ಬೈಕ್ ಕಳ್ಳನ ಬಂಧನ ಐದು ಬೈಕ್ ಜಪ್ತಿ

ಪಟ್ಟಣ ಸೇರಿದಂತೆ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಚಿತ್ತಾಪೂರ ಪೋಲೀಸರು ಐದು ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಪೋಲಿಸ್‌  ಠಾಣೆಯಲ್ಲಿ 2022ರ ಆಗಸ್ಟ್ ತಿಂಗಳು ಮತ್ತು ನವೆಂಬರ, ಡಿಸೆಂಬರ ತಿಂಗಳಲ್ಲಿ ಬೈಕ್ ಕಳ್ಳತನದ ಪ್ರಕರಣಗಳು ದಾಖಲಾಗಿದ್ದು ಹಾಗೂ ಜನವರಿ 7 ರಂದು ಹೊಸ ಪ್ರಕರಣ ದಾಖಲಾಗಿದ್ದು ಈ ಕುರಿತ ಪ್ರಕರಣ ಭೇದಿಸಲು ಜಿಲ್ಲಾ ಪೋಲಿಸ್ಅಧೀಕ್ಷಕರ ನೇತೃತ್ವದಲ್ಲಿ ಶಹಾಬಾದ ಅಪಾರ  ಅಧೀಕ್ಷಕರಾದ ಎನ್ ಶ್ರೀನಿಧಿ, ಹಾಗೂ ಪೋಲೀಸ ಉಪಾಧೀಕ್ಷಕ ಶೀಲಾವಂತ ಮತ್ತು ಚಿತ್ತಾಪುರ ಸಿಪಿಐ ಪ್ರಕಾಶ ಯಾತನೂರ, ಪಿಎಸ್‍ಐ ಚೇತನ ಪೋಲೀಸ ಸಿಬ್ಬಂದಿಗಳಾದ ನಾಗೇಂದ್ರ ತಳವಾರ, ಅಯ್ಯಣ್ಣ, ಮಲ್ಲಿಕಾರ್ಜುನ, ಬಸವರಾಜ, ಮಕ್ತುಂ ಪಟೇಲ, ಶೀವಯ್ಯ, ತಂಡ ರಚಿಸಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯ ಮಾಹಿತಿ ಪಡೆದು ಜ,8 ಬೆಳಗಿನ ಜಾವ ಶಹಾಬಾದನ ಎಬಿಎಲ್ ಕ್ರಾಸ್ ನಲ್ಲಿ ದಾಳಿ ನಡೆಸಿ ಬೈಕ್ ಕಳ್ಳತನದ ಆರೋಪಿಯಾದ ಗಜನಂದ ತಂದೆ ರಾಮು ಚೌದ್ರಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಗೆ ವಿಚಾರಣೆ ನಡೆಸಿ ಆರೋಪಿಯಿಂದ 5 ಬೈಕ್ ಗಳು ವಶಪಡಿಸಿಕೊಳ್ಳಲಾಗಿದೆ. ಆರೋಪಿತನಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕುಟುಂಬದ ಆಸ್ತಿಯಲ್ಲಿ ಮಗನಂತೇ ವಿವಾಹಿತ ಮಗಳಿಗೂ ಸಮಾನ ಹಕ್ಕಿದೆ.

Sat Jan 14 , 2023
ಅಹಮದಾಬಾದ್: ಮದುವೆಯ ನಂತರವೂ ಆಸ್ತಿಯಲ್ಲಿ ಸಮಾನ ಹಕ್ಕಿದೆ ಎಂದು ಅಭಿಪ್ರಾಯಪಟ್ಟಿರುವ  ಮಗಳು ಮತ್ತು ಸಹೋದರಿಯರ ಬಗ್ಗೆ ಇರುವ ಸಮಾಜದ ಮನಸ್ಥಿತಿಯನ್ನು ಬದಲಾಯಿಸಬೇಕಾಗಿದೆ ಎಂದು ಶುಕ್ರವಾರ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಎ. ಶಾಸ್ತ್ರಿ ಅವರ ವಿಭಾಗೀಯ ಪೀಠವು ಕುಟುಂಬದ ಆಸ್ತಿ ಹಂಚಿಕೆಯಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಅಲ್ಲಿ ಅರ್ಜಿದಾರರ ಪ್ರಕರಣದಲ್ಲಿ ಅವರ ಸಹೋದರಿ ಆಸ್ತಿಯಲ್ಲಿ ತನ್ನ ಹಕ್ಕನ್ನು ಬಿಟ್ಟುಕೊಟ್ಟಿದ್ದಾರೆಯೇ […]

Advertisement

Wordpress Social Share Plugin powered by Ultimatelysocial