ಶೀಲ ಶಂಕಿಸಿ ಸೊಂಟದ ಬೆಲ್ಟ್ ನಿಂದ ಕತ್ತು ಬಿಗಿದು ಪತ್ನಿ ಕೊಲೆಗೈದ ಪತಿ ಬಂಧನ

ಬೆಂಗಳೂರು: ಶೀಲ ಶಂಕಿಸಿ ಸೊಂಟದ ಬೆಲ್ಟ್ ನಿಂದ ಪತ್ನಿಯ ಕತ್ತು ಬಿಗಿದು ಕೊಲೆಗೈದಿರುವ ಘಟನೆ ಎಚ್‌ಎಎಲ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ.ಎಚ್‌ಎಎಲ್‌ನ ಕಾಳಪ್ಪ ಲೇಔಟ್‌ ನಿವಾಸಿ ನೀಲ ಕಂಠ(43) ಬಂಧಿತ.ಆರೋಪಿ ಮಾ.8ರಂದು ಪತ್ನಿ ನಾಗಮ್ಮ (36) ರನ್ನು ಕತ್ತು ಬಿಗಿದು ಕೊಲೆಗೈದಿದ್ದ.ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ರಾಯಚೂರು ಮೂಲದ ನೀಲಕಂಠ ದಂಪತಿ, ಐದಾರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, ಎಚ್‌ಎಎಲ್‌ನ ಕಾಳಪ್ಪ ಲೇಔಟ್‌ನಲ್ಲಿ ವಾಸವಾಗಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ನೀಲಕಂಠ ಕ್ಯಾಬ್‌ ಚಾಲಕನಾಗಿದ್ದು, ನಾಗಮ್ಮ ಖಾಸಗಿ ಕಂಪನಿಯಲ್ಲಿ ಹೌಸ್‌ ಕಿಪಿಂಗ್‌ ಕೆಲಸ ಮಾಡುತ್ತಿದ್ದರು.ಈ ನಡುವೆ ನೀಲಕಂಠ ಪತ್ನಿ ಶೀಲ ಶಂಕಿಸಿ ನಿತ್ಯ ಗಲಾಟೆ ಮಾಡುತ್ತಿದ್ದ. ಅದರಿಂದ ಬೇಸತ್ತಿದ್ದ ನಾಗಮ್ಮ ಪತಿಗೆ ವಿಚ್ಛೇದನ ಕೊಡಲು ಮುಂದಾಗಿದ್ದರು. ಅದರಿಂದ ಆಕ್ರೋಶಗೊಂಡ ಆರೋಪಿ ಮಂಗಳವಾರ ರಾತ್ರಿ ಮದ್ಯದ ಅಮಲಿಲ್ಲಿ ಮನೆಗೆಬಂದು ಮತ್ತೆ ಜಗಳ ತೆಗೆದಿದ್ದಾನೆ. ಬಳಿಕ ಸೊಂಟದ ಬೆಲ್ಟ್ ನಿಂದ ಪತ್ನಿಯ ಕುತ್ತುಹಿಸುಕಿ ಕೊಲೆಗೈದಿದ್ದಾನೆ.ಅದನ್ನು ಕಂಡ ಇಬ್ಬರು ಮಕ್ಕಳು ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಎಚ್‌ಎಎಲ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಇ-ಶ್ರಮ್‌ ಯೋಜನೆ : ಯಾರು ಅರ್ಹರು? ನೋಂದಣಿ ಹೇಗೆ? ಇಲ್ಲಿದೆ ಮಾಹಿತಿ

Thu Mar 10 , 2022
  ಉಡುಪಿ : ಕೇಂದ್ರ ಸರಕಾರದ ಇ-ಶ್ರಮ್‌ ಪೋರ್ಟಲ್‌ನಲ್ಲಿ ಜಿಲ್ಲೆಯ 1,05,439 ಅಸಂಘಟಿತ ಕಾರ್ಮಿಕರು ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯ ಸೇವಾ ಕೇಂದ್ರದಲ್ಲಿ 16, ಸಾಮಾನ್ಯ ಸೇವಾ ಕೇಂದ್ರದಲ್ಲಿ ಸಿಎಸ್‌ಸಿ 62,913, ಸ್ವಯಂ ನೋಂದಣಿ 42,510 ಆಗಿದೆ. ಅಸಂಘಟಿತ ವಲಯದ ಕಾರ್ಮಿಕರ ಎಲ್ಲ ಮಾಹಿತಿ, ಡೇಟಾವನ್ನು ಟ್ರ್ಯಾಕ್‌ ಮಾಡಲು ಮತ್ತು ಸಂಗ್ರಹಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಈ ಪೋರ್ಟಲ್‌ ಆರಂಭಸಿದೆ. ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು, ಬೀದಿ […]

Advertisement

Wordpress Social Share Plugin powered by Ultimatelysocial