ಫ್ರಾಂಕ್ ಫ್ರಜೆಟ್ಟಾ ಮಹಾನ್ ಫ್ಯಾಂಟಸಿ ಮತ್ತು ವೈಜ್ಞಾನಿಕ ಕಾಲ್ಪನಿಕ ಕಲಾವಿದ.

ಫ್ರಾಂಕ್ ಫ್ರಜೆಟ್ಟಾ ಮಹಾನ್ ಫ್ಯಾಂಟಸಿ ಮತ್ತು ವೈಜ್ಞಾನಿಕ ಕಾಲ್ಪನಿಕ ಕಲಾವಿದ. ಅವರು ಕಾಮಿಕ್ ಪುಸ್ತಕಗಳು, ಪೇಪರ್‌ಬ್ಯಾಕ್ ಬುಕ್ ಕವರ್‌ಗಳು, ಪೇಂಟಿಂಗ್‌ಗಳು, ಪೋಸ್ಟರ್‌ಗಳು, ಎಲ್ ಪಿ ರೆಕಾರ್ಡ್ ಆಲ್ಬಮ್ ಕವರ್‌ಗಳು ಮತ್ತು ಇತರ ಮಾಧ್ಯಮಗಳಿಗೆ ಹೆಸರುವಾಸಿಯಾಗಿದ್ದವರು. ಅವರನ್ನು ಸಾಮಾನ್ಯವಾಗಿ “ಫ್ಯಾಂಟಸಿ ಕಲೆಯ ಗಾಡ್‌ಫಾದರ್” ಎಂದು ಪರಿಗಣಿಸಲಾಗಿದೆ. ಅವರು 20 ನೇ ಶತಮಾನದ ಅತ್ಯಂತ ಪ್ರಸಿದ್ಧ ಸಚಿತ್ರಕಾರರಲ್ಲಿ ಒಬ್ಬರು.ಫ್ರಾಂಕ್ ಫ್ರಜೆಟ್ಟಾ 1928 ಫೆಬ್ರವರಿ 9 ರಂದು ನ್ಯೂಯಾರ್ಕಿನ ಬ್ರೂಕ್ಲಿನ್ ಎಂಬಲ್ಲಿ ಜನಿಸಿದರು. ಮೂರು ಸಹೋದರಿಯರನ್ನು ಹೊಂದಿದ್ದ ಅವರು ತಮ್ಮ ಕುಟುಂಬದಲ್ಲಿ ಏಕೈಕ ಹುಡುಗರಾಗಿದ್ದರು. ಅವರು ತಮ್ಮ ಅಜ್ಜಿಯೊಂದಿಗೆ ಹೆಚ್ಚು ಸಮಯ ಕಳೆದರು. ಆಕೆ ಈತ ಎರಡು ವರ್ಷದವರಿದ್ದಾಗಲೇ ಕಲೆಯಲ್ಲಿ ಪ್ರೋತ್ಸಾಹಿಸಲು ಪ್ರಾರಂಭಿಸಿದರು. ಅವರಿಗೆ ಶಾಲೆಯಲ್ಲಿ ಕಲಿಯುವುದು ಕಷ್ಟವಾಗಿತ್ತು. ಉಪಾಧ್ಯಾಯರುಗಳಿಗಂತೂ ಈತ ಅರ್ಥವಾಗದ ಬಾಲಕನಾಗಿದ್ದರು. ಹೀಗಾಗಿ ಕಲಾ ಶಾಲೆಗೆ ಹೋದರು. ಅಲ್ಲಿಯೂ ಉಪಧ್ಯಾಯರ ಪರಿಮಿತಿಗಳ ಹಿಡಿತ ಈತನಿಗೆ ಒಗ್ಗಲಿಲ್ಲ.
ಎಂಟನೇ ವಯಸ್ಸಿನಲ್ಲಿ, ಫ್ರಜೆಟ್ಟಾ ಬ್ರೂಕ್ಲಿನ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌ಗೆ ಸೇರಿದರು, ಇದು ಬೋಧಕ ಮೈಕೆಲ್ ಫಾಲಂಗಾ ನಡೆಸುತ್ತಿದ್ದ ಒಂದು ಸಣ್ಣ ಕಲಾ ಶಾಲೆ. ಅವರು ಮಕ್ಕಳನ್ನು ತಮ್ಮಷ್ಟಕ್ಕೆ ಕಲಿಯಲು ಬಿಟ್ಟುಬಿಟ್ಟಿದ್ದರು. ಅಲ್ಲಿನ ಸ್ನೇಹಿತರಿಂದ ಹೆಚ್ಚಿನದನ್ನು ಕಲಿತರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಂಡಿತ್ ಜಿ. ಆರ್. ನಿಂಬರಗಿ ನಾಡಿನ ಮಹಾನ್ ಸಂಗೀತಗಾರ.

Thu Feb 9 , 2023
  ಗಜಾನನ ರಾಮಚಂದ್ರ ನಿಂಬರಗಿ ಅವರು ಬಾಗಲಕೋಟೆ ತಾಲ್ಲೂಕಿನ ಜಮಖಂಡಿಯಲ್ಲಿ 1919ರ ಫೆಬ್ರವರಿ 9 ರಂದು ಜನಿಸಿದರು. ಅವರ ಅಜ್ಜ ಪಂಡಿತ ವಿಷ್ಣುಪಂಥ ಜಮಖಂಡಿ ಆಸ್ಥಾನದಲ್ಲಿ ರುದ್ರವೀಣೆ ಪಂಡಿತರಾಗಿದ್ದರು. ಅವರ ಗಾಯನದಿಂದ ಎಳವೆಯಲ್ಲೇ ಪ್ರೇರೇಪಿತರಾಗಿದ್ದು ಮುಂದೆ ತಮ್ಮ ಅಣ್ಣನವರಾದ ಖ್ಯಾತ ಗಾಯಕ ಡಿ.ಆರ್. ನಿಂಬರಗಿ ಅವರಲ್ಲೇ ಪ್ರಾಥಮಿಕ ಸಂಗೀತ ಶಿಕ್ಷಣ ಕಲಿತರು. ಅನಂತರ ಭಾರತದ ಹೆಸರಾಂತ ವಯೋಲಿನ್ ವಾದಕ ಹಾಗೂ ಗಾಯಕರಾದ ಮುಂಬಯಿಯಲ್ಲಿದ್ದ ಗಜಾನನ ಬುವ ಜೋಷಿಯವರಲ್ಲಿ ಹಲವಾರು ವರ್ಷ […]

Advertisement

Wordpress Social Share Plugin powered by Ultimatelysocial