ಬೆಳ್ಳಾವೆ ವೆಂಕಟನಾರಣಪ್ಪನವರು ಕನ್ನಡದ ಮಹಾನ್ ವಿದ್ವಾಂಸರು.

ಬೆಳ್ಳಾವೆ ವೆಂಕಟನಾರಣಪ್ಪನವರು ಕನ್ನಡದ ಮಹಾನ್ ವಿದ್ವಾಂಸರು, ಸಾಹಿತಿ, ಅದರಲ್ಲೂ ಕನ್ನಡದ ಪ್ರಥಮ ವಿಜ್ಞಾನ ಬರಹಗಾರರು ಎಂದು ಪ್ರಸಿದ್ಧಿ ಪಡೆದವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣದಲ್ಲಿ ಪ್ರಧಾನ ಪಾತ್ರಧಾರಿಗಳಾಗಿದ್ದವರು.ಬೆಳ್ಳಾವೆ ವೆಂಕಟನಾರಣಪ್ಪನವರು 1872ರ ಫೆಬ್ರವರಿ 10ರಂದು ತುಮಕೂರಿನ ಬಳಿಯ ಬೆಳ್ಳಾವೆಯಲ್ಲಿ ಜನಿಸಿದರು. ತಂದೆ ವೆಂಕಟಕೃಷ್ಣಯ್ಯನವರು ಮತ್ತು ತಾಯಿ ಲಕ್ಷ್ಮೀದೇವಮ್ಮನವರು. ಇವರ ಪೂರ್ವಿಕರ ಮನೆಮಾತು ತೆಲುಗು. ಆದರೂ ತಮ್ಮ ವ್ಯಾವಹಾರಿಕ ಭಾಷೆಯಾದ ಕನ್ನಡದ ಮೇಲೆ ಬೆಳ್ಳಾವೆ ವೆಂಕಟನಾರಣಪ್ಪನವರಿಗೆ ಅಪಾರವಾದ ಪ್ರೀತಿ.ಬೆಳ್ಳಾವೆಯವರ ವಿದ್ಯಾಭ್ಯಾಸ ಪ್ರಾರಂಭವಾದುದು ಕೂಲಿ ಮಠದಲ್ಲಿ. ಪ್ರೌಢಶಾಲೆಗೆ ಸೇರಿದ್ದು ತುಮಕೂರಿನಲ್ಲಿ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಎಫ್. ಎ ಪದವಿ ಮತ್ತು ಬಿ.ಎ ಪದವಿಗಳನ್ನು ಉನ್ನತ ದರ್ಜೆಯ ಸಾಧನೆಗಳೊಂದಿಗೆ ಗಳಿಸಿಕೊಂಡರು. ಪ್ರಿನ್ಸಿಪಾಲರಾಗಿದ್ದ ಜಾನ್ ಕುಕ್ ಇವರ ಅಸಾಧಾರಣ ಪ್ರತಿಭೆಯನ್ನು ಗುರುತಿಸಿ ಅಧ್ಯಾಪಕರಾಗಿ ಆಯ್ಕೆ ಮಾಡಿಕೊಂಡರು. ಹದಿನಾಲ್ಕು ವರ್ಷ ಎಫ್. ಎ ತರಗತಿಗಳಿಗೆ ‘ಮಾನವ ಶರೀರಶಾಸ್ತ್ರ’ವನ್ನು ಬೋಧಿಸಿದರು. ಮುಂದೆ 1903ರ ವರ್ಷದಲ್ಲಿ ಅವರು ಮದ್ರಾಸು ವಿಶ್ವ ವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಗಳಿಸಿದರು. ಆ ನಂತರದಲ್ಲಿ ಅವರು ಸೆಂಟ್ರಲ್ ಕಾಲೇಜಿನಲ್ಲಿಯೇ ಭೌತಶಾಸ್ತ್ರದ ಅಧ್ಯಾಪಕರಾದರು. ತರಗತಿಯಲ್ಲಿ ಕಟ್ಟುನಿಟ್ಟಿನ ಅಧ್ಯಾಪಕರೆಂದು ಹೆಸರಾಗಿದ್ದರೂ ಅವರು ಅಷ್ಟೇ ಹೃದಯವಂತರು. ಶಿಸ್ತು, ಪ್ರಾಮಾಣಿಕತೆ, ನಿಷ್ಪಕ್ಷಪಾತ ನಡೆ, ಸಜ್ಜನಿಕೆ ಇವರ ಗುಣಗಳಾಗಿದ್ದುವು.ಬೆಳ್ಳಾವೆ ವೆಂಕಟನಾರಣಪ್ಪನವರು ಪವನಶಾಸ್ತ್ರದ ಪರೀವಿಕ್ಷರಾಗಿದ್ದ ನುಂಗಿಪುರಂ ವೆಂಕಟೇಶ ಅಯ್ಯಂಗಾರ್ಯರ ಜೊತೆಗೂಡಿ ‘ವಿಜ್ಞಾನ ಪ್ರಚಾರಿಣಿ’ ಎಂಬ ಸಂಘಟನೆಯೊಂದನ್ನು ಸ್ಥಾಪಿಸಿದ್ದರು. ಅದರ ವತಿಯಿಂದ ‘ವಿಜ್ಞಾನ’ ಎಂಬ ಕನ್ನಡ ಮಾಸಪತ್ರಿಕೆಯನ್ನೂ ಪ್ರಕಟಿಸುತ್ತಿದ್ದರು. ತಾವೂ ಬರೆದರು. ಇತರರಿಗೂ ಪ್ರೋತ್ಸಾಹ ನೀಡಿದರು. ಹಲವಾರು ಉಪನ್ಯಾಸಗಳನ್ನು ನೀಡಿದರು. ‘ಜೀವವಿಜ್ಞಾನ’ ಎಂಬುದು ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಬರೆದುಕೊಟ್ಟ ಬೃಹತ್ ಗ್ರಂಥ. ಹೀಗಾಗಿ ಅವರನ್ನು ಕನ್ನಡದ ಪ್ರಥಮ ವಿಜ್ಞಾನ ಬರಹಗಾರರೆಂದು ಕನ್ನಡ ನಾಡು ಗೌರವದಿಂದ ಸ್ಮರಿಸುತ್ತದೆ. ರಾಜ್ಯ ವಿಜ್ಞಾನ ಪರಿಷತ್ತು ಬೆಂಗಳೂರಿನ ಉದಯಭಾನು ಕಲಾ ಸಂಘದ ಸಹಕಾರದಲ್ಲಿ ಬೆಳ್ಳಾವೆ ವೆಂಕಟನಾರಣಪ್ಪ ಹಾಗೂ ನಂಗಪುರಂ ವೆಂಕಟೇಶಯ್ಯಂಗಾರ್ಯ ಅವರು 1918 ಮತ್ತು 1919ರಲ್ಲಿ ಪ್ರಕಟಿಸಿದ ‘24 ಸಂಚಿಕೆಗಳ ಬೃಹತ್ ವಿಜ್ಞಾನ’ ಸಂಪುಟಗಳ ಸಂಕಲನವನ್ನು ಬಿಡುಗಡೆ ಮಾಡಿದೆ. “1918 ಮತ್ತು 1919ರಲ್ಲಿ ಮುದ್ರಣ ವ್ಯವಸ್ಥೆ ಇಲ್ಲದಿದ್ದ ಸಮಯದಲ್ಲಿ ಕೃತಿ ರಚನೆಯನ್ನು ಈ ಲೇಖಕರು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಪೀಳಿಗೆಯಿಂದ ಪೀಳಿಗೆಗೆ ವಿಜ್ಞಾನದ ಪರಿಭಾಷೆ ರವಾನಿಸುವ ಕಾರ್ಯದಲ್ಲಿ ಲೇಖಕರು ಶ್ರಮವಹಿಸಿದ್ದಾರೆ. ಮೂಲ ಕೃತಿಯನ್ನು ಈ ಮಹನೀಯ ಲೇಖಕರು ಕನ್ನಡ ಭಾಷೆಯಲ್ಲಿ ರಚಿಸಿರುವುದು ಕನ್ನಡ ಭಾಷೆಯ ಮೇಲೆ ಲೇಖಕರು ಹೊಂದಿರುವ ಪ್ರೀತಿ ವ್ಯಕ್ತಪಡಿಸುತ್ತದೆ” ಎಂದು ಈ ಕೃತಿಗಳನ್ನು ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರು ಕೊಂಡಾಡಿದ್ದಾರೆ.ವಿಜ್ಞಾನದ ಅಧ್ಯಾಪಕರಾದರೂ ಬೆಳ್ಳಾವೆಯವರು ಕನ್ನಡ ನಾಡು ನುಡಿಯ ಮೇಲಿದ್ದ ಅಭಿಮಾನದಿಂದ 1918ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ‘ಕರ್ನಾಟಕ ಸಂಘ’ವನ್ನು ಸ್ಥಾಪಿಸಿದರು. ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದರು. ಪರಿಷತ್ತಿನ ಕಾರ್ಯದರ್ಶಿಯಾಗಿ, ಕೋಶಾಧಿಕಾರಿಗಳಾಗಿ, ಪರಿಷತ್ಪತ್ರಿಕೆಯ ಮಂಡಳಿಯ ಸದಸ್ಯರಾಗಿ ಅಹರ್ನಿಶಿ ದುಡಿದರು. ಪರಿಷನ್ಮಂದಿರದ ನಿರ್ಮಾಣ ಕಾರ್ಯದಲ್ಲಿ ಬೆಳ್ಳಾವೆಯವರ ಕೊಡುಗೆ ಅಪಾರವಾದದ್ದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉಕ್ರೇನ್-ರಷ್ಯಾ ಯುದ್ಧವನ್ನು ತಡೆಯುವ ಶಕ್ತಿ ʻಮೋದಿʼಯವರಿಗಿದೆ:

Sat Feb 11 , 2023
ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಉಕ್ರೇನ್-ರಷ್ಯಾ ಯುದ್ಧವನ್ನು ಪ್ರಧಾನಿ ನರೇಂದ್ರ ಮೋದಿ ನಿಲ್ಲಿಸಬಹುದು ಎಂದು ಅಮೆರಿಕದ ಶ್ವೇತಭವನ ತಿಳಿಸಿದೆ. ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಶ್ವೇತಭವನದ ವಕ್ತಾರ ಜಾನ್ ಕಿರ್ಬಿ, ಉಕ್ರೇನ್‌ನಲ್ಲಿನ ಯುದ್ಧವನ್ನು ಕೊನೆಗೊಳಿಸುವ ಯಾವುದೇ ಪ್ರಯತ್ನವನ್ನು ಯುನೈಟೆಡ್ ಸ್ಟೇಟ್ಸ್ ಸ್ವಾಗತಿಸುತ್ತದೆ. ಈ ಹಿನ್ನೆಲೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧವನ್ನು ನಿಲ್ಲಿಸಬಹುದೇ ಎಂಬ ಪ್ರಶ್ನೆಗೆ, ‘ಹೌದು, ಇದು ಮೋದಿಯವರಿಂದ ಮಾತ್ರ ಸಾಧ್ಯ’ ಎಂದು […]

Related posts

Advertisement

Wordpress Social Share Plugin powered by Ultimatelysocial