ಬೆಂಗಳೂರು:ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು,ಫೆ.4- ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು ಕೇಂದ್ರ ಆರೋಗ್ಯ ಸಚಿವಾಲಯ 8 ವಾರಗಳ ಕಾಲ ಮುಂದೂಡಿದೆ.2022ರ ನೀಟ್ ಪರೀಕ್ಷೆ(ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ-ಸ್ನಾತಕೋತ್ತರ ಪದವಿ)ಯ ದಿನಾಂಕವನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ.ಇಂದು ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ನಡೆಯಲಿದೆ. ಕಡ್ಡಾಯ ಇಂಟರ್ನ್‍ಶಿಪ್ ಪೂರೈಸದ ಕಾರಣ ಪರೀಕ್ಷೆ ಮುಂದೂಡುವಂತೆ 6 ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.ಕೋವಿಡ್ ಕರ್ತವ್ಯದಿಂದಾಗಿ ಇಂಟರ್ನ್‍ಶಿಪ್ ಪೂರೈಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದರು. ಈ ಸಂಬಂಧದ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿದೆ. ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಚ್‍ನಲ್ಲಿ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು 6ರಿಂದ 8 ವಾರಗಳ ಕಾಲ ಮುಂದೂಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು, ಅಲ್ಲಿಗೆ ಅನುಕೂಲವಾಗಲೆಂದು ನದಿ ಜೋಡಣೆ ಯೋಜನೆ ಘೋಷಣೆ: ಸಿದ್ದರಾಮಯ್ಯ

Fri Feb 4 , 2022
  ಬೆಂಗಳೂರು: ನದಿ ಜೋಡಣೆ ಬಗ್ಗೆ ಪೂರ್ವಭಾವಿಯಾಗಿ ಸಂಬಂಧಿಸಿದ ರಾಜ್ಯಗಳೊಂದಿಗೆ ಚರ್ಚಿಸದೇ ಬಜೆಟ್ ನಲ್ಲಿ ಪ್ರಸ್ತಾಪಿಸಿರುವುದು ಸರಿಯಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನದಿಜೋಡಣೆ ಸಾಧಕ – ಬಾಧಕಗಳ ಬಗ್ಗೆ ವಿವರವಾದ ಚರ್ಚೆ ನಡೆಯಬೇಕು. ಆಯಾ ರಾಜ್ಯಗಳಿಗೆ ದೊರೆಯುವ ನೀರಿನ ಪಾಲಿನ ಬಗ್ಗೆ ಸ್ಪಷ್ಟತೆ ಇರಬೇಕು. ಮೇಲಾಗಿ ರಾಜ್ಯಗಳ ಪೂರ್ವಭಾವಿ ಒಪ್ಪಿಗೆ ಪಡೆಯಬೇಕು.‌ಇದ್ಯಾವುದು ಮಾಡದಿರುವುದು ಒಕ್ಕೂಟ ವ್ಯವಸ್ಥೆಯನ್ನು ಅಗೌರವಿಸಿದಂತೆ ಎಂದು‌ ಸಿದ್ದರಾಮಯ್ಯ ಪ್ರತಿಪಾದಿಸಿದರು.ಅರ್ಥಸಚಿವೆ ನಿರ್ಮಲಾ ಸೀತಾರಾಮನ್ […]

Advertisement

Wordpress Social Share Plugin powered by Ultimatelysocial