ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಡಿಕೆ. ಶಿವಕುಮಾರ್ ಫ್ಲಾನ್…

ಬೆಂಗಳೂರು ಅಂದಕ್ಷಣ ನೆನಪಿಗೆ ಬರುವ ದೊಡ್ಡ ಸಮಸ್ಯೆ ಅಂದರೆ ಅದು ಟ್ರಾಫಿಕ್‌ ಸಮಸ್ಯೆ..ಟ್ರಾಫಿಕ್‌ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಸರ್ಕಾರ ಹೊಸ ಮಾರ್ಗವನ್ನು ಹುಡುಕುತ್ತಲೆ ಇದೆ.

ಈಗ ಈ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್‌ ಟ್ರಾಫೀಕ್‌ ಸಮಸ್ಯೆಯ ಪರಿಹಾರಕ್ಕಾಗಿ ಬೆಂಗಳೂರಿನ ಮೇಜರ್ ಟ್ರಾಫೀಕ್‌ ಪಾಯಿಂಟ್‌ಗಳನ್ನುಎಲ್ಲೆಲ್ಲಿವೆ ಅಂತ ಗರುತಿಸಿ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದು ಕೊಂಡಿದ್ದಾರೆ.

ಅಂದಹಾಗೆ ಬೆಂಗಳೂರಿಗೆ ಭೂತದಂತೆ ಕಾಡುತ್ತಿದ್ದ ಟ್ರಾಫೀಕ್‌ ಸಮಸ್ಯೆಗೆ  ಪರಿಹಾರ ಕಂಡೂಕೊಳ್ಳುವಲ್ಲಿ ಸರ್ಕಾರ ಹೆಜ್ಜೆ ಇಟ್ಟಂತಿದೆ. ಇನ್ನೂಈ ಕುರಿತು ಮಾತನಾಡಿದ ಡಿಕೆಶಿ ನಾನು ಟ್ರಾಫಿಕ್ ಸಮಸ್ಯೆ ಬಗ್ಗೆ ಹೆಚ್ಚು ಗಮನ‌ ಹರಿಸಿದ್ದೇನೆ. ಈ ಬಗ್ಗೆ ಸಾರ್ವಜನಿಕರಿಂದಲೂ ಮಾಹಿತಿಯನ್ನು ಪಡೆಯುತ್ತೇನೆ. ಎರಡು ಹಂತದಲ್ಲಿ ಮೀಟಿಂಗ್ ಕರೆಯುತ್ತೇನೆ. ಒಂದು ಸಾರ್ವಜನಿಕರ ಸಭೆ , ಇನ್ನೂಂದು ಬೆಂಗಳೂರಿಗೆ ಕೊಡುಗೆ ಕೊಟ್ಟ ಬುದ್ದಿವಂತ ತಜ್ಞರ ಜೊತೆಯು ಸಭೆ ನಡೆಸುತ್ತೇನೆ ಅಂತಾ ಹೇಳಿದ್ರು.

ಇನ್ನೂ ನಿತ್ಯ ಟ್ರಾಫಿಕ್ ಜಾಮ್‌ಗೆ ಕಾರಣ ಆಗಿರುವ ಹೆಬ್ಬಾಳ ಮೇಲ್ಸೇತುವೆ ಬಳಿ ಮಂಗಳವಾರ ಭೇಟಿ ನೀಡಿದ್ದ ಡಿಸಿಎಂ ಡಿಕೆ. ಶಿವಕುಮಾರ್ ಅವರಿಗೆ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗ್ಗೆ ವಿವರಿಸಿದರು. ಡಿಸಿಎಂ ಡಿಕೆ.ಶಿವಕುಮಾರ್ ಅವರು ಎಚ್.ಆರ್. ಬಿ.ಆರ್ ನ(HRBR) ಟೆಲಿಕಾಂ ಬಡಾವಣೆ ಬಳಿ ರಾಜಕಾಲುವೆ ನಿರ್ಮಾಣ ಕಾಮಗಾರಿ ಪರಿಶೀಲನೆ ನಡೆಸಿದರು .ಹಾಗೂ ಹೆಬ್ಬಾಳ ಸೇತುವೆ ಬಳಿ ಪೌರಕಾರ್ಮಿಕರ ಸಮಸ್ಯೆಯನ್ನು ಕೂಡ ಆಲಿಸಿದರು.

 

ನಿತ್ಯ ವಾಹನ ಸಂಚಾರ ದಟ್ಟಣೆಗೆ ಕಾರಣ ಆಗಿರುವ ಕೆ.ಆರ್ ಪುರಂ ಮೇಲ್ಸೇತುವೆ ಬಳಿ ಮಂಗಳವಾರ ಭೇಟಿ ನೀಡಿದ್ದ ಡಿಸಿಎಂ ಡಿಕೆ. ಶಿವಕುಮಾರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಂದ ವಿವರಣೆ ಪಡೆದರು. ಸ್ಥಳೀಯ ಶಾಸಕ ಭೈರತಿ ಬಸವರಾಜ್, ಬಿ.ಡಿ.ಎ(BDA) ಅಧ್ಯಕ್ಷ ರಾಕೇಶ್ ಸಿಂಗ್, ಕಮಿಷನರ್ ಕುಮಾರ ನಾಯಕ್, ಬಿ.ಬಿ.ಎಂ.ಪಿ(BBMP) ಕಮಿಷನರ್ ತುಷಾರ್ ಗಿರಿನಾಥ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಭಾಗಿಯಾಗಿದ್ದರು.

ಡಿಸಿಎಂ ಡಿಕೆ. ಶಿವಕುಮಾರ್ ಅವರು ಜಲಸಂಪನ್ಮೂಲ ಇಲಾಖೆಯ ನಾಲ್ಕು ನಿಗಮಗಳ ಉನ್ನತ ಮಟ್ಟದ ಅಧಿಕಾರಿಗಳ ಸಭೆಯನ್ನು ನೀರಾವರಿ ನಿಗಮದ ಸಭಾಂಗಣದಲ್ಲಿ ಮಂಗಳವಾರ ನಡೆಸಿದರು. ಜಲ ಸಂಪನ್ಮೂಲ ಇಲಾಖೆಯ ಅವರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್,ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿ ಕುಲಕರ್ಣಿ,ಕರ್ನಾಟಕ ನೀರಾವರಿ ನಿಗಮದ ಎಂಡಿ ಮಲ್ಲಿಕಾರ್ಜುನ್ ಗುಂಗೆ,ಕಾವೇರಿ ನೀರಾವರಿ ನಿಗಮದ ಎಂಡಿ ಶಂಕರೇಗೌಡ, ಕೃಷ್ಣ ಭಾಗ್ಯ ಜಲ ನಿಗಮದ ಎಂಡಿ ಶಿವಕುಮಾರ, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ. ರಾಜೇಂದ್ರ ಪ್ರಸಾದ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:
Please follow and like us:
Please follow and like us:

Leave a Reply

Your email address will not be published. Required fields are marked *

Next Post

ಸಂಬಂಧಕ್ಕೆ ಬೆಲೆಯೆ ಇಲ್ಲ ಹೆಂಡ್ತಿ ಮಾತು ಕೇಳಿ ಅಣ್ಣನನ್ನೇ ಕೊಂದ ತಮ್ಮ!

Wed Jun 14 , 2023
ಅಣ್ಣ ತಂದೆಗೆ ಸಮಾನ ಅಂತಾ ಹೇಳ್ತಾರೆ .ಆದರೆ ಇಲ್ಲೂಬ್ಬ ತಮ್ಮ ಸ್ವಂತ ಅಣ್ಣನನ್ನೆಕ್ರೂರವಾಗಿ ಚಾಕು ಎಸೆದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಪುಲಕೇಶಿನಗರದಲ್ಲಿ ನಡೆದಿದೆ.ವಿಜಯ್‌ ಎನ್ನುವ ವ್ಯಕ್ತಿಯ ಅಣ್ಣನಾದ ಕಾರ್ತಿಕ್‌ ಕುಡಿದು ಬಂದು ಗಲಾಟೆ ಮಾಡಿದ್ದ.ಇನ್ನೂ ಮನೆಯಲ್ಲಿದ್ದ ವಿಜಯ್‌ ಪತ್ನಿಅಣ್ಣ ಕುಡಿದು ಬಂದಿರುವ ಘಟನೆ ತಮ್ಮನಿಗೆ ಹೇಳುತ್ತಾಳೆ . ಹೆಂಡತಿ ಮಾತು ಹೇಳಿದ ತಕ್ಷಣ ಚಾಕು ಸಮೇತ ಬಂದ ವಿಜಯ್‌  ಅಣ್ಣ ಕಾರ್ತಿಕ್‌ಗೆ ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕ […]

Advertisement

Wordpress Social Share Plugin powered by Ultimatelysocial