ಟೊಯೋಟ ಗ್ಲಾನ್ಸಾ ಮಾರಾಟವು 1 ಲಕ್ಷವನ್ನು ದಾಟಿ;

ಬೆಂಗಳೂರು: ಟೊಯೋಟ ಗ್ಲಾನ್ಸಾ ಮತ್ತು ಅರ್ಬನ್‌ ಕ್ರೂಸರ್‌ ಮಾದರಿಗಳ ಒಟ್ಟಾರೆ ಸಗಟು ಮಾರಾಟವು 1 ಲಕ್ಷವನ್ನು ದಾಟಿದೆ ಎಂದು ಕಂಪನಿಯು ಶನಿವಾರ ತಿಳಿಸಿದೆ.

ಗ್ಲಾನ್ಸಾ ಮತ್ತು ಕ್ರೂಸರ್‌ ಅನ್ನು ಕ್ರಮವಾಗಿ 2019ರ ಜೂನ್‌ ಮತ್ತು 2020ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದು, ಎರಡು ವಾಹನಗಳಿಗೂ ಗ್ರಾಹಕರಿಂದ ಉತ್ತಮ ಬೇಡಿಕೆ ಬಂದಿದೆ.

ಗ್ಲಾನ್ಸಾ ಮಾರಾಟವು 65 ಸಾವಿರ ದಾಟಿದ್ದರೆ, ಕ್ರೂಸರ್‌ ಮಾರಾಟವು 35 ಸಾವಿರವನ್ನು ದಾಟಿದೆ. ಈ ಮೂಲಕ ಹೊಸ ಮೈಲಿಗಲ್ಲು ಸೃಷ್ಟಿಯಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಎರಡು ಮತ್ತು ಮೂರನೇ ಶ್ರೇಣಿಯ ಮಾರುಕಟ್ಟೆಗಳಿಂದ ಈ ವಾಹನಗಳಿಗೆ ಬೇಡಿಕೆ ಬಂದಿದೆ. ಕ್ಯು ಸರ್ವೀಸ್‌, ವಿಸ್ತರಿತ ವಾರಂಟಿ ಮತ್ತು ಸೇವಾ ಪ್ಯಾಕೇಜ್‌ಗಳಿಂತಹ ಮೌಲ್ಯವರ್ಧಿತ ಸೇವಾ ಕೊಡುಗೆಗಳಿಂದಾಗಿ ಈ ಮಾರಾಟವು ಸಾಧ್ಯವಾಗಿದೆ ಎಂದು ಹೇಳಿದೆ.

ಗ್ರಾಹಕರ ತೃಪ್ತಿಯನ್ನು ಖಚಿತಪಡಿಸಿಕೊಳ್ಳಲು ಟೊಯೋಟ ಕಂಪನಿಯ ಸದಾ ಅವಿರತ ಪ್ರಯತ್ನ ನಡೆಸುತ್ತಿರುತ್ತದೆ. ಅತ್ಯುತ್ತಮ ಮಾಲೀಕತ್ವದ ಅನುಭವ ಮತ್ತು ಮಾರಾಟದ ನಂತರದ ಸೇವೆಗಳಿಂದಾಗಿ ಈ ಮೈಲಿಗಲ್ಲು ಸಾಧ್ಯವಾಗಿದೆ. 2020 ರಲ್ಲಿ ಅಗಿದ್ದ ಮಾರಾಟಕ್ಕೆ ಹೋಲಿಸಿದರೆ ಗ್ಲಾನ್ಸಾ ಮಾರಾಟವು ಶೇ 25ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಕಂಪನಿಯ ಸಹಾಯಕ ಉಪಾಧ್ಯಕ್ಷ ಅತುಲ್‌ ಸೂದ್‌ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ನಿಸ್ಸಾನ್ ಮ್ಯಾಗ್ನೈಟ್;

Sat Jan 29 , 2022
ಕಂಪ್ಯಾಕ್ಟ್ ಎಸ್‌ಯುವಿ ಕಾರು ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ನಿಸ್ಸಾನ್ ಮ್ಯಾಗ್ನೈಟ್ಕಾರು ಮಾದರಿಯು ಬಿಡುಗಡೆಯ ನಂತರ ಹಲವಾರು ಹೊಸ ದಾಖಲೆಗೆ ಕಾರಣವಾಗಿದ್ದು, ಭಾರತದಲ್ಲಿ ಬಿಡುಗಡೆಯಾದ ನಂತರ ಇದುವರೆಗೆ ಬರೋಬ್ಬರಿ 78 ಸಾವಿರ ಬುಕ್ಕಿಂಗ್ ಪಡೆದುಕೊಂಡಿದೆ. 2020ರ ಡಿಸೆಂಬರ್ 2ರಂದು ಬಿಡುಗಡೆಯಾಗಿದ್ದ ನಿಸ್ಸಾನ್ ಮಾಗ್ನೈಟ್ ಕಾರು ಮಾದರಿಯು ಇದುವರೆಗೆ ಸುಮಾರು 78 ಸಾವಿರಕ್ಕೂ ಹೆಚ್ಚು ಯುನಿಟ್‌ಗಳಿಗೆ ಬುಕ್ಕಿಂಗ್ ದಾಖಲಾಗಿದ್ದು, ಇದರಲ್ಲಿ 40 ಸಾವಿರ ಯುನಿಟ್ ಕಾರುಗಳನ್ನು ಈಗಾಗಲೇ ವಿತರಣೆ ಮಾಡಿದೆ. ಹೊಸ […]

Advertisement

Wordpress Social Share Plugin powered by Ultimatelysocial