ರಾಜಕೀಯ ಜಗತ್ತಿಗೆ ಎಂಟ್ರಿ ಕೊಟ್ಟ ನಟಿ ಕಂಗನಾ..! ‘ಆಮ್ ಆದ್ಮಿ ಪಕ್ಷ’ ಸೇರಿಕೊಂಡ ಬೆಡಗಿ!

ಗ್ರೇಟ್ ಗ್ರ್ಯಾಂಡ್ ಮಸ್ತಿ ಎಂಬ ಅಡಲ್ಟ್ ಕಾಮಿಡಿ ಸಿನಿಮಾದ ಮೂಲಕ ಫೇಮಸ್ ಆಗಿರುವ ಕಂಗನಾ ಶರ್ಮಾ ಇದೀಗ ಹರಿಯಾಣದಲ್ಲಿ ಆಮ್ ಆದ್ಮಿ ಪಾರ್ಟಿ ಸೇರಿಕೊಂಡಿದ್ದಾರೆ. ಈ ಅಡಲ್ಟ್ ಕಾಮಿಡಿ ಸಿನಿಮಾದಲ್ಲಿ ಅಫ್ತಾಭ್ ಶಿವದಾಸ್ ಅವರ ನಾದಿನಿ ಪಾತ್ರ ಮಾಡಿದ್ದ ಕಂಗನಾ, ನಂತರ ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದರು.

ಆಮ್ ಆದ್ಮಿ ಪಾರ್ಟಿ ಸೇರುತ್ತಿದ್ದಂತೆಯೇ ಕಂಗನಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ಅದರಲ್ಲೂ ಕಂಗನಾ ಹಾಟ್ ಹಾಟ್ ಫೋಟೋಗಳನ್ನು ಅಭಿಮಾನಿಗಳು ಅಪ್ ಲೋಡ್ ಮಾಡುತ್ತಿದ್ದು, ಆಮ್ ಆದ್ಮಿ ಪಕ್ಷದ ಕುರಿತು ನಾನಾ ರೀತಿಯ ಟ್ರೋಲ್ ಗಳನ್ನೂ ಮಾಡಲಾಗುತ್ತಿದೆ. ತಾವು ಆಮ್ ಆದ್ಮಿ ಪಕ್ಷವನ್ನು ಸೇರಿಕೊಂಡಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಕಂಗನಾ, ‘ನಿಮ್ಮ ಪ್ರೀತಿ ಮತ್ತು ಬೆಂಬಲ ನಿರಂತರವಾಗಿರಲಿ. ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

ಆಮ್ ಆದ್ಮಿ ಪಕ್ಷ ಕೂಡ ತನ್ನ ಅಧಿಕೃತ ಪೇಜ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ. 2016ರಲ್ಲಿ ಬಾಲಿವುಡ್ ಪ್ರವೇಶ ಮಾಡಿರುವ ಈ ನಟಿ, ಆನಂತರ ಸಾಕಷ್ಟು ಚಿತ್ರಗಳಲ್ಲಿ ಮತ್ತು ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಹಾಟ್ ಹಾಟ್ ಪಾತ್ರಗಳಿಗೆ ಸೀಮಿತವಾಗಿ ಉಳಿದರೂ, ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ‘ರಾಮ್ ರತನ್’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೆ, ಮ್ಯೂಸಿಕ್ ವಿಡಿಯೋ ಸಾಂಗ್ ಗಳಿಗೂ ಹೆಜ್ಜೆ ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಕೆಜಿಎಫ್ 2', ರಜನಿ, ವಿಜಯ್, ಅಜಿತ್ ಹಿಂದಿಕ್ಕಿದ ಯಶ್!

Sat May 14 , 2022
  ನಟ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಸಿನಿಮಾದ ಮೂಲಕ ತನ್ನ ವರ್ಚಸ್ಸನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಂಡಿದ್ದಾರೆ. ಯಶ್ ಎಂದರೆ ಈಗ ಎಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಕೆಜಿಎಫ್. ಹೌದು ಕೆಜಿಎಫ್ ಎನ್ನುವ ಸಿನಿಮಾ ಆಗದೇ ಇದ್ದರೆ ಇಂದು ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಾ ಇರಲಿಲ್ಲ. ಇದೇ ಕೆಜಿಎಫ್ ಈಗ ಯಶ್‌ಗೆ ಮತ್ತೊಂದು ಪಟ್ಟ ಕೊಟ್ಟಿದೆ. ಯಶ್ ಹವಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ, ಉತ್ತರ ಭಾರತದಲ್ಲಿಯೂ ಜೋರಾಗಿ ಹಬ್ಬಿದೆ. ‘ಕೆಜಿಎಫ್’ […]

Advertisement

Wordpress Social Share Plugin powered by Ultimatelysocial