ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಯಿತು ಹೊಚ್ಚ ಹೊಸ ರಕ್ತದ ಗುಂಪು!

 

ಭಾರತದಲ್ಲಿ ಇದೇ ಮೊದಲ ಬಾರಿಗೆ ಹೊಚ್ಚ ಹೊಸ ರಕ್ತದ ಗುಂಪು ಪತ್ತೆಯಾಗಿದೆ. ವಿಶ್ವದಲ್ಲೇ ಅಪರೂಪವಾಗಿರುವ EMM ನೆಗೆಟಿವ್ ರಕ್ತದ ಗುಂಪು ಗುಜರಾತಿನ 65 ವರ್ಷದ ವ್ಯಕ್ತಿಯೊಬ್ಬರಲ್ಲಿ ಪತ್ತೆಯಾಗಿದೆ.ಹೌದು,

ಗುಜರಾತಿನ 65 ವರ್ಷದ ಇವರು ಹೃದಯಾಘಾತದಿಂದ ಅಹಮದಾಬಾದ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗಿಗೆ ಶಸ್ತ್ರಚಿಕಿತ್ಸೆಗಾಗಿ ರಕ್ತದ ಅವಶ್ಯಕತೆ ಇದೆ ಎಂದು ಸೂರತ್‌ನ ಸಮರ್ಪಣ್ ರಕ್ತದಾನ ಕೇಂದ್ರದ ವೈದ್ಯ ಸನ್ಮುಖ್ ಜೋಶಿ ಹೇಳಿದ್ದರು.
ಆದರೆ ಅಹಮದಾಬಾದ್‌ನ ಪ್ರಯೋಗಾಲಯದಲ್ಲಿ ಅವರ ರಕ್ತದ ಗುಂಪು ಯಾವುದು ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲೇ ಇಲ್ಲ. ನಂತರ ರಕ್ತದ ಮಾದರಿಯನ್ನು ಸೂರತ್‌ನಲ್ಲಿರುವ ರಕ್ತದಾನ ಕೇಂದ್ರಕ್ಕೆ ಕಳುಹಿಸಲಾಯಿತು. ಆದರೆ ಪಆ ಮಾದರಿಯು ಯಾವುದೇ ಗುಂಪಿನೊಂದಿಗೆ ಹೊಂದಿಕೆಯಾಗಲಿಲ್ಲ. ಬಳಿಕ ಅವರ ರಕ್ತದ ಸ್ಯಾಂಪಲ್‌ ಅನ್ನು ಅವರ ಸಂಬಂಧಿಕರು ಅಮೆರಿಕಕ್ಕೆ ಕೊಂಡೊಯ್ದು ಪರೀಕ್ಷಿಸಿದ್ದಾರೆ.ಆ ವೇಳೆ ಇವರದ್ದು EMM ನೆಗೆಟಿವ್ ರಕ್ತದ ಗುಂಪು ಎಂಬುದು ದೃಢಪಟ್ಟಿದೆ.
ಈ ಅಪರೂಪದ ರಕ್ತದ ಗುಂಪನ್ನು ಹೊಂದಿರುವ ಭಾರತದ ಮೊದಲ ವ್ಯಕ್ತಿ ಇವರು. ವಿಶ್ವದಲ್ಲಿ ಕೇವಲ 10 ಮಂದಿ ಮಾತ್ರ ಈ ಬ್ಲಡ್‌ ಗ್ರೂಪ್‌ ಹೊಂದಿದ್ದಾರೆ. ಈ ವಿಶಿಷ್ಟವಾದ ರಕ್ತದ ಪ್ರಕಾರವನ್ನು ಈಗಿರುವ ‘ಎ’, ‘ಬಿ’, ‘ಓ’ ಅಥವಾ ‘ಎಬಿ’ ಗುಂಪುಗಳಾಗಿ ವರ್ಗೀಕರಿಸಲು ಸಾಧ್ಯವಿಲ್ಲ.
ಇಂತಹ ಅಪರೂಪದ ರಕ್ತದ ಗುಂಪುಗಳನ್ನು ಹೊಂದಿರುವವರು ತಮ್ಮ ರಕ್ತವನ್ನು ಯಾರಿಗೂ ದಾನ ಮಾಡುವಂತಿಲ್ಲ ಅಥವಾ ಯಾರಿಂದಲೂ ರಕ್ತ ಪಡೆಯುವಂತಿಲ್ಲ. ಈವರೆಗೆ ಜಗತ್ತಿನಲ್ಲಿ ಕೇವಲ 9 ಮಂದಿ ಈ ಅಪರೂಪದ ರಕ್ತದ ಗುಂಪನ್ನು ಹೊಂದಿದ್ದರು. 10ನೆಯವರಾಗಿ ಗುಜರಾತ್‌ ವ್ಯಕ್ತಿ ಸೇರ್ಪಡೆಯಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸುಶಾಂತ್‌ಗೆ ಮಾದಕ ವಸ್ತು ಕೊಟ್ಟಿದ್ದು ಪ್ರೇಯಸಿ ರಿಯಾ:

Thu Jul 14 , 2022
  ನಟ ಸುಶಾಂತ್ ಸಿಂಗ್‌ ಸಾವಿನ ಬಳಿಕ ಹೊರಬಿದ್ದ ಮಾದಕ ಜಾಲದ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಸಿಬಿ ಸಲ್ಲಿಸಿರುವ ಹೊಸ ಚಾರ್ಜ್‌ ಶೀಟ್‌ನಲ್ಲಿ, ಮಾದಕ ವ್ಯಸನಿಯಾಗಿದ್ದ ಸುಶಾಂತ್‌ ಸಿಂಗ್‌ಗೆ ಆತನ ಪ್ರೇಯಸಿ ರಿಯಾ ಚಕ್ರವರ್ತಿ ಮಾದಕ ವಸ್ತು (ಗಾಂಜಾ) ನೀಡಿದ್ದರು ಎಂದು ಆರೋಪಿಸಲಾಗಿದೆ. ಪ್ರಕರಣದ 35 ಆರೋಪಿಗಳ ವಿರುದ್ಧ ಈವರೆಗೆ 38 ಚಾರ್ಜ್‌ ಶೀಟ್‌ಗಳನ್ನು ಎನ್‌ಸಿಬಿಯು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದೀಗ ರಿಯಾ ಚಕ್ರವರ್ತಿ, ಸುಶಾಂತ್ ಸಿಂಗ್‌ಗೆ ಗಾಂಜಾ ನೀಡುತ್ತಿದ್ದಳು […]

Advertisement

Wordpress Social Share Plugin powered by Ultimatelysocial