ಧರ್ಮ, ಜಾತಿ ಭಾವನೆಗಳ ಮೇಲೆ ರಾಜಕಾರಣ ಮಾಡುವ ಬಿಜೆಪಿ ನಾಯಕರ ಮಾರ್ಕ್ಸ್ ಕಾರ್ಡ್ ನನಗೆ ಬೇಕಿಲ್ಲ.

ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಎರಡು ಅವಧಿಯಲ್ಲಿ ಸರಿ ಸುಮಾರು 1200 ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ. ಆದರೆ ಅಭಿವೃದ್ಧಿ ಮರೆತಿರುವ ಬಿಜೆಪಿ ನಾಯಕರಿಗೆ ನನ್ನ ವಿರುದ್ಧ ಆರೋಪ ಮಾಡಲು ಯಾವುದೇ ವಿಷಯಗಳಿಲ್ಲ, ಸುಳ್ಳನ್ನು ನೂರುಬಾರಿ ಹೇಳಿ ಸತ್ಯ ಮಾಡಲು ಬಿಜೆಪಿಯವರು ಹೆಣಗಾಡುತ್ತಿದ್ದಾರೆಂದು ಶಾಸಕ ಪ್ರಸಾದ್ ಅಬ್ಬಯ್ಯ ಬಿಜೆಪಿಯ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನನ್ನ ವಿರುದ್ಧ ವಿನಾಕಾರಣ ಬಿಜೆಪಿಯ ಕೆಲನಾಯಕರು ಪ್ರತಿಭಟನೆ ನಡೆಸಿ ಸುಳ್ಳು ಆರೋಪ ಮಾಡಿದ್ದಾರೆ. ಎರಡು ಅವಧಿಯಲ್ಲಿ ನನ್ನ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ ಸಂಪೂರ್ಣ ಮಾಹಿತಿಯನ್ನು ಪುಸ್ತಕ ರೂಪದಲ್ಲಿ ಜನರ ಕೈಯಲ್ಲಿ ನೀಡುತ್ತೇನೆ. ಅಭಿವೃದ್ಧಿ ಮರೆತು ಕೇವಲ ಧರ್ಮ, ಜಾತಿ ಭಾವನೆಗಳ ಮೇಲೆ ರಾಜಕಾರಣ ಮಾಡುವ ಬಿಜೆಪಿ ನಾಯಕರ ಮಾರ್ಕ್ಸ್ ಕಾರ್ಡ್ ನನಗೆ ಬೇಕಿಲ್ಲ, ಅವರ ಪಕ್ಷದ ಮುಖ್ಯಮಂತ್ರಿ ಆದಿಯಾಗಿ ಅವರ ಪಕ್ಷದ ಹಿರಿಯ ನಾಯಕರು ನನ್ನ ಅಭಿವೃದ್ಧಿ ಕಾರ್ಯಗಳನ್ನು ಬಹಿರಂಗ ಕಾರ್ಯಕ್ರಮಗಳಲ್ಲಿಯೇ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ ಎಂದರು.

ಮಾಜಿ ಶಾಸಕ ವೀರಭದ್ರಪ್ಪ ಹಾಲರವಿ ಅವರು ಈ ಹಿಂದೆ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡಿದ್ದಾರೆಂಬುದು ಜನರಿಗೆ ಗೊತ್ತಿದೆ. ಅವರ ಅವಧಿಯಲ್ಲಿ ಐದು ವರ್ಷ ನಿದ್ದೆ ಮಾಡಿ ಎದ್ದು ಹೋಗಿದ್ದೆ ಅವರ ಸಾಧನೆ. ಕನಿಷ್ಠ ಪಕ್ಷ ಅವರ ಸಮಾಜದ ಜನರಿಗೆ ನ್ಯಾಯ ಕೊಡಲು ಆಗಲಿಲ್ಲ, ಆದರೆ ಕ್ಷೇತ್ರದ ಇಂದಿರಾನಗರ, ಎಸ್.ಎಮ್.ಕೃಷ್ಣ ನಗರ ಸೇರಿದಂತೆ ಮುಂತಾದ ಕಡೆಗಳಲ್ಲಿನ ಸಮಾಜದ ಪಂಚ ಕಮಿಟಿಯವರೇ ನನ್ನ ಅಭಿವೃದ್ಧಿ ಕಾರ್ಯಗಳನ್ನು ಶ್ಲಾಘಿಸಿ ಹಾಲರವಿ ಅವರನ್ನು ತೆಗಳಿದ ನಿದರ್ಶನಗಳಿವೆ ಎಂದು ಕುಟುಕಿದರು.

ರಾಜಕೀಯಕ್ಕೆ ಸದ್ಯ ಕಾಲಿಡುತ್ತಿರುವ ಡಾ.ಕ್ರಾಂತಿಕಿರಣ ಶಾಲಾ-ಕಾಲೇಜು, ಆಸ್ಪತ್ರೆ ತಂದಿಲ್ಲಾ ಎಂದು ಆರೋಪಿಸಿದ್ದಾರೆ. ವಿಪರ್ಯಾಸವೆಂದರೆ ಇವರ ಸ್ವಂತದ ಆಸ್ಪತ್ರೆಯಲ್ಲಿ ಮೃತರ ಶವ ನೀಡಲು ಹಣಕ್ಕಾಗಿ ಪೀಡಿಸಿದ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಇಂತವರಿಂದ ಜನರು ನಿರೀಕ್ಷಿಸುವುದಾದರೂ ಏನೂ? ಮೊದಮೊದಲು ಗೌಡ ಸಮುದಾಯಕ್ಕೆ ಸೇರಿದವನು ಎಂದು ಹೇಳಿಕೊಂಡು ಓಡಾಡುತ್ತಿದ್ದ ಡಾ.ಕ್ರಾಂತಿಕಿರಣ ಇದೀಗ ಚುನಾವಣೆಗಾಗಿ ಎಸ್.ಸಿ ಎಂದು ಹೇಳುತ್ತಿದ್ದಾರೆ. ನಾನು ಕ್ಷೇತ್ರದಲ್ಲಿ ಅನೇಕ ಆಸ್ಪತ್ರೆ ನಿರ್ಮಾಣ ಮಾಡಿದ್ದೇನೆ. ಇರುವ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದ್ದೇನೆ. ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಅನುದಾನ ಕೊಡದೇ ಸತ್ತಾಯಿಸಿದ್ದು, ಇದೀಗ ಮಹಾನಗರ ಪಾಲಿಕೆಯಿಂದ ಭರಿಸುವಂತಾಗಿದೆ ಎಂದು ಹರಿಹಾಯ್ದರು.

ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ದುರ್ಗದ ಬಯಲು, ಎಮ್.ಜಿ.ಮಾರುಕಟ್ಟೆ ಅಭಿವೃದ್ಧಿಗಿಟ್ಟ ಸುಮಾರು 110 ಕೋಟಿ ಅನುದಾನವನ್ನು ಬೇರೆ ಕಡೆಗೆ ವರ್ಗಾಯಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಪೂರ್ವ ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿಗರಲ್ಲಿ ಕಾಳಜಿ ಇದ್ದಿದ್ದರೇ ಈ ಅನುದಾನವನ್ನು ಬೇರೆಡೆಗೆ ವರ್ಗಾವಣೆ ಮಾಡಿದಾಗ ಯಾಕೆ ಪ್ರತಿಭಟನೆ ಕೊಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ರಾಜ್ಯ ಬಿಜೆಪಿ ಸರ್ಕಾರ ಕೋವಿಡ್ ಹೆಸರಿನಲ್ಲಿ ಬಿಜೆಪಿಯೇತರ ಶಾಸಕರಿಗೆ ಅನುದಾನ ಕೊಡದೇ ಸತಾಯಿಸಿದ್ದಾರೆ. ಅವರ ಶಾಸಕರಿಗೆ 80 ಕೋಟಿ ನೀಡಿದರೇ ನಮಗೆ 25 ಕೋಟಿ ನೀಡಿದ್ದಾರೆ. ಪ್ರತಿಯೊಂದು ವಿಚಾರದಲ್ಲಿ ಚುನಾವಣೆ ರಾಜಕೀಯ ಚಿಂತನೆ ಮಾಡತ್ತಾರೆ ಅಭಿವೃದ್ಧಿ ಬಗ್ಗೆ ಕಾಳಜಿ ಇಲ್ಲ, ಇವರಿಂದ ನಾವೆನ್ನು ಕಲಿಯುವ ಅಗತ್ಯವಿಲ್ಲ ಎಂದು ಕಿಡಿಕಾರಿದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ.

Tue Jan 24 , 2023
ಕಾರವಾರ : ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ  ಸಮಸ್ಯೆ ಎದುರಾಗುತ್ತಿದ್ದಂತೆ ಕಾರವಾರದ ಇತಿಹಾಸ ಪ್ರಸಿದ್ಧ ಕರವಾರದ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಎತ್ತಿನಗಾಡಿ ನಿಷೇಧ ಮಾಡಲಾಗಿದೆ.  ಉಳವಿ ಚನ್ನಬಸವೇಶ್ವರ ಸ್ವಾಮಿ ಜಾತ್ರೆಯೂ ಜನವರಿ 28ರಿಂದ ಫೆ 8ರವರೆಗೆ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಎತ್ತಿನಬಂಡಿಗೆ ವಿಶೇಷ ರೀತಿಯಲ್ಲಿ ಸಿಂಗರಿಸುವುದು ಮಾಡುವುದೇ ಇಲ್ಲಿನ ಪರಂಪರೆಯಾಗಿದೆ. ಉಳವಿ ಚನ್ನಬಸವೇಶ್ವರ ಜಾತ್ರೆ ಸಿದ್ದತೆಯಲ್ಲಿದ್ದ ಜನರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ […]

Advertisement

Wordpress Social Share Plugin powered by Ultimatelysocial