ಮಾವಿನ ಹಣ್ಣು ತಿನ್ನುವ ಮುನ್ನ ಎಚ್ಚರ!

 

ಹಾ! ಎಲ್ಲೆಡೆ ಮಾವಿನ ಘಮಲು ಹರಡಲು ಆರಂಭವಾಗುತ್ತಿದೆ. ಮಾವನ್ನು ಖರೀದಿಸಲು ಅಂಗಡಿಗಳಿಗೆ ಮುಗಿ ಬೀಳುವ ಸಮಯ. ಈ ಬಾರಿ ಮಳೆ ನಿಧಾನ ಆಗಿದ್ದರಿಂದ ತಡವಾಗಿ ಮಾರುಕಟ್ಟೆ ಪ್ರವೇಶಿಸುತ್ತದೆ. ಆದರೆ ಮಾವು ಸವಿಯುವ ಮುನ್ನ ಆರೋಗ್ಯದ ಮೇಲೂ ಕಾಳಜಿ ವಹಿಸಿದರೆ ಒಳಿತಲ್ಲವೇ.!

ಮಲ್ಗೋವಾ ಸೇರಿದಂತೆ ಮಲ್ಲಿಕ, ತೋತಾಪುರಿ, ಅಪ್ಪೆಮಿಡಿ, ಸೇಂಧೂರ, ವಾಲಜಾ, ಬೈಗನಪಲ್ಲಿ, ಕೇಸರ್, ರತ್ನಗಿರಿ ಹಣ್ಣುಗಳ ಮಾರಾಟ ವಿರಳವಾಗಿದ್ದರೂ ಬೆಲೆಗಳು ಮಾತ್ರ ಗಗನಮುಖಿಯಾಗಿ ಕೈ ಸುಡುತ್ತಿದೆ. ಈಗಷ್ಟೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಮಾವಿನ ಹಣ್ಣಿನ ಬೆಲೆ ಕೆಜಿಗೆ 100ರಿಂದ 250ರೂ.ವರೆಗೂ ಇದೆ. ಆದರೂ ಸಹ ಖರೀದಿಸುವುದು ಕಡಿಮೆ ಮಾಡಿಲ್ಲ.

ತಿನ್ನುವಮುನ್ನಎಚ್ಚರ!

ಕೆಲ ವ್ಯಾಪಾರಿಗಳು ಮರದಲ್ಲಿರುವ ಕಾಯಿಗಳನ್ನೇ ಕಿತ್ತು ಹಣ್ಣು ಮಾಡಿ ಮಾರಾಟಕ್ಕೆ ಮುಂದಾಗುತ್ತಾರೆ, ಹಾಗಾಗಿ ಮಾವಿನ ಕಾಯಿಯನ್ನು ಹಣ್ಣು ಮಾಡಲು ರಾಸಾಯನಿಕ ಬಳಕೆ ಮಾಡುತ್ತಾರೆ. ಕ್ಯಾಲ್ಸಿಯಂ ಕಾರ್ಬೈಡ್ ಎಂಬ ರಾಸಾಯನಿಕ ವಸ್ತುವನ್ನು ಮಾವಿನ ಕಾಯಿಯನ್ನು ಹಣ್ಣಾಗಿ ಪರಿವರ್ತಿಸಲು ಬಳಕೆ ಮಾಡುತ್ತಿದ್ದು, ಇದು ಆರೋಗ್ಯದ ಮೇಲೆ ನಿಧಾನವಾಗಿ ಕೆಟ್ಟ ಪರಿಣಾಮ ಬೀರುತ್ತದೆ.

ಇದನ್ನುಹೇಗೆಪತ್ತೆಹಚ್ಚುವುದು ?

ಹಣ್ಣುಗಳು ಅಲ್ಲಲ್ಲಿ ಒಣಗಿದ ರೀತಿಯಲ್ಲಿ ಕಾಣುವುದು, ಅದರ ಮೇಲೆ ಚುಕ್ಕೆಗಳಿರುವುದು, ರುಚಿ ಇಲ್ಲದೇ ಇರುವುದು ಕಂಡುಬಂದರೆ ಅದು ರಾಸಾಯನಿಕ ವಸ್ತುವಿನಿಂದ ಮಾಗಿಸಿದ ಹಣ್ಣು ಎಂಬುವುದು ತಿಳಿಯುತ್ತದೆ.

ಇದರಿಂದಾಗುವಸಮಸ್ಯೆಗಳು:

ಈ ಹಣ್ಣುಗಳ ಸೇವೆನೆಯಿಂದ ಮೊದಲಿಗೆ ಹೊಟ್ಟೆ ನೋವು ಕಾಣಿಸಿಕೊಂಡರೆ ನಂತರ ನಿಧಾನವಾಗಿ ಗ್ಯಾಸ್ಟ್ರೀಕ್, ಉಬ್ಬಸ, ವಾಂತಿ, ಹೊಟ್ಟೆ ಹುರಿ, ಅತಿಸಾರದಂತಹ ಸಮಸ್ಯೆ ಗಳು ಕಾಣಿಸಿಕೊಳ್ಳುತ್ತದೆ. ಏನು ಆಗುವುದಿಲ್ಲವೆಂದು ತಿನ್ನಲು ಹೋದರೆ ಕರುಳಿನ ತೊಂದರೆಯಾಗುವುದರ ಜೊತೆಗೆ ಕ್ಯಾನ್ಸರ್ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮಾವು ಖರೀದಿಯ ಜೊತೆ ಅನಾರೋಗ್ಯವನ್ನು ತೆಗೆದುಕೊಂಡು ಹೋಗಬೇಡಿ ಎಂಬುದು ನಮ್ಮ ಕಾಳಜಿ !

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು ಡೌಟ್ ಎರಡು ಮೂರು ದಿನ ವಿಳಂಬ ಡಿಕೆಶಿ!

Wed Mar 22 , 2023
  ಬೆಂಗಳೂರು: ಯುಗಾದಿ ಹಬ್ಬದಂದೇ ಮೊದಲ ಪಟ್ಟಿ ಬಿಡುಗಡೆ ನಿರೀಕ್ಷೆಯಲ್ಲಿದ್ದ ಆಕಾಂಕ್ಷಿಗಳಿಗೆ ಕೆಪಿಸಿಸಿ ಅಧ್ಯಕ್ಷರು ನಿರಾಸೆ ಮೂಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದು, “ಇವತ್ತು ಮೊದಲ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಅದ್ರೆ ಇನ್ನೂ ಎರಡು ಮೂರು ದಿನಗಳಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡುತ್ತವೆ. ಮಲ್ಲಿಕಾರ್ಜುನ ಖರ್ಗೆ ಅವರು ಹಬ್ಬಕ್ಕೆ ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ಎರಡು ಮೂರು ದಿನಗಳಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇವೆ” ಎಂದರು. “ಕಳೆದ ಮೂರು ವರ್ಷಗಳಿಂದ ಜನ ಸಾಕಷ್ಟು […]

Advertisement

Wordpress Social Share Plugin powered by Ultimatelysocial