ಆರಂಭದಲ್ಲಿ ಸ್ವಲ್ಪ ಮುಜುಗರ ಆಗಿದ್ದು ನಿಜ, ಈಗ Expert ಆಗಿದ್ದೇನೆ

ರಾಜ್ಯದಲ್ಲಿ ಗೃಹ ಸಚಿವರನ್ನು ಕಾಡುವಷ್ಟು ವಿಷಯಗಳು ಬೇರೆ ಯಾರಿಗೂ ಇಲ್ಲ. ಈ ವಿಚಾರದಲ್ಲಿ ಹೆಚ್ಚಿನ ಅನುಭಗಳಿಲ್ಲದೆ ಇದ್ದ ನನಗೆ ಆರಂಭದಲ್ಲಿ ಸಂಕೋಚವಾಗುತ್ತಿತ್ತು. ಆಯನೂರು ಮಂಜುನಾಥರಂಥವರು ನಿನಗ್ಯಾಕೆ ಗೃಹ ಖಾತೆ ಅಂತಲೂ ಕೇಳಿದ್ದಾರೆ.ಆದರೆ, ಈಗ ನಾನು ಎಕ್ಸ್‌ಪರ್ಟ್‌ ಆಗಿದ್ದೇನೆ- ಹೀಗೆಂದು ಆತ್ಮವಿಶ್ವಾಸದಿಂದ ಹೇಳಿದರು ಗೃಹ ಸಚಿವ ಆರಗ ಜ್ಞಾನೇಂದ್ರ.ಶಿವಮೊಗ್ಗದಲ್ಲಿ ಪೂರ್ವ ಸಂಚಾರ ಠಾಣೆ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅವರೊಂದಿಗೆ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಎಮ್ಮೆಲ್ಸಿ ಆಯನೂರು ಮಂಜುನಾಥ್, ಐಜಿಪಿ ಕೆ.ತ್ಯಾಗರಾಜನ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಕೂಡಾ ಇದ್ದರು.ಆರಂಭದಲ್ಲಿ ಮಾತನಾಡಿದ ಬಿಜೆಪಿ ಮೇಲ್ಮನೆ ಸದಸ್ಯ ಆಯನೂರು ಮಂಜುನಾಥ ಅವರು ಸ್ವಲ್ಪ ಮಟ್ಟಿಗೆ ಗೃಹ ಸಚಿವರನ್ನು ತಿವಿದರು. ತಮ್ಮನ್ನು ಕೊನೆ ಗಳಿಗೆಯಲ್ಲಿ ಆಹ್ವಾನಿಸಿದ ವಿಚಾರದಲ್ಲಿ ಅವರಿಗೆ ಸ್ವಲ್ಪ ಸಿಟ್ಟು ಇದ್ದಂತಿತ್ತು.ʻʻಶಿವಮೊಗ್ಗದಲ್ಲಿ ಪೊಕ್ಸೊ ಪ್ರಕರಣ ಹೆಚ್ಚುತ್ತಿದೆ. ನಿಯಂತ್ರಣಕ್ಕೆ ಪೊಲೀಸ್ ಬಲ ಹೆಚ್ಚಿಸಬೇಕು. ಠಾಣೆಗಳಿಗೆ ಅಗತ್ಯ ಸೌಕರ್ಯ, ಸಿಬ್ಬಂದಿ ಹೆಚ್ಚಿಸಬೇಕುʼʼ ಎಂದು ಹೇಳಿದ ಅವರು ನಂತರ, ʻʻನನ್ನನ್ನು ಈ ಕಾರ್ಯಕ್ರಮಕ್ಕೆ ಕೊನೇ ಗಳಿಗೆಯಲ್ಲಿ ಆಹ್ವಾನಿಸಿದ್ದೀರಿ. ನಗರದಲ್ಲಿ ನಾಲ್ಕೈದು ಶಾಸಕರಿದ್ದಾರೆ. ಮುಂಚಿತವಾಗಿ ಕರೆದಿದ್ದರೆ ಎಲ್ಲರೂ ಬರುತ್ತಿದ್ದರು. ಗೃಹಸಚಿವರಿಗೆ ಸುತ್ತಮುತ್ತ ಪೊಲೀಸರಿದ್ದರೆ ಸಾಕೇನೊ?ʼʼ ಎಂದು ಚುಚ್ಚಿದರು.ಆರಗ ಜ್ಞಾನೇಂದ್ರ ಪ್ರತ್ಯುತ್ತರಆಯನೂರು ಮಂಜುನಾಥ ಅವರ ಮಾತುಗಳನ್ನು ಗಮನದಲ್ಲಿಟ್ಟುಕೊಂಡೇ ತಮ್ಮ ಭಾಷಣದಲ್ಲಿ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ ಅವರು, ʻʻನಾನೇನೂ ಐದು ವರ್ಷದಿಂದ ಮಂತ್ರಿಯಾಗಿದ್ದವನಲ್ಲ. ಕೇವಲ ಒಂದೂವರೆ ವರ್ಷದಲ್ಲಿ ಗೃಹಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಇರುವ ಅವಧಿಯಲ್ಲಿ ಜಿಲ್ಲೆಗೆ ಗರಿಷ್ಠ ಅನುದಾನ ಕೊಟ್ಟಿದ್ದೇನೆʼʼ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾರಿನ ಅಡಿಗೆ ಸಿಲುಕಿ ಮೃತಪಟ್ಟ ಅಂಜಲಿ ಮದ್ಯಪಾನ ಮಾಡಿದ್ದಳು

Wed Jan 4 , 2023
  ರಾಷ್ಟ್ರರಾಜಧಾನಿ ದೆಹಲಿಯ ಸುಲ್ತಾನ್​ಪುರಿಯಲ್ಲಿ ಜನವರಿ 1ರ ಮುಂಜಾನೆ ನಡೆದ ಭೀಕರ ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​ ಸಿಗುತ್ತಿದೆ. ಅಂದು ಅಂಜಲಿ ಎಂಬ ಯುವತಿ ಕಾರಿನ ಅಡಿಯಲ್ಲಿ ಸಿಲುಕಿ ಸುಮಾರು 12 ಕಿಮೀ ದೂರ ಎಳೆಯಲ್ಪಟ್ಟು ದಾರುಣವಾಗಿ ಮೃತಪಟ್ಟಿದ್ದಳು.ಆಕೆಯ ಶವ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಮಧ್ಯರಸ್ತೆಯಲ್ಲಿ ಪತ್ತೆಯಾಗಿತ್ತು. ಆಕೆ ಸ್ಕೂಟರ್​​ನಲ್ಲಿ ಒಬ್ಬಳೇ ಇದ್ದಳು ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ಇಲ್ಲ ಅವಳೊಂದಿಗೆ ಇನ್ನೊಬ್ಬಳು ಹುಡುಗಿ ಇದ್ದಳು. ಆಕೆಯ ಹೆಸರು ನಿಧಿ […]

Advertisement

Wordpress Social Share Plugin powered by Ultimatelysocial