ಸೆಲ್ಯೂಟ್ ಹೊಡೆಯುತ್ತಿದ್ದ ಅದೇ‌ ಮೈದಾನದಲ್ಲಿ ಗೌರವ ಸ್ವೀಕರಿಸುತ್ತಿದ್ದೇನೆ:ಬಿ.ಸಿ.ಪಾಟೀಲ್

 ಚಿತ್ರದುರ್ಗದಲ್ಲಿ ನಾನು ಪೊಲೀಸ್ ಅಧಿಕಾರಿಯಾಗಿದ್ದಾಗ ಇದೇ ಮೈದಾನದಲ್ಲಿ ಸೆಲ್ಯೂಟ್ ಹೊಡೆಯುತ್ತಿದ್ದೆ. ಇಂದು ಅದೇ‌ ಮೈದಾನದಲ್ಲಿ ಗೌರವ ಸ್ವೀಕರಿಸುತ್ತಿದ್ದೇನೆ, ಇದು ನನ್ನ ಪುಣ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದೆ, ಆಗ ಇಲ್ಲಿನ ಪೆರೇಡ್ ನಲ್ಲಿ ಅಧಿಕಾರಿಯಾಗಿ ಭಾಗವಹಿಸಿದ್ದೆ, ಈಗ ಸಚಿವನಾಗಿ ಭಾಗವಹಿಸಲು ಸರ್ಕಾರ ಅವಕಾಶ ಕಲ್ಪಿಸಿದೆ. ಇಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದಾಗಲೇ ಚಿತ್ರರಂಗ ಪ್ರವೇಶಿಸಿ ಖಳನಾಯಕ, ನಾಯಕ ನಟನಾಗಿ ಈಗ ಮಂತ್ರಿಯಾಗಿದ್ದೇನೆ. ಇಂದು ತವರು ಮನೆಗೆ ಬಂದಷ್ಟು ಖುಷಿಯಾಗಿದೆ ಎಂದು ಸಂತಸ ಹಂಚಿಕೊಂಡರು.

ಜಿಲ್ಲೆಯ ಮಣ್ಣಿನ ಗುಣ ಗೊತ್ತಿದೆ, ಇದು ಕೋಟೆ, ಕಲ್ಲುಗಳನ್ನು ಬಂಡೆಗಳ ನಾಡಾಗಿದ್ದರೂ ಇಲ್ಲಿನ ಜನರ ಹೃದಯ ಮೃದು. ನಮ್ಮ ಸರ್ಕಾರ ನೆಲ-ಜಲ-ಜನರ ರಕ್ಷಣೆಗೆ ಬದ್ಧವಾಗಿದೆ ಎಂದರು.

2023 ರಲ್ಲಿ ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್ ನಂತರ ರಾಜ್ಯಮಟ್ಟದ ಸಿರಿಧಾನ್ಯ ಮೇಳ ನಡೆಸಲಾಗುವುದು ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

LIC:ಗ್ರಾಹಕರು ಮತ್ತು ಏಜೆಂಟರಿಗೆ ಉಚಿತ ʻಕ್ರೆಡಿಟ್ ಕಾರ್ಡ್ʼ

Wed Jan 26 , 2022
LIC Credit Card: ಪ್ರಮುಖ ವಿಮಾ ಕಂಪನಿ ಎಲ್‌ಐಸಿ (LIC) ಈಗಾಗಲೇ ವಿವಿಧ ಕೊಡುಗೆಗಳನ್ನು ಘೋಷಿಸುವ ಮೂಲಕ ಪಾಲಿಸಿದಾರರನ್ನು ಮೆಚ್ಚಿಸುತ್ತದೆ. ಗೃಹ ಸಾಲದಂತಹ ಪ್ರಯೋಜನಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುವ ಎಲ್‌ಐಸಿ ಇತ್ತೀಚೆಗೆ ಪಾಲಿಸಿದಾರರಿಗೆ ಮತ್ತೊಂದು ಅವಕಾಶವನ್ನು ತಂದಿದೆ. ತಮ್ಮ ಗ್ರಾಹಕರು ಮತ್ತು ಏಜೆಂಟರಿಗೆ ಉಚಿತ ಕ್ರೆಡಿಟ್ ಕಾರ್ಡ್ ನೀಡುವುದಾಗಿ ಘೋಷಿಸಿದ್ದಾರೆ. ಈ ಕಾರ್ಡ್‌ಗಳನ್ನು ಐಡಿಬಿಐ ಬ್ಯಾಂಕ್‌ನ ಸಹಯೋಗದೊಂದಿಗೆ ಲಭ್ಯವಾಗುವಂತೆ ಮಾಡಲಾಗುವುದು. ಕ್ರೆಡಿಟ್ ಕಾರ್ಡ್ ಬಳಸುವುದರಿಂದ ಹಲವು ಪ್ರಯೋಜನಗಳಿವೆ. ಎಲ್‌ಐಸಿ ಲುಮಿನ್ ಕಾರ್ಡ್ […]

Advertisement

Wordpress Social Share Plugin powered by Ultimatelysocial