ಬಿಹಾರ ಸಚಿವ ತೇಜ್​ ಪ್ರತಾಪ್​ ಆಪ್ತರ ಬ್ಯಾಗ್​ಗಳ ಹೊರ ಹಾಕಿದ ಹೋಟೆಲ್ ಸಿಬ್ಬಂದಿ ಆರೋಪ!

ತ್ತರ ಪ್ರದೇಶದ ವಾರಾಣಸಿಯಲ್ಲಿ ಬಿಹಾರ ಸಚಿವ ತೇಜ್​ ಪ್ರತಾಪ್​ ಆಪ್ತರ ಬ್ಯಾಗ್​ಗಳನ್ನು ಹೋಟೆಲ್ ಸಿಬ್ಬಂದಿ ಹೊರ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.

ವಾರಾಣಸಿ (ಉತ್ತರ ಪ್ರದೇಶ): ಆರ್​ಜೆಡಿ ವರಿಷ್ಠ ಲಾಲು ಪ್ರಸಾದ್​ ಯಾದವ್​ ಅವರ ಹಿರಿಯ ಪುತ್ರ, ಬಿಹಾರ ಸಚಿವ ತೇಜ್​ ಪ್ರತಾಪ್​ ಯಾದವ್​ ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿದ್ದಾರೆ.

ಇಲ್ಲಿ ತೇಜ್​ ಪ್ರತಾಪ್ ಮತ್ತು ಆಪ್ತರು ಹೋಟೆಲ್​ವೊಂದರಲ್ಲಿ ತಂಗಿದ್ದಾರೆ. ಆದರೆ, ಹೋಟೆಲ್​ನ ಕೊಠಡಿಯಿಂದ ಆಪ್ತರ ಬ್ಯಾಗ್​ಗಳು ಮತ್ತು ಇತರ ವಸ್ತುಗಳನ್ನು ಹೊರ ಹಾಕಿರುವ ಆರೋಪ ಕೇಳಿ ಬಂದಿದೆ.

ಶುಕ್ರವಾರ ಮಧ್ಯಾಹ್ನ ಕಾಶಿಗೆ ಸಚಿವ ತೇಜ್​ ಪ್ರತಾಪ್ ಬಂದಿದ್ದರು. ನಂತರ ತಡರಾತ್ರಿ ತೇಜ್ ಪ್ರತಾಪ್ ಯಾದವ್ ವಾರಾಣಸಿಯ ಸಿಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹೋಟೆಲ್‌ಗೆ ತಲುಪಿದ್ದರು. ಪೂಜೆ ಸಲ್ಲಿಸಿ ರಾತ್ರಿ ಹೋಟೆಲ್‌ಗೆ ಹಿಂತಿರುಗಿದಾಗ ಆಪ್ತರು ಮತ್ತು ಸಿಬ್ಬಂದಿಗಾಗಿ ಕಾಯ್ದಿರಿಸಿದ್ದ ಕೊಠಡಿಯನ್ನು ಖಾಲಿ ಮಾಡಲಾಗಿತ್ತು ಎನ್ನಲಾಗಿದೆ.

ಈ ಬಗ್ಗೆ ಈಟಿವಿ ಭಾರತ್​ನೊಂದಿಗೆ ತೇಜ್ ಪ್ರತಾಪ್ ಆಪ್ತ ಸಹಾಯಕರು ದೂರವಾಣಿ ಮೂಲಕ ಮಾತನಾಡಿ, ಸಚಿವರ ವಸ್ತುಗಳು ಕೊಠಡಿಯಿಂದ ತೆಗೆದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಯಾರಿಗೂ ತಿಳಿಸದೇ ಸಚಿವರ ಆಪ್ತರು ಮತ್ತು ಸಿಬ್ಬಂದಿಯ ಕೊಠಡಿಯನ್ನು ಖಾಲಿ ಮಾಡಲಾಗಿದೆ. ಇದು ಸರಿಯಾದ ಕ್ರಮವಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಸದ್ಯ ಈ ವಿಚಾರದಲ್ಲಿ ಸಂಬಂಧಪಟ್ಟ ಪೊಲೀಸ್​ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ ಎಂದು ತಿಳಿಸಿದರು.

ಮತ್ತೊಂದೆದೆ, ಇನ್ನೊಬ್ಬ ಆಪ್ತ ಪ್ರದೀಪ್ ರಾಯ್​ ಮಾತನಾಡಿ, ತೇಜ್ ಪ್ರತಾಪ್ ವಾರಾಣಸಿಗೆ ಬಂದಿದ್ದು, ನಾವೆಲ್ಲರೂ ಅವರನ್ನು ಭೇಟಿಯಾಗಲು ಹೋಟೆಲ್​ಗೆ ಬಂದಿದ್ದೇವೆ. ಈ ವೇಳೆ ತೇಜ್ ಪ್ರತಾಪ್ ಯಾದವ್ ತಂಗಿದ್ದ ಕೊಠಡಿಯ ಪಕ್ಕದ ಕೊಠಡಿಯಿಂದ ಸಿಬ್ಬಂದಿಯ ವಸ್ತುಗಳನ್ನು ಹೋಟೆಲ್​ ಸಿಬ್ಬಂದಿ ಹೊರಗೆ ತೆಗೆದು ಇಟ್ಟಿದ್ದರು ಎಂದು ಹೇಳಿದರು. ಈ ಬಗ್ಗೆ ಸಿಗ್ರಾ ಠಾಣೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಈ ಬಗ್ಗೆ ದೂರು ಸ್ವೀಕರಿಸಲಾಗಿದೆ. ತನಿಖೆ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಮಲದ ರೂಪದಲ್ಲಿರುವ ಶಿವಮೊಗ್ಗ ವಿಮಾನ ಟರ್ಮಿನಲ್..!

Sat Apr 8 , 2023
ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಗೆಯಾಗಿದೆ. ಹಾಗಾಗಿ ಈ ಕೂಡಲೇ ಶಿವಮೊಗ್ಗದಲ್ಲಿರುವ ವಿಮಾನ ನಿಲ್ದಾಣದ ಟರ್ಮಿನಲ್ ಕಮಲದ ರೂಪದಲ್ಲಿ ಇರುವುದರಿಂದ, ಅದಕ್ಕೆ ಹೊದಿಕೆ ಹಾಕಬೇಕೆಂದು ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾ ಕಾಂಗ್ರೆಸ್ ಮನವಿ ಮಾಡಿದೆ.  ಶಿವಮೊಗ್ಗ ಕರ್ನಾಟಕ ವಿಧಾನ ಸಭಾ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಈಗಾಗಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕಮಲ ರೂಪದಲ್ಲಿ ನಿರ್ಮಾಣವಾಗಿರುವ ವಿಮಾನ ನಿಲ್ದಾಣದ ಟರ್ಮಿನಲ್​ಗೆ ಹೊದಿಕೆ ಹಾಕುವಂತೆ ಚುನಾವಣಾ ಅಧಿಕಾರಿಗಳಿಗೆ ಜಿಲ್ಲಾ […]

Related posts

Advertisement

Wordpress Social Share Plugin powered by Ultimatelysocial