ಕಾರಿನ ಅಡಿಗೆ ಸಿಲುಕಿ ಮೃತಪಟ್ಟ ಅಂಜಲಿ ಮದ್ಯಪಾನ ಮಾಡಿದ್ದಳು

 

ರಾಷ್ಟ್ರರಾಜಧಾನಿ ದೆಹಲಿಯ ಸುಲ್ತಾನ್​ಪುರಿಯಲ್ಲಿ ಜನವರಿ 1ರ ಮುಂಜಾನೆ ನಡೆದ ಭೀಕರ ಅಪಘಾತ ಪ್ರಕರಣಕ್ಕೆ ದಿನಕ್ಕೊಂದು ಟ್ವಿಸ್ಟ್​ ಸಿಗುತ್ತಿದೆ. ಅಂದು ಅಂಜಲಿ ಎಂಬ ಯುವತಿ ಕಾರಿನ ಅಡಿಯಲ್ಲಿ ಸಿಲುಕಿ ಸುಮಾರು 12 ಕಿಮೀ ದೂರ ಎಳೆಯಲ್ಪಟ್ಟು ದಾರುಣವಾಗಿ ಮೃತಪಟ್ಟಿದ್ದಳು.ಆಕೆಯ ಶವ ಸಂಪೂರ್ಣ ನಗ್ನ ಸ್ಥಿತಿಯಲ್ಲಿ ಮಧ್ಯರಸ್ತೆಯಲ್ಲಿ ಪತ್ತೆಯಾಗಿತ್ತು. ಆಕೆ ಸ್ಕೂಟರ್​​ನಲ್ಲಿ ಒಬ್ಬಳೇ ಇದ್ದಳು ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ಇಲ್ಲ ಅವಳೊಂದಿಗೆ ಇನ್ನೊಬ್ಬಳು ಹುಡುಗಿ ಇದ್ದಳು. ಆಕೆಯ ಹೆಸರು ನಿಧಿ ಎಂಬ ವಿಷಯ ತನಿಖೆ ಬಳಿಕ ಗೊತ್ತಾಯಿತು.ನಿಧಿ ಮತ್ತು ಅಂಜಲಿ ಇಬ್ಬರೂ ದೆಹಲಿಯ ರೋಹಿಣಿ ನಗರದಲ್ಲಿರುವ ಹೋಟೆಲ್​ವೊಂದರಲ್ಲಿ ಹೊಸವರ್ಷದ ಪಾರ್ಟಿಯಲ್ಲಿ ಪಾಲ್ಗೊಂಡು ಮುಂಜಾನೆ 3ಗಂಟೆ ಹೊತ್ತಿಗೆ ಅಲ್ಲಿಂದ ಹೊರಟಿದ್ದರು. ಬೈಕ್​ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ಇಬ್ಬರೂ ಜಗಳ ಕೂಡ ಮಾಡಿಕೊಂಡಿದ್ದಾರೆ. ಯಾರು ಸ್ಕೂಟರ್ ಓಡಿಸಬೇಕು ಎಂದು ಇಬ್ಬರೂ ಕೆಲ ಕಾಲ ಕಿತ್ತಾಡಿಕೊಂಡ ನಂತರ ಅಂಜಲಿ ಬೈಕ್​ ಓಡಿಸಿದ್ದಳು. ನಿಧಿ ಹಿಂದೆ ಕುಳಿತಿದ್ದಳು. ಆದರೆ ಸುಲ್ತಾನ್​ಪುರಿ ಬಳಿ ಹೋಗುತ್ತಿದ್ದಂತೆ ಇವರ ಸ್ಕೂಟರ್​ಗೆ ಕಾರು ಡಿಕ್ಕಿಯಾಗಿತ್ತು. ಸಣ್ಣಪುಟ್ಟ ಗಾಯಗಳಾದ ನಿಧಿ ಅಲ್ಲಿಂದ ಭಯಗೊಂಡು ಕಾಲ್ಕಿತ್ತಿದ್ದರೆ, ಅತ್ತ ಅಂಜಲಿ ಕಾಲು ಕಾರಿಗೆ ಸಿಲುಕಿ 12 ಕಿಮೀ ದೂರ ಎಳೆಯಲ್ಪಟ್ಟಿದ್ದಳು. ಅಂಜಲಿ ನಿಧಿ ಜಗಳ ಮಾಡಿಕೊಂಡ ಸಿಸಿಟಿವಿ ಫೂಟೇಜ್​ಗಳೆಲ್ಲ ಪೊಲೀಸರಿಗೆ ಲಭ್ಯವಾಗಿವೆ.ಅಂದು ಅಂಜಲಿ ಜತೆಗಿದ್ದ ನಿಧಿಯನ್ನು ಈಗ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ನಿಧಿ ಒಂದು ಶಾಕಿಂಗ್​ ವಿಷಯ ಹೇಳಿದ್ದಾಳೆ. ಪಾರ್ಟಿಯಲ್ಲಿ ಅಂಜಲಿ ಮದ್ಯಪಾನ ಮಾಡಿದ್ದಳು ಎಂದು ಪೊಲೀಸರಿಗೆ ಆಕೆ ತಿಳಿಸಿದ್ದಾಳೆ. ‘ಅಂಜಲಿ ಮದ್ಯಪಾನ ಮಾಡಿದ ಪರಿಣಾಮ ಆಕೆ ಅಮಲಿನಲ್ಲಿ ಇದ್ದಳು. ಅಷ್ಟಾದರೂ ತಾನೇ ಸ್ಕೂಟಿ ಓಡಿಸುತ್ತೇನೆ ಎಂದು ಹಠ ಹಿಡಿದಿದ್ದಳು. ನಾನು ಬೇಡ ಎಂದು ಹೇಳಿದ್ದಕ್ಕೆ ಜಗಳವಾಯಿತು. ಕೊನೆಗೂ ಅವಳೇ ಸ್ಕೂಟರ್ ಓಡಿಸಿದಳು. ಅಪಘಾತ ಆಗುತ್ತಿದ್ದಂತೆ ನನಗೆ ಭಯವಾಗಿ ಓಡಿ ಬಂದುಬಿಟ್ಟೆ’ ಎಂದು ಪೊಲೀಸರ ಎದುರು ನಿಧಿ ಹೇಳಿದ್ದಾಳೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಾಳಿಂಬೆ ಸಿಪ್ಪೆ ಈ ಎಲ್ಲಾ ಸಮಸ್ಯೆಗಳಿಗೆ ಅತ್ಯಾದ್ಭುತ ಮನೆಮದ್ದು

Wed Jan 4 , 2023
ಹಲವಾರು ಸಮಸ್ಯೆಗಳಿಗೆ ಪ್ರಕೃತ್ತಿಯಲ್ಲಿಯೇ ಮದ್ದು ಇರುತ್ತದೆ. ಆದರೆ ನಮಗೆ ಅವುಗಳ ಬಗ್ಗೆ ಹೆಚ್ಚಿನ ಮಾಹಿತಿ ಇರಲ್ಲ, ಗಂಭೀರ ಸಮಸ್ಯೆಗಳನ್ನೂ ಗುಣಪಡಿಸುವ ಮದ್ದುಗಳಿರುತ್ತದೆ. ಹಿಂದಿನ ಕಾಲದಲ್ಲಿ ಹೆಚ್ಚಾಗಿ ಮನೆಮದ್ದುಗಳನ್ನು ಮಾಡಲಾಗುತ್ತಿತ್ತುದಾಳಿಂಬೆ ಸಿಪ್ಪೆ ಕಹಿ ಹಾಗೂ ಒಗರು-ಒಗರಾಗಿರುತ್ತದೆ. ಇದು ಊತ ಕಡಿಮೆ ಮಾಡಲು. ಉರಿಯೂತ, ಬೇಧಿ, ರಕ್ತಸ್ರಾವ , ಅಜೀರ್ಣ , ಲಿವರ್ ಆರೋಗ್ಯಕ್ಕೆ ಬಳಸಲಾಗುವುದು. ಇದರ ಸಿಪ್ಪೆ ದಾಳಿಂಬೆ ಬೀಜಗಿಂತ ಪ್ರಯೋಜನಕಾರಿಯಂತೆ, ಇದರಲ್ಲಿ ಆಯಂಟಿಆಕ್ಸಿಡೆಂಟ್‌ ಅಂಶ ಅಧಿಕವಿರುತ್ತದೆ.ಮೊಡವೆ ನಿವಾರಣೆಗೆ ಕೂಡ ಅತ್ಯುತ್ತಮವಾದ […]

Advertisement

Wordpress Social Share Plugin powered by Ultimatelysocial