ಬಿಳಿಗಿರಿ ರಂಗನಬೆಟ್ಟದಲ್ಲಿ ನಡೆಯುವ ಸಂಕ್ರಾಂತಿ ಜಾತ್ರೆ ಅಗತ್ಯ ಮೂಲ ಸೌಕರ್ಯ ಒದಗಿಸಿ ಜಿಲ್ಲಾಧಿಕಾರಿ ಡಿ.ಎಸ್.

ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ ಜ.15 ರಂದು ನಡೆಯುವ ರಂಗನಾಥಸ್ವಾಮಿ ಚಿಕ್ಕ ಜಾತ್ರೆಗೆ ಬರುವ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಿಕೊಡಬೇಕು ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ರಮೇಶ್ ರವರು ಸೂಚಿಸಿದ್ದಾರೆ…..

ಬಿಳಿಗಿರಿ ರಂಗನ ಬೆಟ್ಟದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ರಮೇಶ್ ರವರು ಮಾತನಾಡಿ ಪ್ರತಿ ವರ್ಷದಂತೆ ಈ ಬಾರಿಯೂ ಸಂಕ್ರಾಂತಿ ಚಿಕ್ಕ ಜಾತ್ರೆ ಅಂಗವಾಗಿ ಜ. 14ರಿಂದ 17ರವರೆಗೆ ಯಳಂದೂರು, ಚಾ.ನಗರ, ಮೈಸೂರು, ಗುಂಡ್ಲುಪೇಟೆ, ಕೊಳ್ಳೇಗಾಲದಿಂದ 50 ಕೆಎಸ್‌ಆರ್‌ಟಿಸಿ ಬಸ್‌ ಸೌಲಭ್ಯ ಕಲ್ಪಿಸಲಾಗುವುದು….

ಈ ಪ್ರದೇಶ ಬೆಟ್ಟ ಗುಡ್ಡಗಳಿಂದ ಕೂಡಿದ್ದು, ರಸ್ತೆಗಳು ಕಿರಿದಾದ ತಿರುವುಗಳನ್ನು ಒಳಗೊಂಡಿರುವುದರಿಂದ ನುರಿತ ಚಾಲಕರುನ್ನು ನೇಮಕ ಮಾಡುವುದರ ಜತೆಗೆ ಗುಣಮಟ್ಟದ ಬಸ್‌ಗಳನ್ನು ನಿಯೋಜಿಸಲಾಗುವುದು…

ರಸ್ತೆಯಲ್ಲಿ ಅಧಿಕ ವಾಹನ ಓಡಾಟ ದಿಂದ ಅಪಘಾತಗಳು ಸಂಭವಿಸುವುದನ್ನು ತಪ್ಪಿಸಲು ಬೆಟ್ಟದ ಮೇಲೆ ದ್ವಿ ಚಕ್ರ ವಾಹನವನ್ನು ತಡೆಯಿಡಿಯಲಾಗಿದೆ,

ಮುಂಜಾಗ್ರತಾ ಕ್ರಮವಾಗಿ ಇಲಾಖೆಯ ಎರಡು ಕ್ರೇನ್‌ ವ್ಯವಸ್ಥೆ ಮಾಡಲಾಗಿದೆ.

ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನೈರ್ಮಲ್ಯ ಮತ್ತು ಸ್ವಚ್ಛತೆ ಕಾಪಾಡಲು ತುರ್ತು ಚಿಕಿತ್ಸಾ ವಾಹನ ‘108’ ಆಂಬ್ಯುಲೆನ್ಸ್‌ ನಿಯೋಜಿಸುವಂತೆ ತಿಳಿಸಿದರು.

ಪಟ್ಟಣ ಸೇರಿದಂತೆ ಬಿಳಿಗಿರಿರಂಗನಬೆಟ್ಟಕ್ಕೆ 14ರಿಂದ 17ರ ವರೆಗೆ ನಿರಂತರವಾಗಿ ವಿದ್ಯುತ್‌ ಸರಬರಾಜು ಮಾಡುವಂತೆ ಹಾಗೂ ದುರಸ್ತಿಗೊಳಿಸುವ ಕಾರ‍್ಯಗಳಿದ್ದಲ್ಲಿ ಶೀಘ್ರ ಪೂರ್ಣಗೊಳಿಸಿ, ಜಾತ್ರಾ ದಿನಗಳಲ್ಲಿ ವಾಹನ ಸಮೇತ ಸಿಬ್ಬಂದಿ ಬೆಟ್ಟದಲ್ಲಿ ವಾಸ್ತವ್ಯ ಹೂಡಬೇಕು…

ಕಳೆದ ಬಾರಿ ಜಾತ್ರಾ ದಿನಗಳಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆ ಉಂಟಾಗಿತ್ತು. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಈ ಬಾರಿ ಜಾತ್ರೆಗೆ ಭಕ್ತರಿಗೆ ಬಿಳಿಗಿರಿರಂಗನಬೆಟ್ಟದ ಗ್ರಾ.ಪಂ. ಸಹಯೋಗದೊಂದಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ದೇವಾಲಯದಲ್ಲಿ ಚಿನ್ನಾಭರಣಗಳಿರುವುದರಿಂದ ಪೊಲೀಸ್‌ ಬಿಗಿ ಬಂದೋಬಸ್ತ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರದರ್ಶನಕ್ಕೆ ಸೀಮಿತವಾಯ್ತು ನೀರಿನ ಘಟಕ?

Fri Jan 6 , 2023
ಲಕ್ಷೇಶ್ವರ: ಪ್ರಯಾಣಿಕರಿಗೆ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕೆಂಬ ಉದ್ದೇಶದಿಂದ ಸರ್ಕಾರ ತಾಲ್ಲೂಕಿನ ಎಲ್ಲ ಕರ್ನಾಟಕ ಸಾರಿಗೆ ಬಸ್ ನಿಲ್ದಾಣದಲ್ಲಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ತೆರೆದಿದೆ. ಆದರೆ ಅವುಗಳು ನಿರ್ವಹಣೆ ಕೊರತೆಯಿಂದ ಬಳಲುತ್ತಿವೆ. ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ನಿರ್ವಹಣೆ ಕೊರತೆಯಿಂದಾಗಿ, ಕೆಟ್ಟು ಹೋಗಿರುವ ಘಟಕಗಳ ದುರಸ್ತಿ ನಡೆಯದೇ ಘಟಕದ ಯಂತ್ರಗಳು ತುಕ್ಕು ಹಿಡಿದು ಸುತ್ತಲಿನ ಗಾಜುಗಳು ಕಾಣದಂತೆ ಆಗಿವೆ. ಪ್ರಯಾಣಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಹೌದು […]

Advertisement

Wordpress Social Share Plugin powered by Ultimatelysocial