ಜರ್ಮನಿಯಲ್ಲಿ ಮೋದಿಗೆ ಅದ್ದೂರಿ ಸ್ವಾಗತ!

ಬರ್ಲಿನ್, ಮೇ 02; ಮೂರು ದಿನಗಳ ಕಾಲ ಯುರೋಪಿಯನ್ ದೇಶಗಳ ಪ್ರವಾಸ ಕೈಗೊಂಡಿರುವ ಭಾರತದ ಪ್ರಧಾನಿ ಜರ್ಮನಿಗೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಮೇ 2, 3 ಮತ್ತು 4ರಂದು ಪ್ರಧಾನಿ ನರೇಂದ್ರ ಮೋದಿ ಯುರೋಪಿಯನ್ ರಾಷ್ಟ್ರಗಳ ಪ್ರವಾಸ ಕೈಗೊಂಡಿದ್ದಾರೆ.

ಮೂರು ದಿನಗಳಲ್ಲಿ ಮೋದಿ 25 ಸಭೆಗಳಲ್ಲಿ ಪಾಲ್ಗೊಳ್ಳಲಿದ್ದು, ವಿವಿಧ ನಾಯಕರನ್ನು ಭೇಟಿ ಮಾಡಲಿದ್ದಾರೆ.

ಸೋಮವಾರ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ಚಾಲನೆ ಸಿಕ್ಕಿದೆ. ಮೋದಿ ಜರ್ಮನಿಯ ಫೆಡರಲ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಹ್ವಾನದ ಮೇರೆಗೆ ಜರ್ಮನಿಯ ಬರ್ಲಿನ್‌ ತಲುಪಿದ್ದಾರೆ.

ಮೇ 3, 4ರಂದು ಡೆನ್ಮಾರ್ಕ್ ಪ್ರಧಾನ ಮಂತ್ರಿ ಮೆಟ್ಟೆ ಫೆಡ್ರಿಕ್ಸನ್ ಆಹ್ವಾನದಂತೆ ಮೋದಿ ಕೋಪನ್‌ ಹೇಗನ್‌ಗೆ ಭೇಟಿ ನೀಡುತ್ತಿದ್ದಾರೆ. ಪ್ರಧಾನಮಂತ್ರಿಗಳ ಜೊತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ನರೇಂದ್ರ ಮೋದಿ ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಭಾರತಕ್ಕೆ ಹಿಂತಿರುಗುವಾಗ, ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಜೊತೆ ಪ್ಯಾರೀಸ್‌ನಲ್ಲಿ ಕೆಲವು ಕಾಲ ಮೋದಿ ಮಾತುಕತೆ ನಡೆಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಶ್ ಗುಟ್ಕಾ ಜಾಹಿರಾತು ತಿರಸ್ಕರಿಸಿದ್ದು ಏಕೆ?:

Mon May 2 , 2022
  ನಟ ರಾಕಿಂಗ್ ಸ್ಟಾರ್ ಯಶ್ ಸದ್ಯ ಕೆಜಿಎಫ್ 2 ಚಿತ್ರದ ಸಕ್ಸಸ್ ಖುಷಿಯಲ್ಲಿ ಇದ್ದಾರೆ. ಈ ನಡುವೆ ಯಶ್ ಜನ ಮೆಚ್ಚುವ ಕಾರ್ಯವೊಂದನ್ನು ಮಾಡಿದ್ದಾರೆ. ಈ ನಡೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ನೀನೆ ನಿಜವಾದ ಹೀರೋ ಎನ್ನುತ್ತಾ ಇದ್ದರೆ. ಇದಕ್ಕೆ ಕಾರಣ ನಟ ಯಶ್ ತೆಗೆದುಕೊಂಡ ಆ ಒಂದು ನಿರ್ಧಾರ. ಹೌದು ನಟ ಯಶ್ ಸಿನಿಮಾ ಮಾತ್ರ ಅಲ್ಲ ಸಾಕಷ್ಟು ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ. ದೊಡ್ಡ ದೊಡ್ಡ ಬ್ರ್ಯಾಂಡ್‌ಗಳು ಕನ್ನಡ […]

Advertisement

Wordpress Social Share Plugin powered by Ultimatelysocial