BEAUTY QUEEN:ಶ್ರುತಿ ಹರಿಹರನ್​ಗೆ ಹುಟ್ಟು ಹಬ್ಬದ ಸಂಭ್ರಮ,ಮತ್ತೆ ಶುರುವಾಗುತ್ತಾ ಜೋಶ್​?

ಬೆಂಗಳೂರು: ಕನ್ನಡದ ಬ್ಯೂಟಿಫುಲ್​ ನಟಿ ಶ್ರುತಿ ಹರಿಹರನ್ ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. 32 ವಸಂತ ಮುಗಿಸಿ, ಇದೀಗ 33ನೇ ವಸಂತಕ್ಕೆಅವರು ಕಾಲಿರಿಸಿದ್ದಾರೆ. ಬರೀ ಕನ್ನಡ ಅಷ್ಟೇ ಅಲ್ಲದೇ, ಮಲಯಾಳಂ, ತಮಿಳು ಹಾಗೂ ಹಿಂದಿ ಸಿನಿಮಾದಲ್ಲೂ ಶ್ರುತಿ ನಟಿಸಿದ್ದಾರೆ.

ಹೀಗಾಗಿ ಕನ್ನಡ ಚಿತ್ರರಂಗದ ಗಣ್ಯರು, ಸಹೋದ್ಯೋಗಿಗಳು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರರಂಗದ ಖ್ಯಾತನಾಮರು ಶ್ರುತಿ ಹರಿಹರನ್‌ಗೆ ಶುಭ ಹಾರೈಸಿದ್ದಾರೆ. ಅಲ್ಲದೇ ಅಭಿಮಾನಿಗಳೂ ಸಹ ತಮ್ಮ ನೆಚ್ಚಿನ ನಟಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಶ್ರುತಿ ಹರಿಹರನ್ ಜನಿಸಿದ್ದು ಫೆಬ್ರವರಿ 2, 1989ರಲ್ಲಿ. ತಮಿಳು ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಇವರು ಕೇರಳ ಮೂಲದವರು. ಬಳಿಕ ಬೆಂಗಳೂರಿಗೆ ಫ್ಯಾಮಿಲಿ ಶಿಫ್ಟ್ ಆಗಿದ್ದು, ಕ್ರೈಸ್ಟ್ ಕಾಲೇಜಿನಲ್ಲಿ ಶ್ರುತಿ ಹರಿಹರನ್ ಬಿಬಿಎಂ ನಲ್ಲಿ ಪದವಿ ಪಡೆದುಕೊಂಡರು. 2012ರಲ್ಲಿ ‘ಸಿನಿಮಾ ಕಂಪನಿ’ ಎಂಬ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶೃತಿ 2013ರಲ್ಲಿ ಪವನ್ ‘ಲೂಸಿಯಾ’ ಸಿನಿಮಾ ಮೂಲಕ ಕನ್ನಡದಲ್ಲಿ ಗಟ್ಟಿಯಾಗಿ ನೆಲೆ ಕಂಡುಕೊಂಡ್ರು. ನಿನಾಸಂ ಸತೀಶ್ ನಾಯಕನಾಗಿ ನಟಿಸಿದ್ದ ಲೂಸಿಯಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತು. ಅದರಲ್ಲಿ ನಾಯಕಿ ಶ್ವೇತಾ ಪಾತ್ರದಲ್ಲಿ ಅಭಿನಯಿಸಿದವರು ಶ್ರುತಿ ಹರಿಹರನ್. ಆ ಪಾತ್ರದ ಮೂಲಕವೇ ಶ್ರುತಿ ಸ್ಯಾಂಡಲ್‌ವುಡ್‌ನಲ್ಲಿ ಸ್ಟಾರ್​ ಆದ್ರು, ಆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಶೃತಿ ಎರಡು ವರ್ಷದ ಹಿಂದೆ ಮೀ ಟೂ ಕೇಸ್​ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿ ಕೆಲಕಾಲ ಚಿತ್ರರಂಗದಿಂದಲೂ ದೂರವಾಗಿದ್ರು. ಸದ್ಯ ಎರಡನೇ ಇನ್ನಿಂಗ್ಸ್​ ಆರಂಭಿಸಿರುವ ಅವರು ಹೆಡ್​ ಬುಷ್​, ಲೇಡಿಸ್​ ಟೈಲರ್​ ಮುಂತಾದ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022 ಹರಾಜು: ಬ್ಯಾಟರ್‌ಗಳು, ಬೌಲರ್‌ಗಳು ಮತ್ತು ಆಲ್‌ರೌಂಡರ್‌ಗಳು ಚೆನ್ನೈ ಸೂಪರ್ ಕಿಂಗ್ಸ್ ಖರೀದಿಸಬೇಕು

Wed Feb 2 , 2022
IPL 2022 ಹರಾಜುಗಳು – ಆಟಗಾರರು CSK ಖರೀದಿಸಬೇಕು: ನಾಲ್ಕು ಬಾರಿ IPL ವಿಜೇತರಾದ ಚೆನ್ನೈ ಸೂಪರ್ ಕಿಂಗ್ಸ್ 48 ಕೋಟಿ ರೂಪಾಯಿಗಳ ಪರ್ಸ್ ಮತ್ತು ಭರ್ತಿ ಮಾಡಲು 21 ಸ್ಲಾಟ್‌ಗಳೊಂದಿಗೆ ಹರಾಜನ್ನು ಪ್ರವೇಶಿಸುತ್ತದೆ. ಹಾಲಿ ಚಾಂಪಿಯನ್‌ಗಳು ನಾಯಕ ಎಂಎಸ್ ಧೋನಿ, ಆಲ್‌ರೌಂಡರ್ ಜೋಡಿ ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ ಮತ್ತು ಅಗ್ರ ಕ್ರಮಾಂಕದ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಸೇರಿದಂತೆ ನಾಲ್ಕು ಆಟಗಾರರನ್ನು ಉಳಿಸಿಕೊಂಡಿದ್ದಾರೆ. ಲೆಜೆಂಡರಿ ಧೋನಿಯನ್ನು ಕೇಂದ್ರವಾಗಿಟ್ಟುಕೊಂಡು […]

Advertisement

Wordpress Social Share Plugin powered by Ultimatelysocial