ಸೋಕಾಲ್ಡ್ ಬಿಜೆಪಿ ಯಾವತ್ತು ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿ ಬಂದಿಲ್ಲ.

 

ಸೋಕಾಲ್ಡ್ ಬಿಜೆಪಿ ಯಾವತ್ತು ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿ ಬಂದಿಲ್ಲ.ಎಲ್ಲ ರಾಜ್ಯಗಳಲ್ಲೂ ಪ್ರಾದೇಶಿಕ ಪಕ್ಷಗಳಿಗೆ ಜನ ಬಲ‌ ನೀಡ್ತಾ ಇದ್ದಾರೆ. ಬೀದರ್‌ನಲ್ಲಿ ಜೆಡಿಎಸ್ ಉಪನಾಯಕ ಬಂಡೆಪ್ಪಾ ಖಾಶೆಂಪೂರ ಹೇಳಿಕೆ. ಎಲ್ಲಾ ಪಕ್ಷಗಳು ಇವಾಗ ಚುನಾವಣಾ ತಯಾರಿಯಲ್ಲಿ ಮುಳುಗಿವೆ. ಆದ್ರೆ ಜನ ಪ್ರಾದೇಶಿಕ ಪಕ್ಷಗಳಿಗೆ ಪ್ರಾದಾನ್ಯತೆ ನೀಡ್ತಾ ಇದ್ದಾರೆ. ದೇಶದೆಲ್ಲೆಡೆ ಪ್ರಾದೇಶಿಕ ಪಕ್ಷಗಳಿಗೆ ಜನ ಬಲ‌ ಕೋಡ್ತಾ ಇದಾರೆ. ರಾಜ್ಯಕ್ಕೆ ಕೇಂದ್ರ ನಾಯಕರು ಭೇಟಿ‌ ವಿಚಾರ. ಬಿಜೆಪಿ ಪಕ್ಷ, ಅಧಿಕಾರಕ್ಕೆ ತೆರಬೇಕೆಂದು ಕೆಂದ್ರ ನಾಯಕರು ಇಲ್ಲೆ‌ ಟಿಕಾಣಿ ಹೂಡ್ತಿದ್ದಾರೆ. ಅವರು ಏನೇ ಮಾಡಿದರು ಅಧಿಕಾರಕ್ಕೆ ಬರಲ್ಲಾ. ಬಿಜೆಪಿ-ಕಾಂಗ್ರೆಸ್ ವಿರುದ್ದ ಕಿಡಿಕಾರಿದ ಜೆಡಿಎಸ್ ಉಪನಾಯಕ ಬಂಡೆಪ್ಪಾ ಖಾಶೆಂಪುರ. ಇದುವರೆಗೆ ಬಿಜೆಪಿ ಯಾವತ್ತು ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿಲ್ಲಾ. ಬೇರೆ ರಾಜಕೀಯವೇ ಬೇರೆ ಕರ್ನಾಟಕದ ರಾಜಕೀಯವೇ ಬೇರೆ. ಯಾರು‌ ಜನ ಪರ ಇರ್ತಾರೆ, ಜನರ ನಾಡಿಮಿಡಿತ ಅರಿತಿರ್ತಾರೆ ಅಂತವರಿಗೆ ಅಧಿಕಾರ ಬಲ ಕೋಡ್ತಾರೆ. ಈ ಹಿಂದೆ ಕಾಂಗ್ರೆಸ್ ಅವರು ೫ ವರ್ಷ ಆಡಳಿತ ನಡೆಸಿದ್ರು, ಆದರೆ ೧೩೦ ರಿಂದ ೭೮ ಕ್ಕೆ ಬಂದ್ರು.  ಬಿಜೆಪಿ ಪೂರ್ಣ ಪ್ರಮಾಣದಲ್ಲಿ ಬರಲಿಲ್ಲಾ, ಆಪರೆಷನ್ ಕಮಲ‌ ಮಾಡಿಕೊಂಡು ಅಧಿಕಾರಕ್ಕೆ ಬಂದ್ರು. ಈಗ ಬಿಜೆಪಿ ಚುನಾವಣೆಗೆ ಹೋಗ್ತಿದೆ, ಜನರ ಮುಂದೆ ತಮ್ಮ ಅಭಿವೃದ್ದಿ ಕಾರ್ಯ ಹೇಳ್ತಿಲ್ಲಾ. ಕೇಂದ್ರದ ನಾಯಕರನ್ನ‌ ನೋಡ್ರಿ, ಡಬಲ್ ಎಂಜೀನ್ ಸರ್ಕಾರ ನೋಡ್ರಿ ಅಂತಾ ಹೇಳುತ್ತಿದಾರೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ರೈತರಿಗೆ ಸಾಕಷ್ಟು ಯೋಜನೆಗಳನ್ನ‌ ನೀಡಿದ್ದಾರೆ. ೨೫ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದಾರೆ. ಕುಮಾರಣ್ಣ ಅಧಿಕಾರದಲ್ಲಿದ್ದಾಗ ನೂರಾರು ಯೋಜನೆಗಳನ್ನ ನೀಡಿದ್ದಾರೆ. ಆದ್ರೆ ಬಿಜೆಪಿ – ಕಾಂಗ್ರೆಸ್ ಏನು ನೀಡಿದೆ ಎಂದು ಹರಿಹಾಯ್ದ ಖಾಶೆಂಪೂರ. ರಾಜ್ಯದಲ್ಲಿ‌ ನಾವೇನು‌ ಕಡಿಮೆ ಇಲ್ಲಾ, ಪ್ರಾದೇಶಿಕ‌ ಪಕ್ಷವಾಗಿ ಗಟ್ಟಿಯಾಗಿ‌‌ ನಿಂತಿದೀವಿ. ಹರಿಯಾಣದಲ್ಲಿ‌ ಬಿಜೆಪಿ ೪ ರಿಂದ ೪೦ ಬರುತ್ತೆ, ನಾವು ೪೦ ರಿಂದ ೧೨೦ ಬರೊಲ್ವಾ. ಸದ್ಯ ಜೆಡಿಎಸ್‌ನ ಪಂಚ ರತ್ನ ಯಾತ್ರೆಗೆ ಅಭೂತಪೂರ್ವ ಬೆಂಬಲ ಇದೆ.ಕುಮಾರಸ್ವಾಮಿ ಸಾರಥ್ಯದ ಪಂಚರತ್ನಕ್ಕೆ ಜನ ಬೆಂಬಲ‌ ಇದೆ, ನಾವು ಅಧಿಕಾರದ ಚುಕ್ಕಾಣಿ ಹೀಡಿತಿವಿ ಎಂದ ಖಾಶೆಂಪುರ.ಬೀದರ್‌ನಲ್ಲಿ ಜೆಡಿಎಸ್‌ ಉಪನಾಯಕ ಬಂಡೆಪ್ಪ ಖಾಶೆಂಪುರ ಹೇಳಿಕೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಮುಖ ಇಸ್ಲಾಮಿಕ್ ಕಮಾಂಡರ್‌ ಗಳನ್ನು ಹತ್ಯೆ ಮಾಡಿದ ತಾಲಿಬಾನ್!

Tue Feb 28 , 2023
ಕಾಬೂಲ್: ಕೆಲವು ದಿನಗಳ ಹಿಂದೆ ರಾಜಧಾನಿ ಕಾಬೂಲ್‌ ನಲ್ಲಿ ಭಯೋತ್ಪಾದನಾ ನಿಗ್ರಹ ದಾಳಿಯ ಸಂದರ್ಭದಲ್ಲಿ ತನ್ನ ಭದ್ರತಾ ಪಡೆಗಳು ಇಬ್ಬರು ಪ್ರಮುಖ ಇಸ್ಲಾಮಿಕ್ ಸ್ಟೇಟ್ ಕಮಾಂಡರ್‌ ಗಳನ್ನು ಹತ್ಯೆ ಮಾಡಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಹೇಳಿದೆ. ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಒಬ್ಬನಾದ ಖಾರಿ ಫತೇಹ್, ಗುಪ್ತಚರ ಮುಖ್ಯಸ್ಥ ಮತ್ತು ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾಂತ್ಯದ (ಐಎಸ್‌ಕೆಪಿ) ಮಾಜಿ ಯುದ್ಧ ಮಂತ್ರಿ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಐಎಸ್‌ಕೆಪಿ ಸಂಘಟನೆಯು […]

Advertisement

Wordpress Social Share Plugin powered by Ultimatelysocial