PKL 8: ಬೆಂಗಾಲ್ ವಾರಿಯರ್ಸ್ ವಿರುದ್ಧ ಬೆಂಗಳೂರು ಬುಲ್ಸ್ ತಂಡಕ್ಕೆ ರೋಚಕ ಗೆಲುವು

ಬೆಂಗಳೂರು, ಡಿ. 26: ಕಹಿ ಸೋಲಿನೊಂದಿಗೆ ಈ ಸೀಸನ್​ನ ಪ್ರೋಕಬಡ್ಡಿಯನ್ನ (Pro Kabaddi League) ಆರಂಭಿಸಿದ್ದ ಬೆಂಗಳೂರು ಬುಲ್ಸ್ (Bengaluru Bulls) ಇದೀಗ ಸತತ ಎರಡು ಗೆಲುವುಗಳೊಂದಿಗೆ ಪುಟಿದೆದ್ದಿದೆ. ಬಿ.ಸಿ. ರಮೇಶ್ (Coach BC Ramesh) ಕೋಚ್ ಆಗಿರುವ ಬೆಂಗಾಲ್ ವಾರಿಯರ್ಸ್ (Bengal Warriors) ವಿರುದ್ದಧ ಬುಲ್ಸ್ ತಂಡ 36-35 ಅಂಕಗಳಿಂದ ರೋಚಕ ಜಯ ಪಡೆಯಿತು.
ಕ್ಯಾಪ್ಟನ್ ಹಾಗೂ ಸೂಪರ್ ಸ್ಟಾರ್ ರೇಡರ್ ಪವನ್ ಶೆರಾವತ್ (Pavan Sehrawat) 15 ಅಂಕ ಗಳಿಸಿ ಬೆಂಗಳೂರು ಬುಲ್ಸ್ ತಂಡಕ್ಕೆ ಅಪೂರ್ವ ಗೆಲುವು ತಂದಿತ್ತರು. ಮತ್ತೊಬ್ಬ ಪ್ರತಿಭಾನ್ವಿತ ರೇಡರ್ ಚಂದ್ರನ್ ರಂಜಿತ್ (Chandran Ranjit) 6 ಅಂಕ ಗಳಿಸಿದರು. ಪಂದ್ಯದ ಕೊನೆಯ ಕ್ಷಣದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಪರ ಮ್ಯಾಚ್ ವಾಲುತ್ತಿರುವ ಹೊತ್ತಿನಲ್ಲಿ ದಕ್ಷಿಣ ಕೊರಿಯಾದ ರೇಡರ್ ಡೋಂಗಿ ಗಿಯೋನ್ ಲೀ ಭರ್ಜರಿ ರೇಡಿಂಗ್ ಮಾಡಿ 2 ಅಂಕ ಪಡೆದು ಬುಲ್ಸ್ ತಂಡಕ್ಕೆ ಗೆಲುವಿನ ಮಾಲೆ ಸಿಗುವಂತೆ ಮಾಡಿದರು.

ಹಾಲಿ ಚಾಂಪಿಯನ್ಸ್ ಬಂಗಾಲ್ ವಾರಿಯರ್ಸ್ ತಂಡದ ಕ್ಯಾಪ್ಟನ್ ಮಣಿಂದರ್ ಸಿಂಗ್ 17 ಅಂಕ ಗಳಿಸಿದರೂ ತಂಡಕ್ಕೆ ಗೆಲುವು ದಕ್ಕಿಸಿಕೊಡಲು ಆಗಲಿಲ್ಲ. ಇರಾನೀ ಆಟಗಾರ ಮೊಹಮ್ಮದ್ ನಬಿಬಕ್ಷ್ ಕೂಡ ವಾರಿಯರ್ಸ್ ಪರ ಅದ್ಭುತ ಪ್ರದರ್ಶನ ನೀಡಿದರು.

ಬೆಂಗಳೂರು ಬುಲ್ಸ್ ಈ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿತು. ವಾರಿಯರ್ಸ್ ವಿರುದ್ದದ ಗೆಲುವಿನಿಂದ 5 ಅಂಕ ಪಡೆಯಿತು. ಎರಡು ಗೆಲುವಿನಿಂದ ಒಟ್ಟು 10 ಅಂಕಗಳೊಂದಿಗೆ ಬೆಂಗಳೂರು ಬುಲ್ಸ್ ಪಾಯಿಂಟ್ ಟೇಬಲ್​ನಲ್ಲಿ 3ನೇ ಸ್ಥಾನದಲ್ಲಿದೆ. ಬೆಂಗಾಲ್ ವಾರಿಯರ್ಸ್ ತಂಡ ಈ ಪಂದ್ಯ ಸೋತರೂ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿದೆ. ದಬಂಗ್ ಡೆಲ್ಲಿ 13 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ.

: Bengaluru Bulls Victory: ತಮಿಳ್ ತಲೈವಾಸ್ ವಿರುದ್ಧ ಗೆದ್ದುಬೀಗಿದ ಬೆಂಗಳೂರು ಬುಲ್ಸ್

ದಬಂಗ್ ಡೆಲ್ಲಿ- ಗುಜರಾತ್ ಜೈಂಟ್ಸ್ ಪಂದ್ಯ ಡ್ರಾ:
ಇಂದು ನಡೆದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಮತ್ತು ದಬಂಗ್ ಡೆಲ್ಲಿ ತಂಡಗಳು 24-24 ಅಂಕಗಳಿಂದ ಸಮಬಲ ಸಾಧಿಸಿದವು. ದಬಂಗ್ ಡೆಲ್ಲಿಯ ನವೀನ್ ಕುಮಾರ್ ಅಕಾ ನವೀನ್ ಎಕ್ಸ್​ಪ್ರೆಸ್ ಅವರು 11 ಅಂಕ ಗಳಿಸಿದರು. ಆಡಿದ ಮೂರು ಪಂದ್ಯಗಳಲ್ಲೂ ನವೀನ್ ಸೂಪರ್ 10 ಅಂಕ ಪಡೆದು ಗಮನ ಸೆಳೆದಿದ್ಧಾರೆ. ಗುಜರಾತ್ ಜೈಂಟ್ಸ್ ತಂಡದ ರಾಕೇಶ್ ನರ್ವಾಲ್ 9 ಅಂಕ ಗಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ ರಾಮನಾಮ ಜಪಿಸುತ್ತಾರೆ'

Mon Dec 27 , 2021
ಶಾಮ್ಲಿ: ಉತ್ತರ ಪ್ರದೇಶದಲ್ಲಿ ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್​ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್​ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್​ ಸಚಿವ ಭೂಪೇಂದ್ರ ಸಿಂಗ್​ ಚೌಧರಿ ಹೇಳಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial