ರಾಜ್ಯದ 4 ದಿಕ್ಕುಗಳಲ್ಲೂ ಬಿಜೆಪಿ ಬಸ್ ಯಾತ್ರೆ:

ರಾಜ್ಯದ 4 ದಿಕ್ಕುಗಳಲ್ಲೂ ಬಿಜೆಪಿ ಬಸ್ ಯಾತ್ರೆ ನಡೆಯಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.ದಾವಣಗೆರೆ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿಯೇ ನಡೆಯುತ್ತಿದೆ.

ಕಾಂಗ್ರೆಸ್ ಎರಡು ಬಣಗಳಾಗಿ ಪ್ರಜಾಧ್ವನಿ ಹೆಸರಿನಲ್ಲಿ ಬಸ್ ಯಾತ್ರೆ ಮಾಡುತ್ತಿದೆ. ಇನ್ನು ಜೆಡಿಎಸ್ ಪಂಚರತ್ನ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದೆ. ಮತ್ತೊಂದಡೆ ಮಾಜಿ ಸಚಿವ ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪಗ್ರತಿ ಪಕ್ಷದ  ಮೂಲಕ, ಯಾತ್ರೆ ಆರಂಭಿಸಿದ್ದಾರೆ. ಈಗ ಬಿಜೆಪಿ  ಕೂಡ ಬಸ್​ ಯಾತ್ರೆ ಮಾಡಲು ನಿರ್ಧರಿಸಿದ್ದು, ರಾಜ್ಯದ 4 ದಿಕ್ಕುಗಳಲ್ಲೂ ಬಿಜೆಪಿ ಬಸ್ ಯಾತ್ರೆ  )ನಡೆಯಲಿದೆ ಎಂದು ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ದಾವಣಗೆರೆ ಜಿಲ್ಲೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮಾರ್ಚ್ ಮೊದಲ ಹಾಗೂ 2ನೇ ವಾರದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಆಗಮಿಸಲಿದ್ದಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಹಳೇ ಮೈಸೂರು ಭಾಗ, ಕೋಲಾರ ಹೀಗೆ 4 ಕಡೆ ರಥಯಾತ್ರೆ ರೂಪದಲ್ಲಿ ಬಸ್ ಜಾತ್ರೆ ನಡೆಯಲಿದೆ. ರಾಜ್ಯದ 4 ದಿಕ್ಕುಗಳಿಂದ ಬಂದ ಯಾತ್ರೆಗಳು ದಾವಣಗೆರೆ ಸೇರಲಿವೆ. ಶೀಘ್ರವೇ ಸಮಾರೋಪ ಸಮಾವೇಶದ ಸ್ಥಳ ನಿಗದಿ ಮಾಡುತ್ತೇವೆ. ದಾವಣಗೆರೆಯಲ್ಲಿ ಸಮಾವೇಶ ಮಾಡಿ ಚುನಾವಣೆಗೆ ಹೋಗುತ್ತೇವೆ ಎಂದರು.

ಒಟ್ಟಿನಲ್ಲಿ ಮೂರು ರಾಜಕೀಯ ಪಕ್ಷಗಳು ಮತದಾರರನ್ನು ತಮ್ಮತ್ತ ಸೆಳೆಯಲು ಹರಸಾಹ ಪಡುತ್ತಿವೆ. ಇನ್ನು ಬಿಜೆಪಿ ವಿಚಾರಕ್ಕೆ ಬರುವುದಾದರೆ ರಾಜ್ಯ ಬಿಜೆಪಿ ಘಟಕ ಮತ ಸೆಳೆಯಲು ರಣತಂತ್ರ ರೂಪಿಸುತ್ತಿದ್ದು, ಕಾರ್ಯಕರ್ತ ಬಲ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ವಿಜಯ ಸಂಕಲ್ಪ ಅಭಿಯಾನ ಮಾಡಿತ್ತು. ಇನ್ನು ರಾಜ್ಯ ಬಿಜೆಪಿ ನಾಯಕರು ಕೇಂದ್ರದ ನಾಯಕರದತ್ತ ಮುಖ ಮಾಡಿದ್ದು, ಚುನಾವಣಾ ಚಾಣಕ್ಯ ಅಮಿತ್​ ಶಾ​, ಪ್ರಧಾನಿ ನರೇದ್ರ ಮೋದಿ ಅವರು ಈಗಾಗಲೆ 2 ರಿಂದ 3 ಸಾರಿ ರಾಜ್ಯಕ್ಕೆ ಬಂದು ಹೋಗಿದ್ದಾರೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರಗಳನ್ನೇ ರೂಪಿಸ್ತಿದೆ.

Sat Feb 4 , 2023
ಕರ್ನಾಟಕ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರಗಳನ್ನೇ ರೂಪಿಸ್ತಿದೆ. ಈ ಬಾರಿ ಮತ್ತೆ ಅಧಿಕಾರಕ್ಕೇರುವ ಪಣ ತೊಟ್ಟಿರೋ ಕಮಲ ಪಾಳಯಕ್ಕೆ ಮೋದಿ-ಅಮಿತ್ ಶಾ ಜೋಡಿಯೇ ಗೆಲುವಿನ ಸಾರಥಿಗಳು. ಹೀಗಾಗಿ ಇಬ್ಬರೂ ನಾಯಕರು ರಾಜ್ಯಕ್ಕೆ ಪದೇ, ಪದೆ ಭೇಟಿ ನೀಡ್ತಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಹಲವು ಸುತ್ತಿನ ಱಲಿ ನಡೆಸಿರೋ ನಾಯಕರು, ಇದೀಗ ಈ ತಿಂಗಳಲ್ಲೂ ಬ್ಯಾಕ್ ಟು ಬ್ಯಾಕ್ ಪ್ರವಾಸಕ್ಕೆ ಪ್ಲಾನ್ ರೆಡಿಯಾಗಿದೆ. 2023ರ ಮತ ಯುದ್ಧಕ್ಕೆ ಕೇಸರಿ ಪಡೆ ಈಗಾಗಲೇ […]

Advertisement

Wordpress Social Share Plugin powered by Ultimatelysocial