ಒಂದಲ್ಲ ಎರಡಲ್ಲ ಬರೋಬ್ಬರಿ 11 ಕನ್ನಡ ಚಿತ್ರಗಳು ಈ ವಾರ ರಿಲೀಸ್.

 

ತ್ತೊಂದು ಸಿನಿವಾರ ಶುಕ್ರವಾರ ಬರ್ತಿದೆ. ಸಿನಿರಸಿಕರಿಗೆ ಪ್ರಿಯವಾದ ವಾರ ಶುಕ್ರವಾರ. ಹೊಸ ಸಿನಿಮಾಗಳು ಶುಕ್ರವಾರ ಪ್ರದರ್ಶನ ಥಿಯೇಟರ್‌ಗೆ ಬರ್ತಾವೆ. ಈ ವಾರ ಕನ್ನಡದಲ್ಲಿ ಒಂದಲ್ಲ ಎರಡಲ್ಲ, ಬರೋಬ್ಬರಿ 11 ಸಿನಿಮಾಗಳು ಬಿಡುಗಡೆಯಾಗುತ್ತಿದೆ. ಹೊಸಬರ ವಿಭಿನ್ನ ಪ್ರಯತ್ನಗಳಿಗೆ ಈ ವಾರ ಬೆಳ್ಳಿ ಪರೆದ ವೇದಿಕೆಯಾಗುತ್ತಿದೆ.ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳಲ್ಲಿ ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ‘ಹೊಂದಿಸಿ ಬರೆಯಿರಿ’ ಕೊಂಚ ಗಮನ ಸೆಳೆದಿದೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಇತ್ತೀಚಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ ಶುಭ ಕೋರಿದ್ದರು. ವಿಜಯ್ ಜಗದಾಲ್, ಕೃಷಿ ತಾಪಂಡ ನಟನೆಯ ‘ರೂಪಾಯಿ’, ನೈಜ ಘಟನೆಗಳನ್ನಾಧಿಸಿದ ‘ಪಾಲಾರ್’, ಮೆಡಿಕಲ್ ರೀಸರ್ಚ್‌ಗೆ ಸಂಬಂಧಿಸಿದ ‘ಡಿಸೆಂಬರ್ 24’, ಬದುಕಿನ ಏಳು ಬೀಳಿನ ಕಥೆ ‘ರಂಗಿನ ರಾಟೆ’ ಇನ್ನು ಹೊಸಬರ ‘ಅಂಬಾಸಿಡರ್’, ‘ಲಾಂಗ್ ಡ್ರೈವ್’ ಸಿನಿಮಾಗಳು ಕೂಡ ಈ ವಾರ ಕನ್ನಡ ಪ್ರೇಕ್ಷಕರನ್ನು ರಂಜಿಸಲು ಬರ್ತಿವೆ.ಶಫಿ, ಪವನ್ ಶೆಟ್ಟಿ, ಅನಿತಾ ಭಟ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ‘ಬೆಂಗಳೂರು 69’ ಸಿನಿಮಾ ಕೂಡ ಈ ವಾರ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದಲ್ಲಿ ನಟಿ ಅನಿತಾ ಭಟ್ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಇದರ ಜತೆಗೆ ‘ಉತ್ತಮರು’ ಹಾಗೂ ‘ಒಂದಾನೊಂದು ಕಾಲದಲ್ಲಿ’ ಎನ್ನುವ ಮತ್ತೆರಡು ಸಿನಿಮಾಗಳು ಕೂಡ ತೆರೆಗಪ್ಪಳಿಸುತ್ತಿದೆ.10 ಹೊಸ ಸಿನಿಮಾಗಳ ಜೊತೆಗೆ ಲೂಸಿಯಾ ಪವನ್ ಕುಮಾರ್ ನಿರ್ದೇಶನದ ಚೊಚ್ಚಲ ಸಿನಿಮಾ ‘ಲೈಫು ಇಷ್ಟೇನೆ’ ಕೂಡ ರೀ ರಿಲೀಸ್ ಆಗ್ತಿದೆ. ದಿಗಂತ್, ಸಂಯುಕ್ತಾ ಹೊರನಾಡ್, ಸಿಂಧು ಲೋಕನಾಥ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಫ್ರಾಂಕ್ ಫ್ರಜೆಟ್ಟಾ ಮಹಾನ್ ಫ್ಯಾಂಟಸಿ ಮತ್ತು ವೈಜ್ಞಾನಿಕ ಕಾಲ್ಪನಿಕ ಕಲಾವಿದ.

Thu Feb 9 , 2023
ಫ್ರಾಂಕ್ ಫ್ರಜೆಟ್ಟಾ ಮಹಾನ್ ಫ್ಯಾಂಟಸಿ ಮತ್ತು ವೈಜ್ಞಾನಿಕ ಕಾಲ್ಪನಿಕ ಕಲಾವಿದ. ಅವರು ಕಾಮಿಕ್ ಪುಸ್ತಕಗಳು, ಪೇಪರ್‌ಬ್ಯಾಕ್ ಬುಕ್ ಕವರ್‌ಗಳು, ಪೇಂಟಿಂಗ್‌ಗಳು, ಪೋಸ್ಟರ್‌ಗಳು, ಎಲ್ ಪಿ ರೆಕಾರ್ಡ್ ಆಲ್ಬಮ್ ಕವರ್‌ಗಳು ಮತ್ತು ಇತರ ಮಾಧ್ಯಮಗಳಿಗೆ ಹೆಸರುವಾಸಿಯಾಗಿದ್ದವರು. ಅವರನ್ನು ಸಾಮಾನ್ಯವಾಗಿ “ಫ್ಯಾಂಟಸಿ ಕಲೆಯ ಗಾಡ್‌ಫಾದರ್” ಎಂದು ಪರಿಗಣಿಸಲಾಗಿದೆ. ಅವರು 20 ನೇ ಶತಮಾನದ ಅತ್ಯಂತ ಪ್ರಸಿದ್ಧ ಸಚಿತ್ರಕಾರರಲ್ಲಿ ಒಬ್ಬರು.ಫ್ರಾಂಕ್ ಫ್ರಜೆಟ್ಟಾ 1928 ಫೆಬ್ರವರಿ 9 ರಂದು ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬಲ್ಲಿ ಜನಿಸಿದರು. ಮೂರು […]

Advertisement

Wordpress Social Share Plugin powered by Ultimatelysocial