ಪಂಡಿತ್ ಜಿ. ಆರ್. ನಿಂಬರಗಿ ನಾಡಿನ ಮಹಾನ್ ಸಂಗೀತಗಾರ.

 

ಗಜಾನನ ರಾಮಚಂದ್ರ ನಿಂಬರಗಿ ಅವರು ಬಾಗಲಕೋಟೆ ತಾಲ್ಲೂಕಿನ ಜಮಖಂಡಿಯಲ್ಲಿ 1919ರ ಫೆಬ್ರವರಿ 9 ರಂದು ಜನಿಸಿದರು. ಅವರ ಅಜ್ಜ ಪಂಡಿತ ವಿಷ್ಣುಪಂಥ ಜಮಖಂಡಿ ಆಸ್ಥಾನದಲ್ಲಿ ರುದ್ರವೀಣೆ ಪಂಡಿತರಾಗಿದ್ದರು. ಅವರ ಗಾಯನದಿಂದ ಎಳವೆಯಲ್ಲೇ ಪ್ರೇರೇಪಿತರಾಗಿದ್ದು ಮುಂದೆ ತಮ್ಮ ಅಣ್ಣನವರಾದ ಖ್ಯಾತ ಗಾಯಕ ಡಿ.ಆರ್. ನಿಂಬರಗಿ ಅವರಲ್ಲೇ ಪ್ರಾಥಮಿಕ ಸಂಗೀತ ಶಿಕ್ಷಣ ಕಲಿತರು. ಅನಂತರ ಭಾರತದ ಹೆಸರಾಂತ ವಯೋಲಿನ್ ವಾದಕ ಹಾಗೂ ಗಾಯಕರಾದ ಮುಂಬಯಿಯಲ್ಲಿದ್ದ ಗಜಾನನ ಬುವ ಜೋಷಿಯವರಲ್ಲಿ ಹಲವಾರು ವರ್ಷ ಶಿಷ್ಯವೃತ್ತಿ ನಡೆಸಿದ್ದಲ್ಲದೆ ಪಂಡಿತ ಅನಂತ ಮನೋಹರ ಜೋಶಿ, ವಿಲಾಯತ್ ಖಾನ್, ಅಜಮಲ್ ಹುಸೇನ್, ಅಲ್ಲಾದಿಯಾ ಖಾನ್, ನಿಸ್ಸಾರ್ ಹುಸೇನ್, ವಿ.ಎ.ಕಾಗಲಕರ್ ಹಾಗೂ ಹನುಮಂತ ರಾವ್ ವಾಳ್ವೇಕರ್ ಅವರಲ್ಲಿ ಹೆಚ್ಚಿನ ವ್ಯಾಸಂಗ ನಡೆಸಿ ಸಂಗೀತ ಜ್ಞಾನ ಕ್ಷೇತ್ರವನ್ನು ವಿಸ್ತರಿಸಿಕೊಂಡರು.ನಿಂಬರಗಿ ಅವರು ಮುಖ್ಯವಾಗಿ ಗ್ವಾಲಿಯರ್ ಅಲ್ಲದೆ ಆಗ್ರಾ, ಜೈಪುರ ಘರಾಣಿಗಳಲ್ಲೂ ಪರಿಶ್ರಮ ಪಡೆದರು. ಮೂಲತಃ ನಿಂಬರಗಿಯವರು ವಯೋಲಿನ ವಾದಕರಾದರೂ ಕರ್ನಾಟಕ ಸಂಗೀತವೂ ಸೇರಿದಂತೆ ಸಂಗೀತದ ಹಲವಾರು ಪ್ರಕಾರಗಳಲ್ಲಿ, ತಬಲ ಇತ್ಯಾದಿ ವಾದ್ಯಗಳಲ್ಲಿ ಕೃಷಿ ಮಾಡಿದ್ದಾರೆ. 1947ರಲ್ಲಿ ಮುಂಬಯಿಯ ಆಕಾಶವಾಣಿ ಕೇಂದ್ರದಲ್ಲಿ ನಿಲಯದ ಕಲಾವಿದರಾಗಿ ಸೇವೆಗೆ ಸೇರಿ, ಮೂರು ವರ್ಷಗಳ ನಂತರ ಧಾರವಾಡದ ಆಕಾಶವಾಣಿ ನಿಲಯಕ್ಕೆ ವರ್ಗಾಯಿಸಿಕೊಂಡು ಬಂದರು. ಅಲ್ಲಿ ಅಖಂಡ ಮುವತ್ತು ವರ್ಷಗಳ ಸೇವೆ ಸಲ್ಲಿಸಿ 1977ರಲ್ಲಿ ನಿವೃತ್ತರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದಯ ಶಂಕರ ಪುರಾಣಿಕ ಬರಹಗಾರ

Thu Feb 9 , 2023
ನಮ್ಮ ಆತ್ಮೀಯರೂ ಕನ್ನಡ ತಂತ್ರಜ್ಞಾನದಲ್ಲಿ ಮಹತ್ವದ ಕೊಡುಗೆದಾರರೂ ಆದ ಉದಯ ಶಂಕರ ಪುರಾಣಿಕರ ಜನ್ಮದಿನವಾಗಿದೆ. ಇವರು ಆತ್ಮೀಯ ವಲಯದಲ್ಲಿ ಉದಯ ಪುರಾಣಿಕ್ ಎಂದೇ ಪರಿಚಯಗೊಂಡಿರುವವರು.ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಮಹತ್ವದ ಕುಟುಂಬಗಳಲ್ಲಿ ಪುರಾಣಿಕ್ ಕುಟುಂಬ ಪ್ರಮುಖವಾದುದು. ಶ್ರೀ ಅನ್ನದಾನಯ್ಯ ಪುರಾಣಿಕ್ ಮತ್ತು ಡಾ. ಸಿದ್ಧಯ್ಯ ಪುರಾಣಿಕ್ ಅವರನ್ನು ಈ ಕನ್ನಡ ನಾಡಿನಲ್ಲಿ ಅರಿಯದವರೇ ಇಲ್ಲ. ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ನಾಡಿನ ಏಕೀಕರಣ ಚಳುವಳಿಯ ಪ್ರಮುಖ; ಬರಹಗಾರ, ಅನೇಕ ಸಂಘ […]

Advertisement

Wordpress Social Share Plugin powered by Ultimatelysocial