ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

‘ಬಪ್ಪಿ ಲಹಿರಿ ಅವರ ಸಂಗೀತವು ಎಲ್ಲವನ್ನೂ ಒಳಗೊಳ್ಳುತ್ತಿದ್ದುದಲ್ಲದೆ, ವೈವಿಧ್ಯಮಯ ಭಾವನೆಗಳನ್ನು ಸುಂದರವಾಗಿ ಪ್ರಕಟಗೊಳಿಸುತ್ತಿತ್ತು.

ಅವರ ಸಂಗೀತ ನಿರ್ದೇಶನ, ಗಾಯನವು ತಲೆಮಾರುಗಳನ್ನು ಸೆಳೆದಿತ್ತು. ಅವರ ಲವಲವಿಕೆಯನ್ನು ಎಲ್ಲರೂ ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ನಿಧನದಿಂದ ದುಃಖವಾಗಿದೆ. ಸಂತಾಪಗಳು, ಓಂ ಶಾಂತಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

‘ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಬಪ್ಪಿ ಲಹಿರಿ ನಿಧನದಿಂದ ಬಹಳ ನೋವಾಗಿದೆ. ಅವರ ನಿಧನದಿಂದ ಭಾರತದ ಸಂಗೀತ ಕ್ಷೇತ್ರದಲ್ಲಿ ದೊಡ್ಡ ನಿರ್ವಾತ ಸೃಷ್ಟಿಯಾಗಿದೆ. ‘ಬಪ್ಪಿ ದಾ’ ಅವರು ತಮ್ಮ ಗಾಯನ ಹಾಗೂ ಉತ್ಸಾಹಭರಿತ ಸ್ವಭಾವದಿಂದಾಗಿ ಸದಾ ನೆನಪಿನಲ್ಲುಳಿಯುತ್ತಾರೆ’ ಎಂದು ಅಮಿತ್ ಶಾ ಟ್ವೀಟ್ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪದೇ ಪದೇ ನಿಮಗೆ ಆರೋಗ್ಯ ಕೈ ಕೊಟ್ಟಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ!

Wed Feb 16 , 2022
ಪದೇ ಪದೇ ನಿಮಗೆ ಆರೋಗ್ಯ ಕೈ ಕೊಟ್ಟಾಗ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಈ ಕೆಲವು ತರಕಾರಿಗಳನ್ನು ಸೇವಿಸುವ ಮುಖಾಂತರ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ದೇಹದಲ್ಲಿ ಬಿಳಿ ರಕ್ತಕಣ ಹೆಚ್ಚಾಗಬೇಕಾದರೆ ವಿಟಮಿನ್ ಸಿ ದೇಹಕ್ಕೆ ಬೇಕು.ಇದು ನಿಂಬೆಹಣ್ಣು, ಕಿತ್ತಳೆ, ಮೂಸುಂಬೆ ಮತ್ತು ಹುಣಸೆ ಹುಳಿಯಿಂದ ಸಿಗುತ್ತದೆ. ಈ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಈ ಹಣ್ಣುಗಳಿಂದಲೂ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ಲಭ್ಯವಿರುವುದು ಕ್ಯಾಪ್ಸಿಕಂನಲ್ಲಿ. ಹಾಗಾಗಿ ಇದನ್ನು […]

Advertisement

Wordpress Social Share Plugin powered by Ultimatelysocial