ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವುದರಿಂದ ಚರ್ಮ ಕಾಂತಿಹೀನವಾಗುತ್ತದೆ!

ಬೇಸಿಗೆಯಲ್ಲಿ ದೇಹದ ಆರೋಗ್ಯ ಎಷ್ಟು ಮುಖ್ಯವೋ ಚರ್ಮದ ಆರೋಗ್ಯ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪ ದಿನೇದಿನೇ ಹೆಚ್ಚುತ್ತಿರುವುದರಿಂದ ಚರ್ಮ ಕಾಂತಿಹೀನವಾಗುತ್ತದೆ. ಚರ್ಮದ ಕಾಂತಿ ಹೆಚ್ಚಿಸಲು ಮಾತ್ರವಲ್ಲದೆ ದೇಹವನ್ನು ತಂಪಾಗಿರಿಸಲು ನೀರು ಹಾಗೂ ತಾಜಾ ಹಣ್ಣಿನ ಜ್ಯೂಸ್ ಗಳನ್ನು ಹೆಚ್ಚಾಗಿ ಸೇವಿಸಬೇಕು.

ನಿಂಬೆಹಣ್ಣು, ಬೇಲದ ಹಣ್ಣು, ಮಾವಿನಕಾಯಿಯ ಪಾನಕಗಳನ್ನು ಸೇವಿಸುವುದರಿಂದ ದೇಹದಲ್ಲಿ ನೀರಿನ ಸಮತೋಲನ ಕಾಪಾಡಿಕೊಳ್ಳಬಹುದು.

ಚರ್ಮವನ್ನು ನೈಸರ್ಗಿಕವಾಗಿ ಕಾಪಾಡಿಕೊಳ್ಳಲು ಇರುವ ಸರಳ ಮಾರ್ಗಗಳುಅಲೋವೆರಾದ ಒಂದು ಎಲೆಯನ್ನು ಕತ್ತರಿಸಿ ಮೇಲಿನ ಸಿಪ್ಪೆಯನ್ನು ತೆಗೆದು ಒಳಗಿನ ತಿರುಳನ್ನು ತೆಗೆದುಕೊಳ್ಳಬೇಕು.

ತೆಗೆದ ತಿರುಳನ್ನು ಚೆನ್ನಾಗಿ ಕಿವುಚಿ ಮುಖ ಕುತ್ತಿಗೆಗೆ ಲೇಪಿಸಿ ಒಂದು ಗಂಟೆಯ ನಂತರ ತಣ್ಣೀರಿನಿಂದ ಮುಖವನ್ನು ತೊಳೆಯುವುದರಿಂದ ಚರ್ಮದ ತೇವಾಂಶ ಹೆಚ್ಚುತ್ತದೆ. ಇದನ್ನು ಸ್ನಾನಕ್ಕೆ ಮೊದಲು ಕೈ ಮತ್ತು ಕಾಲುಗಳಿಗೂ ಲೇಪಿಸಬಹುದು.ಬಿಸಿಲಿನ ಬೇಗೆಯಿಂದ ಮನೆಗೆ ಹಿಂದಿರುಗಿದಾಗ ಟ್ಯಾನ್ ಆದ ಚರ್ಮವನ್ನು ಟೊಮ್ಯಾಟೊ ಬಳಸಿ ಡಿಟ್ಯಾನ್ ಮಾಡಬಹುದು ಟೊಮ್ಯಾಟೋ ತಿರುಳನ್ನು ಮುಖ ಮತ್ತು ಕೈ ಕಾಲುಗಳಿಗೆ ಲೇಪಿಸಿ ಒಣಗಿದ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬೇಕು.ಮುಲ್ತಾನಿ ಮಟ್ಟಿ 1ಚಮಚ, ಮೊಸರು ಅರ್ಧ ಚಮಚ, ರೋಸ್ ವಾಟರ್ ಒಂದು ಚಮಚ ಬಳಸಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಭೆ!

Mon Apr 11 , 2022
ವಾಷಿಂಗ್ಟನ್ (ಯುಎಸ್): ಪ್ರಧಾನಿ ನರೇಂದ್ರ ಮೋದಿ  ಅವರು ಇಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ಅ ವರೊಂದಿಗೆ ವಾಸ್ತವ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿದೆ. ದಕ್ಷಿಣ ಏಷ್ಯಾ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಪರಸ್ಪರ ಹಿತಾಸಕ್ತಿಯ ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರ ಮತ್ತು ವಿನಿಮಯದ ಅಭಿಪ್ರಾಯಗಳನ್ನು ಪರಿಶೀಲಿಸಲಿದ್ದಾರೆ ಎಂದು ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ‘ದ್ವಿಪಕ್ಷೀಯ ಸಮಗ್ರ ಜಾಗತಿಕ […]

Advertisement

Wordpress Social Share Plugin powered by Ultimatelysocial