ಬಿಜೆಪಿ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದಿಶಾ ಪಟ್ಟಣದಲ್ಲಿ ನಡೆದಿದೆ.

ಧ್ಯ ಪ್ರದೇಶ (ವಿದಿಶಾ), ಜ.27- ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸ್ಥಳೀಯ ಬಿಜೆಪಿ ನಾಯಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿದಿಶಾ ಪಟ್ಟಣದಲ್ಲಿ ನಡೆದಿದೆ. ಕುಟುಂಬ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದರಿಂದ ಮಾತ್ರೆ ಸೇವಿಸಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿದಿಶಾ ನಗರದ ಮಂಡಲ ಉಪಾಧ್ಯಕ್ಷ ಮತ್ತು ಬಿಜೆಪಿ ಕಾಪೆರ್ರೇಟರ್ ಸಂಜೀವ್ ಮಿಶ್ರಾ (45) ಎಂಬುವವರು ತಮ್ಮ ಮಕ್ಕಳ ಅನಾರೋಗ್ಯದ ಬಗ್ಗೆ ಅಸಮಾಧಾನಗೊಂಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಕೂಡ ಬರೆದುಕೊಂಡಿದ್ದರು.

ತೀವ್ರವಾಗಿ ಬೇಸತ್ತಿದ್ದ ಅವರು ಎಲ್ಲರಿಗೂ ಸಲಾಸ್ ಮಾತ್ರೆ ನೀಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇವರು ತನ್ನ ಶತ್ರುವಿನ ಮಕ್ಕಳಿಗೂ ಗುಣಪಡಿಸಲಾಗದ ಮಸ್ಕ್ಯುಲರ್ ಡಿಸ್ಟ್ರೋಪಿ ಸಮಸ್ಯೆಯನ್ನು ನೀಡಬಾರದು ಎಂದು ಅವರು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

ಈ ಪೋಸ್ಟ್ ನೋಡಿದ್ದ ಅವರ ಪರಿಚಯಸ್ಥರು ಅವರ ಮನೆಗೆ ತೆರಳಿದ್ದರು. ಅಷ್ಟೊತ್ತಿಗಾಗಲೇ ಪತ್ನಿ ನೀಲಂ ಮತ್ತು ಇಬ್ಬರು ಮಕ್ಕಳೊಂದಿಗೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಾರಾಷ್ಟ್ರದ ಭಿವಾಂಡಿಯಲ್ಲಿ ಕಟ್ಟಡದ ಒಂದು ಭಾಗ ಕುಸಿದು, ಓರ್ವ ಸಾವು.

Fri Jan 27 , 2023
ನವದೆಹಲಿ: ಭಿವಾಂಡಿಯಲ್ಲಿ ಶುಕ್ರವಾರ ಕಟ್ಟಡದ ಒಂದು ಭಾಗ ಕುಸಿದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಒಬ್ಬನನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ಎಎನ್‌ಐಗೆ ತಿಳಿಸಿದೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada   Please follow and like us:

Advertisement

Wordpress Social Share Plugin powered by Ultimatelysocial