ಬೆಳಗಾವಿಯಲ್ಲಿ ಬಿಜೆಪಿ ರಹಸ್ಯ ಸರ್ವೆ – ಹಾಲಿ ಮಾಜಿ ಶಾಸಕರಿಗೆ ಹೆಚ್ಚಿದ ಆತಂಕ

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇದ್ದು, ಬಿಜೆಪಿ ಗೆಲುವಿನ ಅಭ್ಯರ್ಥಿಗಳಿಗೆ ಮಣೆ ಹಾಕೋದಕ್ಕೆ ಮುಂದಾಗಿದೆ. ಬೆಳಗಾವಿ ಜಿಲ್ಲೆ ಪ್ರಮುಖ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ರ್ಯಾಂಡಮ್‌ ಕಾಲ್‌ ಬರೋದಕ್ಕೆ ಶುರುವಾಗಿದೆ. ಹಾಲಿ ಬಿಜೆಪಿ ಶಾಸಕರಿದ್ದರೆ ಅಲ್ಲಿಗೆ ಕರೆ ಮಾಡಿ ಶಾಸಕರ ಕಾರ್ಯ ವೈಖರಿ ಬಗ್ಗೆ ಮಾಹಿತಿ ಕಲೆ ಹಾಕಲಾಕ್ತಿದೆ. ಇನ್ನು ಕಾಂಗ್ರೆಸ್‌ ವಶದಲ್ಲಿರುವ ಕ್ಷೇತ್ಗಳಿಗೂ ಸಹ ಕರೆ ಮಾಡಿ ಮಾಜಿ ಬಿಜೆಪಿ ಶಾಸಕರ ಬಗ್ಗೆ ಮಾಹಿತಿ ಕಲೆ ಹಾಕ್ತಿದೆ. ಇದರಿಂದ ಹಾಳಿ ಹಾಗೂ ಮಾಝಿ ಶಾಸಕರಲ್ಲಿ ಭಯ ಉಂಟಾಗಿದ್ರೆ ಹೊಸ ಆಕಾಂಕ್ಷಿಗಳಿಗೆ ಈ  ಭಾರೀ ನಮಗೆ ಟಿಕೆಟ್‌ ಸಿಗಬಹುದು ಎನ್ನುವ ಭರವಸೆ ಹೆಚ್ಚಾಗಿದೆ.

ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿಯಲ್ಲಿ ಮತ್ತೊಮ್ಮೆ ಕಮಲ ಅರಳಿಸೋದಕ್ಕೆ ಬಿಜೆಪಿ ರೆಡಿಯಾಗಿದೆ. ಜೊತೆಗೆ ಬೆಳಗಾವಿ 18 ಕ್ಷೇತ್ರಗಳಲ್ಲಿ 13 ಬಿಜೆಪಿ ವಶದಲ್ಲಿದ್ದು ಇನ್ನುಳಿದ ಕ್ಷೇತ್ರದಲ್ಲಿಯೂ ಪಕ್ಷ ಅಧಿಕಾರಕ್ಕೆ ತರೋದಕ್ಕೆ ಸಿದ್ಧತೆ ನಡೆಸಿದ್ದು ಕನಿಷ್ಠ 15 ಕ್ಷೇತ್ರದಲ್ಲಾದರೂ ಗೆಲುವು ಸಾಧಿಸುವ ಲೆಕ್ಕಾಚಾರ ಬಿಜೆಪಿ ಹಾಕಿಕೊಂಡಿದೆ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

 

 

Please follow and like us:

Leave a Reply

Your email address will not be published. Required fields are marked *

Next Post

ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಸಿಗಲಿದೆ ಶುಭ ಸುದ್ದಿ.

Fri Dec 16 , 2022
ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಕಾದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ನೌಕರರ ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲನೆಯದು ಜನವರಿಯಲ್ಲಿ ಮತ್ತು ಎರಡನೆಯದು ಜುಲೈನಲ್ಲಿ.ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022ರವರೆಗೆ ವಿಸ್ತರಿಸಲಾಗಿದೆ.ಈಗ ಮುಂದಿನ ಅಂದರೆ ಜನವರಿ ಡಿಎ ಹೆಚ್ಚಳವು ಮಾರ್ಚ್ 2023ರಲ್ಲಿ ಜಾರಿಯಾಗುವ ನಿರೀಕ್ಷೆಯಿದೆ. ಇದರ ಲಾಭ ಜನವರಿಯಿಂದ್ಲೇ ನೌಕರರಿಗೆ ಲಭ್ಯವಾಗುತ್ತದೆ. […]

Advertisement

Wordpress Social Share Plugin powered by Ultimatelysocial