ಹೊಸ ವರ್ಷದಲ್ಲಿ ಕೇಂದ್ರ ನೌಕರರಿಗೆ ಸಿಗಲಿದೆ ಶುಭ ಸುದ್ದಿ.

ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಗುಡ್‌ ನ್ಯೂಸ್‌ ಕಾದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ನೌಕರರ ತುಟ್ಟಿಭತ್ಯೆ ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಪ್ರತಿ ವರ್ಷ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮೊದಲನೆಯದು ಜನವರಿಯಲ್ಲಿ ಮತ್ತು ಎರಡನೆಯದು ಜುಲೈನಲ್ಲಿ.ಜುಲೈ ತಿಂಗಳ ತುಟ್ಟಿಭತ್ಯೆಯನ್ನು ಸೆಪ್ಟೆಂಬರ್ 2022ರವರೆಗೆ ವಿಸ್ತರಿಸಲಾಗಿದೆ.ಈಗ ಮುಂದಿನ ಅಂದರೆ ಜನವರಿ ಡಿಎ ಹೆಚ್ಚಳವು ಮಾರ್ಚ್ 2023ರಲ್ಲಿ ಜಾರಿಯಾಗುವ ನಿರೀಕ್ಷೆಯಿದೆ. ಇದರ ಲಾಭ ಜನವರಿಯಿಂದ್ಲೇ ನೌಕರರಿಗೆ ಲಭ್ಯವಾಗುತ್ತದೆ. ಡಿಎ ಜೊತೆಗೆ ಪಿಂಚಣಿದಾರರ ಡಿಆರ್ ಕೂಡ ಹೆಚ್ಚಾಗಲಿದೆ. ಜನವರಿ 1ರಿಂದ ಅನ್ವಯವಾಗಲಿರುವ ಈ ತುಟ್ಟಿಭತ್ಯೆಯನ್ನು ಮಾರ್ಚ್‌ನಲ್ಲಿ ಬಾಕಿ ಹಣದೊಂದಿಗೆ ನೌಕರರಿಗೆ ನೀಡಲಾಗುವುದು. ಮೂಲಗಳ ಪ್ರಕಾರ ಸರ್ಕಾರ ಪಿಂಚಣಿದಾರರ ಡಿಆರ್ ಅನ್ನು ಸಹ ಹೆಚ್ಚಿಸಲಿದೆ.18 ತಿಂಗಳ ಡಿಎ ಬಾಕಿ ಕೂಡ ಸಿಗಲಿದೆ ಎಂದು ಹೇಳಲಾಗುತ್ತಿದೆ. ಆದ್ರೆ ಸರ್ಕಾರ ಇದನ್ನು ನಿರಾಕರಿಸಿದೆ. ಕಳೆದ ಬಾರಿ ಸೆಪ್ಟೆಂಬರ್‌ನಲ್ಲಿ 48 ಲಕ್ಷ ಉದ್ಯೋಗಿಗಳು ಮತ್ತು 68 ಲಕ್ಷ ಪಿಂಚಣಿದಾರರು ಡಿಎ ಹೆಚ್ಚಳದ ಪ್ರಯೋಜನ ಪಡೆದಿದ್ದರು. ಪ್ರಸ್ತುತ ಕೇಂದ್ರ ನೌಕರರ ತುಟ್ಟಿ ಭತ್ಯೆ ಶೇ.38ರಷ್ಟಿದೆ. ಜನವರಿಯಲ್ಲಿ ಶೇ.4ರಷ್ಟು ಹೆಚ್ಚಳದೊಂದಿಗೆ ಶೇ.42ರಷ್ಟಾಗುವ ನಿರೀಕ್ಷೆ ಇದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಸರ್ಕಾರ ಶೇ.3ರಷ್ಟು ಡಿಎ ಹೆಚ್ಚಿಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೈಸೂರು ಭಾಗದಲ್ಲಿ ಬಿಜೆಪಿಯಿಂದ ಒಕ್ಕಲಿಗರಿಗೆ ಪ್ರಾಶಸ್ತ್ಯ – ಅಭ್ಯರ್ಥಿ ಯಾರು?

Fri Dec 16 , 2022
ಮೈಸೂರು ಭಾಗದಲ್ಲಿ ಬಿಜೆಪಿ ಅಧಿಕಾರಕ್ಕೆ ತರೋದು ಬಿಜೆಪಿ ನಾಯಕರಿಗೆ ಸವಾಲಿನ ಕೆಲಸವಾಗಿದೆ. ಎರಡು ಭಾರಿ ರಾಜ್ಯ ಅಧಿಕಾರಕ್ಕೆ ಬಂದ್ರೂ ಹಳೆ ಮೈಸೂರು ಭಾಗದಲ್ಲಿ ಕಮಲ ಅರಳಿಸಲು ಸಾಧ್ಯವಾಗಿಲ್ಲ. ಹಾಗಾಘಿ ಬೇರೆ ಪಕ್ಷದ ಸ್ಥಳೀಯ ನಾಯಕರಿಗೆ ಬಿಜೆಪಿ ಗಾಳ ಹಾಕ್ತಿದೆ. ಈಗಾಗಲೇ ಅಶ್ವಿನಿ, ಇಂಡುವಾಳು ಸಚ್ಚಿದಾನಂದ್‌ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆಯಾಗಿದ್ದಾರೆ. ಜೊತೆಗೆ ಜಿಲ್ಲಾಉಸ್ತುವಾರಿಯಾಗಿ ಒಕ್ಕಲಿಗ ಸಮುದಾಯದವರಿಗೆ ಹೊಣೆ ಹೊರಿಸಲಾಗಿದೆ. ಇನ್ನು ಆ ಭಾಗದಿಂದ ಒಕ್ಕಲಿಗ ಸಮುದಾಯದ ನಾಯಕರೇ ಸ್ಪರ್ಧೆ ಮಾಡ್ತಾರಾ […]

Advertisement

Wordpress Social Share Plugin powered by Ultimatelysocial