ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ರನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರು: ಭಗವಾನ್ ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ನ್ಯೂ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಖಾನ್ ರನನ್ನು ಉದಯಗಿರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 25ರವರೆಗೆ ಅಯೂಬ್ ಖಾನ್ ​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.ಮೈಸೂರಿನ ಉದಯಗಿರಿ ಠಾಣೆ ಪೊಲೀಸರಿಂದ ಅಯೂಬ್ ವಶಕ್ಕೆ ಪಡೆದಿದ್ದಾರೆ. ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಅಯೂಬ್ ವಿರುದ್ಧ ಎಫ್‌ಐಆರ್‌ ದಾಖಲು ಮಾಡಲಾಗಿದೆ.ಅಯೂಬ್ ಖಾನ್ ರನ್ನು ಮೈಸೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಜಡ್ಜ್​​ ಶ್ರೀಶೈಲಾ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ, ಫೆಬ್ರವರಿ 25ರ ವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.ಹಿಜಾಬ್ ಕುರಿತ ವಿವಾದದ ವಿಚಾರವಾಗಿ ಮಾತನಾಡುತ್ತಾ ಅಯೂಬ್ ಖಾನ್ ಬಾಹುಬಲಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಇದರ ಪರಿಣಾಮ ಜೈನ ಸಮುದಾಯವು ಅಯೂಬ್ ಖಾನ್ ವಿರುದ್ಧ ಸಿಡಿದೆದ್ದಿತ್ತು. ರಾಜ್ಯದ ನಾನಾ ಕಡೆ ಅಯೂಬ್ ಮೇಲೆ ದೂರು ದಾಖಲಾಗಿತ್ತು.ಕ್ರಿಮಿನಲ್ ಕೇಸ್‌ ದಾಖಲಿಸಿ ಬಂಧಿಸುವಂತೆ ಜೈನ ಸಮುದಾಯದ ಸಂಘಟನೆಗಳು ಒತ್ತಾಯಿಸಿದ್ದ ಪರಿಣಾಮ ಅಯೂಬ್ ಖಾನ್ ನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೆಗಾ ಹರಾಜು ದಿನ 2: ಕ್ರಿಕೆಟ್ ಆಸ್ಟ್ರೇಲಿಯಾ IPL 2022 ಗಾಗಿ ಆಟಗಾರರನ್ನು ಬಿಡುಗಡೆ ಮಾಡುತ್ತದೆಯೇ? ಜಾರ್ಜ್ ಬೈಲಿ ಉತ್ತರಗಳು

Sun Feb 13 , 2022
  ಐಪಿಎಲ್ ಮೆಗಾ ಹರಾಜಿನ 1 ನೇ ದಿನದಂದು ಆಸ್ಟ್ರೇಲಿಯಾದ ಕ್ರಿಕೆಟಿಗರು ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಆಟಗಾರರ ಪೂರ್ಣ ಸಮಯದ ಲಭ್ಯತೆಯ ಮೇಲೆ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಇದೆ. ಕ್ರಕೆಟ್ ಆಸ್ಟ್ರೇಲಿಯಾದ (CA) ರಾಷ್ಟ್ರೀಯ ಆಯ್ಕೆಗಾರ ಜಾರ್ಜ್ ಬೈಲಿ ಅವರು ಲಾಭದಾಯಕ ಲೀಗ್ ತನ್ನ ಕ್ರಿಕೆಟಿಗರಿಗೆ “ನಿಜವಾಗಿಯೂ ಉತ್ತಮ ಅಭಿವೃದ್ಧಿ ಅವಕಾಶ” ಎಂದು ಹೇಳಿದ್ದಾರೆ, ಆದರೆ ರಾಷ್ಟ್ರೀಯ ಕರ್ತವ್ಯವು ಯಾವಾಗಲೂ ಆದ್ಯತೆಯನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದರು. ಆಸ್ಟ್ರೇಲಿಯಾದ ವೇಗಿ […]

Advertisement

Wordpress Social Share Plugin powered by Ultimatelysocial