‘ಕೆಜಿಎಫ್ 2’, ರಜನಿ, ವಿಜಯ್, ಅಜಿತ್ ಹಿಂದಿಕ್ಕಿದ ಯಶ್!

 

ನಟ ರಾಕಿಂಗ್ ಸ್ಟಾರ್ ಯಶ್, ಕೆಜಿಎಫ್ ಸಿನಿಮಾದ ಮೂಲಕ ತನ್ನ ವರ್ಚಸ್ಸನ್ನು ಸಿಕ್ಕಾಪಟ್ಟೆ ಹೆಚ್ಚಿಸಿಕೊಂಡಿದ್ದಾರೆ. ಯಶ್ ಎಂದರೆ ಈಗ ಎಲ್ಲರಿಗೂ ಗೊತ್ತು. ಅದಕ್ಕೆ ಕಾರಣ ಕೆಜಿಎಫ್. ಹೌದು ಕೆಜಿಎಫ್ ಎನ್ನುವ ಸಿನಿಮಾ ಆಗದೇ ಇದ್ದರೆ ಇಂದು ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಾ ಇರಲಿಲ್ಲ.

ಇದೇ ಕೆಜಿಎಫ್ ಈಗ ಯಶ್‌ಗೆ ಮತ್ತೊಂದು ಪಟ್ಟ ಕೊಟ್ಟಿದೆ.

ಯಶ್ ಹವಾ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೇ, ಉತ್ತರ ಭಾರತದಲ್ಲಿಯೂ ಜೋರಾಗಿ ಹಬ್ಬಿದೆ. ‘ಕೆಜಿಎಫ್’ ಸಿನಿಮಾದ ಮೂಲಕ ಯಶ್ ಅಲ್ಲಿನ ಪ್ರೇಕ್ಷಕರಿಗೆ ರಾಕಿ ಭಾಯ್ ಆಗಿ ಬಿಟ್ಟಿದ್ದಾರೆ. ಕನ್ನಡದಲ್ಲಿ ಹೆಚ್ಚು ಗಳಿಕೆ ಮಾಡಿರುವ ಸಿನಿಮಾ ಸಾಲಿನಲ್ಲಿ ಕೆಜಿಎಫ್ ಮೊದಲಿದೆ. ಹಾಗಾಗಿ ಯಶ್‌ಗೂ ಮೊದಲ ಸ್ಥಾನ. ಆದರೆ ಯಶ್ ತಮಿಳಿನಲ್ಲಿ ಮತ್ತೊಂದು ದಾಖಲೆ ಮಾಡಿದ್ದಾರೆ.

ಹೌದು ಯಶ್ ತಮಿಳಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಲ್ಲಿನ ಸ್ಟಾರ್ ಹೀರೋಗಳನ್ನು ಯಶ್ ಹಿಂದಿಕ್ಕಿದ್ದಾರೆ. ಅದರಲ್ಲೂ ರಜನಿಕಾಂತ್, ವಿಜಯ್ ಮತ್ತು ಅಜಿತ್ ದಾಖಲೆಗಳನ್ನು ಮುರಿದು ಮುಕ್ಕಿದ್ದಾರೆ ಯಶ್. ಹೇಗೆ ಎನ್ನುವುದನ್ನು ಮುಂದೆ ಓದಿ…

ಚೆನ್ನೈ ಬಾಕ್ಸಾಫೀಸ್‌ನಲ್ಲಿ ‘ಕೆಜಿಎಫ್ 2 ‘ಹವಾ!
ಕೆಜಿಎಫ್ 2 ಚಿತ್ರದ ಕ್ರೇಜ್ ತಮಿಳು ನಾಡಿನಲ್ಲಿ ಜೋರಾಗಿದೆ. ಅದರಲ್ಲೂ ಚೆನ್ನೈನಲ್ಲಿ ಕೆಜಿಎಫ್ 2 ಚಿತ್ರಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚು ಜನರಿಂದ ಸಿನಿಮಾ ವೀಕ್ಷಣೆ ಪಡೆದಿದೆ. ಚೆನ್ನೈ ಬಾಕ್ಸಾಫೀಸ್‌ನಲ್ಲಿ ಕೆಜಿಎಫ್ 2 ಕಲೆಕ್ಷನ್ ಜೋರಾಗಿದ್ದು, 10.37 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ರಜನಿಕಾಂತ್, ವಿಜಯ್, ಮತ್ತು ಅಜಿತ್ ಸಿನಿಮಾಗಳನ್ನು ಕೆಜಿಎಫ್ 2 ಹಿಂದಿಕ್ಕಿದೆ.

‘ಬೀಸ್ಟ್’, ‘ವಲಿಮೈ’ ರೆಕಾರ್ಡ್ ಮುರಿದ ಕೆಜಿಎಫ್ 2!

ಚೆನ್ನೈ ನಗರ ಮಾತ್ರದಲ್ಲಿ ರಜನಿಕಾಂತ್ ಅಭಿನಯದ ‘ಅಣ್ಣಾತೆ’ 7 ಕೋಟಿ, ಅಜಿತ್ ಅಭಿನಯದ ‘ವಲಿಮೈ’ 9.47 ಕೋಟಿ, ವಿಜಯ್ ಅಭಿನಯದ ‘ಬೀಸ್ಟ್’ 10.32 ಕೋಟಿ ಕಲೆಕ್ಷನ್ ಮಾಡಿವೆ. ಆದರೆ ಕೆಜಿಎಫ್ 10.30 ಕೋಟಿ ಗಳಿಕೆ ಮಾಡಿದ್ದು, ಇನ್ನು ಗಳಿಕೆ ಮುಂದುವರೆಸಿದೆ. ಈ ಮೂಲಕ ಚೆನ್ನೈ ನಗರದಲ್ಲಿ ಕೆಜಿಎಫ್ 2 ನಂಬರ್ 1 ಆಗಿದೆ. ತಮಿಳಿನ ಹೀರೋಗಳು ಮಾಡದಷ್ಟು ಗಳಿಕೆಯನ್ನು ಚೆನ್ನೈ ನಗರದಲ್ಲಿ ಕನ್ನಡ ಯಶ್ ಮಾಡಿದ್ದಾರೆ.

ತಮಿಳುನಾಡಿನಲ್ಲಿ ‘ಕೆಜಿಎಫ್ 2’ 100 ಕೋಟಿ ಗಳಿಕೆ!

ಚೆನ್ನೈ ನಗರ ಮಾತ್ರವಲ್ಲ ಇಡೀ ತಮಿಳುನಾಡಿನಲ್ಲಿ ಕೆಜಿಎಫ್ 2 ಅಬ್ಬರ ಜೋರಾಗಿದೆ. ತಮಿಳುನಾಡಿನಲ್ಲಿ ಕೆಜಿಎಫ್ 2 100 ಕೋಟಿ ಗಳಿಕೆ ಮಾಡುವ ಮೂಲಕ ಗಮನ ಸೆಳೆದಿದೆ. ಇನ್ನು ತಮಿಳು ನಾಡಿನ ಬಾಕ್ಸಾಫೀಸ್‌ನಲ್ಲಿ 100 ಕೋಟಿ ಗಳಿಕೆ ಕಂಡ ಕನ್ನಡದ ಮೊದಲ ಸಿನಿಮಾ ಕೆಜಿಎಫ್ 2 ಎನ್ನುವ ಹೆಗ್ಗಳೆಕೆ ಚಿತ್ರಕ್ಕಿದೆ. ಇನ್ನೂ ಕೂಡ ‘ಕೆಜಿಎಫ್’ ಕಲೆಕ್ಷನ್ ಬೇಟೆ ಮುಂದುವರೆದಿದೆ. ಹಾಗಾಗಿ ಕೆಜಿಎಫ್ 2 ಅಂತಿಮ ಗಳಿಕೆಯ ಬಗ್ಗೆ ಕುತೂಹಲ ಮೂಡಿದೆ.

ವಿಶ್ವದಾದ್ಯಂತ ಕೆಜಿಎಫ್ 2 ಅಬ್ಬರ!

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕೆಜಿಎಫ್ 2’ ವಿಶ್ವದಾದ್ಯಂತ ಹಲ್‌ಚಲ್ ಎಬ್ಬಿಸಿತ್ತು. ಕಳೆದ 29 ದಿನಗಳಲ್ಲಿ ‘ಕೆಜಿಎಫ್ 2’ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ದಿನದಿಂದ ದಿನಕ್ಕೆ ಗಳಿಕೆಯಲ್ಲಿ ಕೊಂಚ ಕಮ್ಮಿಯಾಗಿದ್ದರೂ, ಅದು ಬೇರೆ ಸಿನಿಮಾಗಳಿಗೆ ಹೋಲಿಸಿದರೆ ಉತ್ತಮ ಗಳಿಕೆ ಎಂದೇ ಹೇಳಬಹುದು. ಈ 29 ದಿನಗಳಲ್ಲಿ ಸಿನಿಮಾದ ಒಟ್ಟು ಗಳಿಕೆ 1175.63 ಕೋಟಿ ಗಳಿಸಿದೆ. ಈ 29 ದಿನಗಳಲ್ಲಿ ‘ಕೆಜಿಎಫ್ 2’ ಗಳಿಕೆ ಹೀಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದಲ್ಲಿ ಅದ್ಧೂರಿಯಾಗಿ ಸನ್ನಿ ಲಿಯೋನಿ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು!

Sat May 14 , 2022
  ಸನ್ನಿ ಲಿಯೋನಿಗೆ ತಮ್ಮದೇ ಆದ ದೊಡ್ಡ ಸಂಖ್ಯೆಯ ಅಭಿಮಾನಿ ಬಳಗವಿದೆ. ಮೆಚ್ಚಿನ ತಾರೆಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಅಭಿಮಾನಿಗಳ ‘ಕರ್ತವ್ಯ’. ಅಂತೆಯೇ ನಟಿ ಸನ್ನಿ ಲಿಯೋನಿಯ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಆಚರಿಸಿದ್ದಾರೆ. ಮಂಡ್ಯದಲ್ಲಿ ಸನ್ನಿ ಲಿಯೋನಿ ಅಭಿಮಾನಿಗಳ ಸಂಘದ ಯುವಕರು ಸನ್ನಿ ಲಿಯೋನಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ಸನ್ನಿಯ ಹುಟ್ಟುಹಬ್ಬಕ್ಕೆಂದು ವಿಶೇಷವಾಗಿ ಬಿರಿಯಾನಿ ಮಾಡಿಸಿ ಎಲ್ಲರಿಗೂ ಹಂಚಿದ್ದಾರೆ. ಮಂಡ್ಯ ಜಿಲ್ಲೆ ಕಸಬಾ ತಾಲ್ಲೂಕಿನ ಕೊಮ್ಮೇರಹಳ್ಳಿಯಲ್ಲಿ ಸನ್ನಿ […]

Advertisement

Wordpress Social Share Plugin powered by Ultimatelysocial