ಬೈಕ್ ಕಳವು ಖದೀಮರ ಸೆರೆ.

ಕಳವು ಮಾಡಿದ ಬೈಕ್ ಗಳಲ್ಲಿ ಸಂಚರಿಸುತ್ತಾ ಒಂಟಿಯಾಗಿ ಓಡಾಡುವವರ ಮೊಬೈಲ್ ದೋಚಿ ಪರಾರಿಯಾಗುತ್ತಿದ್ದ ಮೂವರು ಖದೀಮರನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಲಹಂಕ ಶ್ರೀನಿವಾಸಪುರದ ಮುಬಾರಕ್ ಅಲಿಯಾಸ್ ಡೂಮ್(೨೦) ಅಗ್ರಹಾರ ಲೇಔಟ್ ನ ಸುನೀಲ್ ಅಲಿಯಾಸ್ ಚಿತ್ತು(೨೦)ಯಲಹಂಕದ ಅಲ್ಲಾಹುಅಕ್ಬರ್ ಮಸೀದಿ ಹತ್ತಿರದ ಇಸ್ಮಾಯಿಲ್ ಅಲಿಯಾಸ್ ಜಿಶಾನ್ (೧೯) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.
ಬಂಧಿತರಿಂದ ೫ ಲಕ್ಷ ಮೌಲ್ಯದ ೮ ಬೈಕ್ ಗಳು ಎರಡು ಮೊಬೈಲ್ ಗಳು,ಬೆಳ್ಳಿಯ ಚೈನ್ ವಶಪಡಿಸಿಕೊಂಡು ಸಂಪಿಗೆಹಳ್ಳಿಯ ೪,ಹೆಣ್ಣೂರು,ಯಲಹಂಕ,ಕೊತ್ತನೂರು,ಬ್ಯಾಡರಹಳ್ಳಿ,ಹೆಚ್ ಎಎಲ್ ನ ತಲಾ ೧ ಸೇರಿ ೧೦ ಪ್ರಕರಣಗಳನ್ನು ಪತ್ತೆಹಚ್ಚಿ ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಮೇ.೪ ರಂದು ಜಯದೀಪ್ ಸೂತ್ರಧಾರ್ ಅವರು ಮುಂಜಾನೆ ೧ ಗಂಟೆಗೆ ಪುಡ್ ಡಿಲೇವರಿ ಕೊಡಲು ವೀರಣ್ಣ ಪಾಳ್ಯ ಜಂಕ್ಷನ್ ಹತ್ತಿರ ಬಂದಾಗ ಇಬ್ಬರು ಸಿಲ್ವರ್ ಆಕ್ಷೀಸ್ ಮೋಟಾರ್ ಸೈಕಲ್‌ನಲ್ಲಿ ಕೆಳಗೆ ಬಿದ್ದಿದ್ದು ಇನ್ನೊಬ್ಬ ಸ್ವಲ್ಪ ದೂರದಲ್ಲಿ ಇದ್ದು ಆತ ನನ್ನನ್ನು ನಿಲ್ಲಿಸಿ ನನಗೆ ಆಸ್ಪತ್ರೆಯಲ್ಲಿ ಕೆಲಸವಿದೆ ಎಂದು ಕೇಳಿದ್ದು ಅಷ್ಟರಲ್ಲಿ ನನ್ನ ಬೈಕ್ ಮುಂದೆ ಇದ್ದ ಮೊಬೈಲ್ ಕಸಿಯಲು ಬಂದಿದ್ದು ನಾನು ವಿರೋಧ ಮಾಡುವಾಗ ಕೆಳಗಡೆ ಬಿದ್ದಿದ್ದರಲ್ಲಿ ಒಬ್ಬ ಎಂದು ಬಂದು ಚಾಕು ತೋರಿಸಿ ಹೆದರಿಸಿ ನನ್ನ ಜರ್ಕಿನ್ ಚೆಕ್ ಮಾಡಿ ನಂತರ ಅವರು ಮೂರು ಜನ ಸೇರಿಕೊಂಡು ನನ್ನ ಮೊಬೈಲ್ ತೆಗೆದುಕೊಂಡು ಅವರ ಆಕ್ಸೀಸ್ ಬೈಕ್‌ನಲ್ಲಿ ಪರಾರಿಯಾದರು ಎಂದು ದೂರು ನೀಡಿದ ಪ್ರಕರಣ ದಾಖಲಿಸಿ ರಚಿಸಿದ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ.

Sun Jan 22 , 2023
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ. ಕಾಂಗ್ರೆಸ್​ ಪ್ರಜಾಧ್ವನಿ ಬಸ್ ಯಾತ್ರೆ ಪ್ರಚಾರ ಭರಾಟೆ ಜೋರಾಗಿದೆ. ಹಾಸನ: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ನಾಯಕರ ಮಾತುಗಳು ಪುಂಖಾನುಪುಂಖವಾಗಿ ಹೊರಬರುತ್ತಿವೆ. ಕಾಂಗ್ರೆಸ್​ ಪ್ರಜಾಧ್ವನಿ ಬಸ್ ಯಾತ್ರೆ ಪ್ರಚಾರ ಭರಾಟೆ ಜೋರಾಗಿದೆ. ಇಂದು ಜೆಡಿಎಸ್ ನ ಭದ್ರಕೋಟೆ ಹಾಸನದಲ್ಲಿ ಪ್ರಚಾರ ನಡೆಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಸಂಪ್ರದಾಯದಂತೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮೇಲೆ ವಾಗ್ದಾಳಿ ಮುಂದುವರಿಸಿದ್ದಾರೆ. ಮತ್ತೊಮ್ಮೆ […]

Advertisement

Wordpress Social Share Plugin powered by Ultimatelysocial