ಭಗತ್ ಸಿಂಗ್ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗವನ್ನು ಅಭಿವೃದ್ಧಿ ಪಡಿಸಿ ಜನಗಳಿಗೆ ಅನುಕೂಲ ಕಲ್ಪಿಸುವಂತೆ ಮನವಿ

ರಾಯಚೂರು: ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಪಕ್ಕದಲ್ಲಿ (ಪೂರ್ವ ದಿಕ್ಕಿಗೆ) ಭಗತ್ ಸಿಂಗ್ ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಶೀಘ್ರವಾಗಿ ಅಭಿವೃದ್ಧಿ ಪಡಿಸಿ ಉದ್ಯಾನವನ ನಿರ್ಮಿಸುವಂತೆ ಡಿವೈಎಫ್ಐ ವಲಯ ಸಮಿತಿ ಮುಖಂಡರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಅಯ್ಯಪ್ಪ ಸ್ವಾಮಿ ಗಣಜಿಲಿಮಠ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು,ಗ್ರಾಮದ ಮಕ್ಕಳು,ವೃದ್ಧರು, ಮಹಿಳೆಯರು ರಸ್ತೆ ಬದಿಯಲ್ಲೇ ಪರಿಸರ ವಾತಾವರಣ ಸವಿಯಲು ನಿತ್ಯ ಬೆಳಗಿನ ಜಾವ ಮತ್ತು ಸಂಜೆ ಹೊತ್ತಲ್ಲಿ ವಾಕ್ ಮಾಡುತ್ತಾರೆ. ಉದ್ಯಾನವನ ನಿರ್ಮಿಸಿದರೆ ಗ್ರಾಮ ಉತ್ತಮ ಪರಿಸರದ ಜೋತೆಗೆ ಒಳ್ಳೆಯ ಆರೋಗ್ಯಕರ ವಾತಾವರಣ ನಿರ್ಮಿಸಿದಂತಾಗುತ್ತದೆ. ಈ ಬಗ್ಗೆ ಪಂಚಾಯತಿ ಆಡಳಿತ ಮಂಡಳಿ ಮುತುವರ್ಜಿ ವಹಿಸಿ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಬೇಕು ಅನೇಕ ಬಾರಿ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಆದರೆ ಇದುವರೆವಿಗೂ ಅಭಿವೃದ್ಧಿ ಪಡಿಸಲು ಮುಂದಾಗುತ್ತಿಲ್ಲ ಎಂದು ಹೇಳಿದರುಇದೆ ಸಂದರ್ಭದಲ್ಲಿ ಡಿವೈಎಫ್ಐ ವಲಯ ಸಮಿತಿ ಅಧ್ಯಕ್ಷರಾದ ರಿಯಾಜ್ ಆರ್ತಿ, ಕಾರ್ಯದರ್ಶಿ ರಾಜು ನಾಯಕ, ಮಾಜಿ ಅಧ್ಯಕ್ಷ ಮುಕ್ತ ಪಾಷಾ, ಮುಖಂಡರಾದ ಮೌನೇಶ್ ಯಲಗಟ್ಟಿ, ರಿಯಾಜ್ ಕೂರಷಿ, ಜಯರುದಿನ್, ಅಮೀರ್ ಪಾಟೀಲ್, ಸಿರಾಜ್, ಅಕ್ಷಯ್ ಕುಮಾರ್, ರೈತ ಸಂಘಟನೆ ಮುಖಂಡರಾದ ನರಸಣ್ಣ ನಾಯಕ, ಶಬ್ಬೀರ್ ಜಾಲಹಳ್ಳಿ, ದುರಗಪ್ಪ ವರಟಿ, ಭೂಜಪ್ಪ, ನಿಂಗಣ್ಣ ಮಕಾಶಿ, ಹನುಮಂತ, ಮೌನೇಶ್ ಮತ್ತು ಇತರರು ಇದ್ದರು,

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಕಲಬುರ್ಗಿ ಜಿಲ್ಲೆ ಅಫಜಲಪೂರ ಪಟ್ಟಣದಲ್ಲಿ ಜಾತ್ಯಾತೀತ ಜನತಾದಳ ಹಮ್ಮಿಕೊಂಡಿದ್ದ ಹೊಸ ಮುಖ.

Thu Dec 8 , 2022
ಹೊಸ ಭರವಸೆ 50 ದಿನಗಳ ಪಾದಯಾತ್ರೆಯ ಬೃಹತ್ ಸಮಾರೋಪ ಸಮಾವೇಶಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್,ಡಿ, ಕುಮಾರ್ ಸ್ವಾಮಿ ಅವರಿಗೆ ಬಸವೇಶ್ವರ ವೃತ್ತದಿಂದ ವಿಜಯಪುರ ರಸ್ತೆ ಜಾಗೀರದ್ದಾರ ಮೈದಾನದ ವರೆಗೆ ಪಟ್ಟಾಕಿ ಸಿಡಿಸಿ ತೆರೆದ ವಾಹನದ ಮೂಲಕ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿ,ಎಮ್.ಇಂಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಶೇಪುರ, ಅಫಜಲಪೂರ ಜೆಡಿಎಸ್ ಅಭ್ಯರ್ಥಿ ಶಿವಕುಮಾರ್ ನಾಟೀಕರ್, ಹಾಗೂ ಜೆಡಿಎಸ್ ಮುಖಂಡರು ಜೆಡಿಎಸ್ ಅಭಿಮಾನಿಗಳು ಇತರರು […]

Advertisement

Wordpress Social Share Plugin powered by Ultimatelysocial