ.

ಲಕ್ಷ್ಮೇಶ್ವರ ಪುರಸಭೆ ವತಿಯಿಂದ ರಾತ್ರೋರಾತ್ರಿ ಕಿಸಾನ ಜಾಗೃತಿ ಸಂಘದ ಬ್ಯಾನರ್‌ ತೆರವುಗೊಳಿಸಿದಕ್ಕೆ ಪುರಸಭೆಯ ಅಧಿಕಾರಿಗಳ ವಿರುದ್ಧ ಬ್ಯಾನರ್ ಕೊಡುವ ಮೂಲಕ ಕಿಸಾನ ಜಾಗೃತಿ ವಿಕಾಸ ಸಂಘದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಂಡರಗಿ ಪಟ್ಟಣದಲ್ಲಿ ಡಿಸೆಂಬರ್ 19 ರಂದು ಸಂಘದ ವತಿಯಿಂದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಹಾಗೂ ಡಾ|| ಪುನೀತರಾಜಕುಮಾರ ಸ್ಮರಣಾರ್ಥವಾಗಿ 75 ಜೋಡಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ಹಿನ್ನೆಲೆ ಫ್ಲೆಕ್ಸ್ ಮತ್ತು ಬ್ಯಾನರ್ ಅಳವಡಿಸಲಾಗಿತ್ತು.ಪಟ್ಟಣದ ಪಂಪ ಸರ್ಕಲನಲ್ಲಿರುವ ಬ್ಯಾನರ್ ನ್ನು ಪುರಸಭೆಯವರು ತೆರವು ಗೊಳಿಸಿ ರೈತ ಸಮೂಹಕ್ಕೆ ನೋವುಂಟು ಮಾಡಿದ್ದಾರೆ. ಹಾಗಾಗಿ ಪಟ್ಟಣದಲ್ಲಿ ಹಾಕಿರುವ ಸಂಘದ ಬ್ಯಾನರ್ ಗಳನ್ನು ಕಿತ್ತು ಪುರಸಭೆಗೆ ಕೊಟ್ಟು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ನಾವು ಪುರಸಭೆಯಿಂದ ಪರವಾನಿಗೆ ತಗೆದುಕೊಂಡು ಬ್ಯಾನರ್ ಹಾಕಿದರು ತೆರವುಗೊಳಿಸಿದ್ದಾರೆ. ಆದರೆ ತಿಂಗಳ ಗಟ್ಟಲೆ ರಾಜಕೀಯ ವ್ಯಕ್ತಿಗಳ ಇದ್ದರು ಬ್ಯಾನರ್ ತೆರವು ಏಕಿಲ್ಲ? ಇಂತಹ ರಾಜಕೀಯ ಸರಿಯಿಲ್ಲ. ರಾಜಕೀಯ ವ್ಯಕ್ತಿಗಳು ಪರವಾನಗಿ ಪಡೆದಿದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಕೀಲ ಮಂಜುನಾಥ್ ರವರಿಂದ ಸುದ್ದಿಗೋಷ್ಠಿ...

Wed Dec 14 , 2022
ಸಂತೆಮರಳ್ಳಿ ಪ್ರವಾಸಿ ಮಂದಿರದಲ್ಲಿ ಮೂಗೂರು ಗ್ರಾಮದ ವಕೀಲ ಎನ್.ಮಂಜುನಾಥ ರವರು ಸುದ್ದಿಘೋಷ್ಠಿ ನಡೆಸಿದರು….ಸ್ವ ಗ್ರಾಮದಲ್ಲಿ ಮನೆ ನಿರ್ಮಾಣ ಮಾಡುವಾಗ ಪಕ್ಕದ ಮನೆಯಯವರು ಉದ್ದೇಶ ಪೂರ್ವಕವಾಗಿ ಗಲಾಟೆ ಮಾಡಿ ನನ್ನ ಮೇಲೆ ಹಲ್ಲೆ ಮಾಡಿ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ…..ಈ ಸಂಬಂಧವಾಗಿ ನರಸೀಪುರ ಪೊಲೀಸ್ ಠಾಣೆಯಲ್ಲಿ 5 ಜನರ ಮೇಲೆ ಇದೆ ತಿಂಗಳು 09ತಾರೀಕಿನಂದು FIR ಆಗಿರುತ್ತದೆ….ಆರೋಪಿಗಳು ಗ್ರಾಮದಲ್ಲಿ ರಾಜಾರೋಷವಾಗಿ ಓಡಾಡುತ್ತಿದ್ದರು ಪೊಲೀಸರು ಬಂಧಿಸಿಲ್ಲ. ಒಬ್ಬ ವಕೀಲರ ಪರಿಸ್ಥಿತಿ ಈ ತರವಾದರೆ ಇನ್ನೂ […]

Advertisement

Wordpress Social Share Plugin powered by Ultimatelysocial