ಭಾರತದಿಂದ ಮೊದಲ ಬಾರಿಗೆ ಬೆಂಗಳೂರಿನ ರಿಜಾ ರೆಜಿ ಆಯ್ಕೆಯಾಗಿದ್ದಾರೆ.

 

ಗ್ಲೋಬಲ್ ಡೌನ್ ಸಿಂಡ್ರೋಮ್ ಫೌಂಡೇಶನ್  ವಾರ್ಷಿಕ ಫ್ಯಾಶನ್ ಶೋ – ಬಿ ಬ್ಯೂಟಿಫುಲ್, ಬಿ ಯುವರ್‌ಸೆಲ್ಫ್ ಸ್ಪರ್ಧೆ ಭಾರತದಿಂದ ಮೊದಲ ಬಾರಿಗೆ ಬೆಂಗಳೂರಿನ  ರಿಜಾ ರೆಜಿ  ಆಯ್ಕೆಯಾಗಿದ್ದಾರೆ.
ಡೌನ್ ಸಿಂಡ್ರೋಮ್ ಹೊಂದಿರುವ 20ಕ್ಕೂ ಹೆಚ್ಚು ಮಾಡೆಲ್ ಗಳು ಈ ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ರಿಜಾ ರೆಜಿ ಈ ಸ್ಪರ್ಧೆಗೆ ಆಯ್ಕೆಯಾದ ಮೊದಲ ಭಾರತೀಯರಾಗಿದ್ದಾರೆ. USನ ಡೆನ್ವರ್ನ್ ನಲ್ಲಿ ನವೆಂಬರ್ 12ರಂದು ಈ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದನ ಮೂಲಕ ಸಂಶೋಧನೆಗಾಗಿ ಹಣ ಸಂಗ್ರಹಿಸಲಿದೆ.
23 ವರ್ಷದ ರಿಜಾ ರೆಜಿ ಕಲೆಯತ್ತ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ಕುಟುಂಬಸ್ಥರು ಹೇಳುತ್ತಾರೆ. ನಗರದ ಕ್ರಿಸಾಲಿಸ್ ಪರ್ಫಾರ್ಮೆನ್ಸ್ ಆರ್ಟ್ ಸೆಂಟರ್‌ನಲ್ಲಿ ರಂಗಭೂಮಿ ಅಭ್ಯಾಸಿಯಾಗಿರುವ ರಿಜಾ, ಡಯಾನಾ ತೊಳುರ್ ಎಂಬವರ ಬಳಿ ತರಬೇತಿ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ನೃತ್ಯಗಾರ್ತಿ ಸಹ ಆಗಿದ್ದಾರೆ.
ರಿಜಾ ರೆಜಿ ಸಂದರ್ಶನ
ರಿಜಾ ರೆಜಿ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ್ದು, ಕಲೆ ಮತ್ತು ರಂಗಭೂಮಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹೇಗೆ ಸಹಾಯ ಮಾಡಿತು ಎಂದು ಹೇಳಿದ್ದಾರೆ. “ರಂಗಭೂಮಿ ನನ್ನ ಜೀವನದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ಇದು ನನ್ನ ಆಲೋಚನೆಗಳು ಮತ್ತು ಭಾವನೆಗಳನ್ನು ತೆರೆಯಲು ಮತ್ತು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು ಎಂದು ಹೇಳುತ್ತಾರೆ.
ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ
ಆಡಿಷನ್ ನೀಡುವ ಸಂದರ್ಭದಲ್ಲಿಯೂ ನನ್ನನ್ನು ಸಂಪೂರ್ಣವಾಗಿ ಅವರ ಮುಂದೆ ಪ್ರಸ್ತುತಪಡಿಸಲು ಸಹಾಯ ಮಾಡಿದೆ. ಈ ಫ್ಯಾಷನ್ ಇವೆಂಟ್ ಗೆ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿ ಎಂದು ತಿಳಿದು ನನಗೆ ಆಶ್ಚರ್ಯವಾಗಿದೆ. ಅದರ ಜೊತೆ ಸ್ಪರ್ಧೆಯಲ್ಲಿ ಭಾಗವಹಿಸಲು ತುಂಬಾ ಉತ್ಸುಕಳಾಗಿದ್ದೇನೆ ಎಂದು ರಿಜಾ ರೆಜಿ ಸಂತೋಷ ವ್ಯಕ್ತಪಡಿಸುತ್ತಾರೆ. ನನ್ನ ಮೌಖಿಕ ಕೌಶಲ್ಯಗಳನ್ನು ಸಿದ್ಧಪಡಿಸಲು ನಾನು ಅಭ್ಯಾಸ ಮಾಡುತ್ತಿದ್ದೇನೆ. ಈ ಈವೆಂಟ್‌ಗಾಗಿ ನನ್ನ ಫ್ಯಾಷನ್ ಆಯ್ಕೆಗಳನ್ನು ಪರಿಗಣಿಸುತ್ತಿದ್ದೇನೆ.
ರಿಜಾ ಅವರ ತಾಯಿ ಮಾತು
ರಿಜಾ ಅವರ ತಾಯಿ ಅನಿತಾ ರೆಜಿ ವಿಕಲಚೇತನರನ್ನು ಸಬಲೀಕರಣಗೊಳಿಸುವ ಬೆಂಗಳೂರು ಮೂಲದ ಫೌಂಡೇಶನ್ ಬ್ಯೂಟಿಫುಲ್ ಟುಗೆದರ್‌ನ ಸಹ-ಸಂಸ್ಥಾಪಕಿಯಾಗಿದ್ದಾರೆ. ಮಗಳು ರಿಜಾ ಮಾತಿನಲ್ಲಿ ಚತುರರಾಗಿದ್ದು, ತಮ್ಮ ಎಲ್ಲಾ ಭಾವನೆಗಳನ್ನು ತುಂಬಾ ಚೆನ್ನಾಗಿ ವ್ಯಕ್ತಪಡಿಸುತ್ತಾರೆ.
ರಿಜಾ ಭಾವುಜ ಜೀವಿಯಾಗಿದ್ದು, ಹೆಚ್ಚು ಜನರ ಜೊತೆ ಬೆರೆಯಲು ಇಷ್ಟಪಡುತ್ತಾಳೆ. ತನ್ನ ಅಂಗವೈಕಲ್ಯದಿಂದ ಲಾಭ ಹುಡುಕುವ ಹುಡುಗಿ ಅವಳಲ್ಲ. ಈ ರೀತಿಯ ಫ್ಯಾಷನ್ ಶೋಗಳು ಒಂದು ಗುರಿ ಮತ್ತು ಸ್ವಾವಲಂಬನೆ ತುಂಬುವ ಕೆಲಸ ಮಾಡುತ್ತವೆ. ಇಂತಹ ಕಾರ್ಯಕ್ರಮಗಳು ವಿಕಲಾಂಗ ವ್ಯಕ್ತಿಗಳು ತಮ್ಮ ಕನಸುಗಳನ್ನು ಸಾಧಿಸಲು ಭರವಸೆಯನ್ನು ಹುಟ್ಟುಹಾಕುತ್ತವೆ ಎಂದು ಅನಿತಾ ಹೇಳುತ್ತಾರೆ.
ವಿಕಲಾಂಗತೆಯನ್ನು ಮೆಟ್ಟಿ ನಿಲ್ಲಲು ಸಹಾಯ ಮಾಡುತ್ತೆ
“ಈ ಫ್ಯಾಶನ್ ಶೋ ರಿಜಾ ಮತ್ತು ಡೌನ್ ಸಿಂಡ್ರೋಮ್ ಹೊಂದಿರುವ ಎಲ್ಲಾ ವಿಕಲಾಂಗ ಮಕ್ಕಳಿಗೆ ಸ್ಪೂರ್ತಿಯಾಗಲಿದೆ ಎಂಬುವುದು ನನ್ನ ನಂಬಿಕೆ. ಭಾರತದಲ್ಲಿ ವಿಕಲಾಂಗ ವ್ಯಕ್ತಿಗಳಿಗೆ ಕೆಲವು ವಲಯಗಳಿಗೆ ಪ್ರವೇಶವಿಲ್ಲ. ಈ ರೀತಿಯ ಘಟನೆಗಳು ತಮ್ಮ ವಿಕಲಾಂಗತೆಯನ್ನು ಮೆಟ್ಟಿ ನಿಲ್ಲಲು ಸಹಾಯ ಮಾಡುತ್ತೇವೆ. ಇಂತಹ ಕಾರ್ಯಕ್ರಮಗಳಿಂದ ಮಕ್ಕಳ ಸೃಜನಶೀಲತೆ ಹೊರ ಬರಲು ಸಾಧ್ಯವಾಗುತ್ತದೆ.
ಫೆಬ್ರವರಿಯಲ್ಲಿ ಆನ್‌ಲೈನ್ ಆಡಿಷನ್‌ನಲ್ಲಿ ರಿಜಾ ಆಯ್ಕೆಯಾದರು. ಆಕೆಯ ವೇಷಭೂಷಣಗಳು (ಅವರು ಇಂಡೋ-ವೆಸ್ಟರ್ನ್ ಫ್ಯೂಷನ್ ಲುಕ್ ಅನ್ನು ಆಯ್ಕೆ ಮಾಡಿಕೊಂಡರು), ಆಕೆಯ ವ್ಯಕ್ತಿತ್ವದ ಕುರಿತು ಪ್ರಶ್ನೋತ್ತರ ಅವಧಿ ಮತ್ತು ಸಣ್ಣ ರಾಂಪ್ ವಾಕ್ ಆಧಾರದ ಮೇಲೆ ರಿಜಾ ಅವರ ಆಯ್ಕೆಯಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ.ಆರ್​.ಸಾಗರ: ಕಾವೇರಿ ಡ್ಯಾಂ ಅಣೆಕಟ್ಟೆಯಿಂದ ನೀರು ಹೊರ ಬಿಡುವ ಸಾಧ್ಯತೆ

Thu Jul 7 , 2022
ಕೆ.ಆರ್​.ಸಾಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಕೆ.ಆರ್​.ಎಸ್​. ಡ್ಯಾಂಗೆ ಒಳಹರಿವು ಹೆಚ್ಚಾಗಿದ್ದು, ಯಾವ ಸಮಯದಲ್ಲಾದರೂ ಅಣೆಕಟ್ಟೆಯಿಂದ ನೀರು ಹೊರ ಬಿಡುವ ಸಾಧ್ಯತೆ ಇರುವುದರಿಂದ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ. ಕೃಷ್ಣರಾಜಸಾಗರ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಬುಧವಾರ ಮಧ್ಯಾಹ್ನಕ್ಕೆ 115.70 ಅಡಿ ತಲುಪಿದೆ. ಒಳಹರಿವು 30,923 ಕ್ಯೂಸೆಕ್​ ಇದ್ದು, ಎರಡು ದಿನಗಳಲ್ಲಿ ಅಣೆಕಟ್ಟೆಗೆ 6 ಅಡಿ ನೀರು ಹರಿದು ಬಂದಿದೆ. ಕಾವೇರಿ ಕಣಿವೆಯಲ್ಲಿ ಹಲವು ದಿನಗಳಿಂದ ಉತ್ತಮ ಮಳೆ […]

Advertisement

Wordpress Social Share Plugin powered by Ultimatelysocial