ಮರಳಿ ಪ್ರವೇಶಿಸಿದ್ದು, ವಿನೂತನ ಮೂರು ಹೊಸ ಮೋಟಾರ್‌ಸೈಕಲ್!

ಐನಾನಿಕ್ ಬ್ರಾಂಡ್ ಯೆಜ್ಡಿ ದೇಶಿಯ ಮಾರುಕಟ್ಟೆಗೆ ಮರಳಿ ಪ್ರವೇಶಿಸಿದ್ದು, ವಿನೂತನ ಮೂರು ಹೊಸ ಮೋಟಾರ್‌ಸೈಕಲ್ ಮಾದರಿಗಳೊಂದಿಗೆ ಯೆಜ್ಡಿ ಕಂಪನಿಯು ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗಳನ್ನು ಅರಿತಿರುವ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಹೊಸ ರೂಪ ನೀಡಿದ್ದು, ಗ್ರಾಹಕರು ತಮ್ಮ ಆದ್ಯತೆಗೆ ತಕ್ಕಂತೆ ಪ್ರಮುಖ ಮೂರು ಬೈಕ್ ಮಾದರಿಗಳನ್ನು ಅಭಿವೃದ್ದಿಪಡಿಸಿದೆ.90ರ ದಶಕದಲ್ಲಿ ಬೈಕ್ ಪ್ರಿಯರ ಆಯ್ಕೆಯಲ್ಲಿ ತನ್ನದೆ ಆದ ಗ್ರಾಹಕರ ವರ್ಗವನ್ನೇ ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದ್ದ ಕಾರಣಾಂತರಗಳಿಂದ ಮಾರುಕಟ್ಟೆಯಿಂದ ಹಿಂದೆ ಸರಿದಿತ್ತು. ಇದೀಗ ಮಹೀಂದ್ರಾ ಒಡೆತನದ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬ್ರಾಂಡ್‌ಗೆ ಹೊಸ ರೂಪ ನೀಡುವ ಮೂಲಕ ಮರಳಿ ಮಾರುಕಟ್ಟೆಗೆ ಪರಿಚಯಿಸಿದ್ದು, ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡಿದೆ.ಯೆಜ್ಡಿ ಕಂಪನಿಯು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ಸೆಗ್ಮೆಂಟ್‌ಗಳಲ್ಲಿ ಮೂರು ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಯೆಜ್ಡಿ ಅಡ್ವೆಂಚರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ರೋಡ್‌ಸ್ಟರ್ ಮಾದರಿಗಳು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರತಿ ಮಗು ಮಹಾಭಾರತದಿಂದ ಈ ಅಮೂಲ್ಯವಾದ ಪಾಠಗಳನ್ನು ಕಲಿಯಬೇಕು;

Fri Feb 11 , 2022
ಮಹಾಭಾರತವು ಹಿಂದೂ ಪುರಾಣಗಳಲ್ಲಿನ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ ಮತ್ತು ನಮ್ಮನ್ನು ಮುಳುಗಿಸಲು ಮತ್ತು ಅದರಿಂದ ಕಲಿಯಲು ಮಹಾನ್ ಸಂಪತ್ತನ್ನು ಬಿಚ್ಚಿಡುತ್ತದೆ. ಮಹಾಭಾರತವು ನಮಗೆ ಕಲಿಸಲು ಬಹಳಷ್ಟು ಹೊಂದಿದೆ ಮತ್ತು ಪ್ರಸ್ತುತ ಸಮಯದಲ್ಲೂ ಪ್ರಸ್ತುತತೆಯನ್ನು ಹೊಂದಿದೆ. ಇದು ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರಗಳನ್ನು ಮತ್ತು ಸಂತೋಷದ ಜೀವನವನ್ನು ನಡೆಸುವ ನೈಜ ಮಾರ್ಗಗಳನ್ನು ನೀಡುತ್ತದೆ. ಮಹಾಭಾರತದ ಮಹಾಕಾವ್ಯ ನಿರೂಪಣೆಯನ್ನು ಬಹಳ ಹಿಂದೆಯೇ ಬರೆಯಲಾಗಿದೆ. ಆದರೂ ಪೌರಾಣಿಕ ಕಥೆಯು ಕಲೆಯ ಪ್ರತಿಯೊಂದು ರೂಪದಲ್ಲೂ […]

Advertisement

Wordpress Social Share Plugin powered by Ultimatelysocial