ಬಿಜೆಪಿ ಬೊಗಳೆ ಸರ್ಕಾರ ಎಂದು ಹೇಳಿದ ಮುಖ್ಯಮಂತ್ರಿ ಚಂದ್ರು.

2023ರ ರಾಜ್ಯದ ವಿಧಾನ‌ ಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಆಮ್ ಆದ್ಮಿ‌‌ ಪಕ್ಷ ತಯಾರಿ ನಡೆಸಿದೆ. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆಗೆ ರಾಷ್ಟ್ರೀಯ ನಾಯಕರು ಆಗಮಿಸಲಿದ್ದು ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಕಣಕ್ಕಿಳಿಸುವದಾಗಿ ಕಲಬುರಗಿಯಲ್ಲಿ ಆಮ್‌ಆದ್ಮಿ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದ್ದಾರೆ.ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡ್ತಿದೆ. ಸ್ವತಂತ್ರ ಬುದ್ದಿ ಕಳೆದುಕೊಂಡ ಮುಖ್ಯಮಂತ್ರಿ ನೇತೃತ್ವದ ಸರ್ಕಾರ ನಡೆಯುವದು ದುಸ್ಥರವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಮೂರು ಪಕ್ಷಗಳು ಆಮ್ ಆದ್ಮಿ ಪಕ್ಷದ ಜನಪರ ಯೋಜನೆಗಳನ್ನ ಕಾಫಿ ಮಾಡ್ತಿದ್ದಾರೆ. ಊಚಿತ ವಿದ್ಯುತ್, ಗೃಹಣಿಯರಿಗೆ ಮಾಸಿಕ 2 ಸಾವಿರ, ಮಾದರಿ ಆಸ್ಪತ್ರೆ ನಿರ್ಮಾಣ ಯೋಜನೆಗಳನ್ನು ಕಾಫಿ ಮಾಡಿ ಜನರಿಗೆ ಆಶ್ವಾಸನೆ ನೀಡ್ತಿದ್ದಾರೆ. ಜೆಡಿಎಸ್ ಜಗಳಗಂಟ ಪಕ್ಷ, ಕಾಂಗ್ರೆಸ್ ಕಲುಶಿತ ಪಕ್ಷ, ಬಿಜೆಪಿ ಬೊಗಳೆ ಸರ್ಕಾರ ಆಗಿವೆ ಎಂದು ಮೂರು ಪಕ್ಷಗಳ ವಿರುದ್ಧ ಹರಿಹಾಯ್ದರು.ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ ಆಢಳಿತ ನೀಡುವ ನಿಲುವು ಹೊಂದಿದ್ದು, ರಾಜ್ಯದ 224 ಕ್ಷೇತ್ರದಲ್ಲಿ ಪಕ್ಷ ಸಂಘಟನೆಗಾಗಿ ದೆಹಲಿ ಸಿಎಂ ಕ್ರೇಜಿವಾಲ, ಪಂಜಾಬ್ ಸಿಎಂ ಭಗವಂತ ಮಾನ್, ಪ್ರಮುಖ ಸಚಿವರು ಶಾಸಕರುಗಳು ರಾಜ್ಯಕ್ಕೆ ಆಗಮಿಸಲಿದ್ಧಾರೆ. ರಾಜ್ಯದಲ್ಲಿ ಯಾವುದೇ ಪಕ್ಷ ಗೆದ್ದರು ನಾವು ಎರಡನೇ ಸ್ಥಾನದಲ್ಲಾದರೂ ಇರುತ್ತೆವೆಂದು ಮುಖ್ಯಮಂತ್ರಿ ಚಂದ್ರು ಹೇಳಿದರು.ಬೊಳಗೆ ಬಿಟ್ಟಕೊಂಡು, ಸುಳ್ಳು ಹೇಳಿಕೊಂಡು ಓಡಾಡುವ ಪಕ್ಷ‌ ನಮ್ಮದಲ್ಲ, ಕೇಂದ್ರಾಢಳಿತದಿಂದ ಇತಿಮಿತಿ ಇದ್ದರೂ ಇರುವ ಅಧಿಕಾರದಲ್ಲಿಯೇ ದೇಹಲಿಯಲ್ಲಿ ಆಮ್ ಆದ್ಮಿ ಪಕ್ಷ ಜನಪರ ಆಢಳಿತ ನೀಡುತ್ತಿದೆ. ಪ್ರಣಾಳಿಕೆಯ ಎಲ್ಲಾ ಭರವಸೆಗಳನ್ನ ಕಾರ್ಯರೂಪಕ್ಕೆ ತಂದಿದ್ದೇವೆ. ಕ್ರೇಜಿವಾಲ್ ಅವರ ಜನರಪರ ಯೋಜನೆಗಳಿಂದಲೇ ಜನಮೆಚ್ಚಿ ಪಂಜಾಬ್ ‌ನಲ್ಲಿ ಆಮ್ ಆದ್ಮಿಯನ್ನು ಜನರು‌ ಅಧಿಕಾರಕ್ಕೆ ತಂದಿದ್ದಾರೆ. ಪ್ರಧಾನಿ ಮೋದಿ ಅಮೀತ್ ಶಾ‌ ಅವರ ತವರು ಗುಜರಾತನಲ್ಲಿಯೂ ಆಮ್ ಆದ್ಮಿ ಗೆಲುವ ಭರವಸೆ ಇತ್ತು. ಆದರೆ ತೋಳಬಲ, ಹಣಬಲ, ಅಧಿಕಾರ ಬಲದಿಂದ ಸೋಲಿಸಲಾಗಿದೆ. ಈ‌ ಎಲ್ಲದರ ನಡುವೆಯೂ ಕಾಂಗ್ರೆಸ್ ಮಾಡಲು ಆಗದ ಸಾಧನೆಯನ್ನು ಆಮ್ ಆದ್ಮಿ ಪಕ್ಷ ಗುಜರಾತನಲ್ಲಿ‌ ಉತ್ತಮ ಸಾಧನೆ ಮಾಡಿದೆ. ದೇಶದಲ್ಲಿ ಬಿಜೆಪಿಗೆ ಸೆಡ್ಡು‌ ಹೊಡೆಯುವ ಶಕ್ತಿ‌ ಹೊಂದಿರುವದು ಏಕೈಕ್ ಆಮ್ ಆದ್ಮಿ ಪಕ್ಷ ಮಾತ್ರ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜಾನಪದ ವಾಹಿನಿ ಸೊಬಗಿನೊಂದಿಗೆ ಹಂಪಿ ಉತ್ಸವದ ಸಮಾರೋಪ.

Mon Jan 30 , 2023
ಮೂರು ದಿನಗಳ‌ ಹಂಪಿ ಉತ್ಸವದ ಅಂತಿಮ ದಿನವಾದ ಇಂದು ಸಂಜೆ ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ವಿರೂಪಾಕ್ಷ ದೇವಾಲಯದವರೆಗೆ ಸಾಗಿ ಬಂದ 60 ಕ್ಕೂ ಹೆಚ್ಚು ಜನೊದ ಕಲಾ ತಂಡಗಳ ಜನಪದ ವಾಹಿನಿ ಆಕರ್ಷಕ ಮೆರವಣಿಗೆಯೊಂದಿಗೆ ಹಂಪಿ ಉತ್ಸವದ ಸಮಾರೋಪಕ್ಕೆ ನಾಂದಿಯಾಯ್ತು.ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಾಯಿ ಭುವನೇಶ್ವರ ದೇವಿಗೆ ಪೂಜೆ ನೆರವೇರಿಸುವುದರ ಮೂಲಕ ಜಾನಪದ ವಾಹಿನಿ ಮೆರವಣಿಗೆಗೆ ಚಾಲನೆ ನೀಡಿದರು. ಜಾನಪದ ವಾಹಿನಿ ಕಲಾ ತಂಡಗಳ ಮೆರವಣಿಗೆ ನಾಡಿನ […]

Advertisement

Wordpress Social Share Plugin powered by Ultimatelysocial